ಮುಂಬೈ:ಅನೈತಿಕ ಸಂಪರ್ಕ, ಲೈಂಗಿಕ ದೌರ್ಜನ್ಯ, ಅತ್ಯಾಚಾರದಂಥ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ನಟಿಯೊಬ್ಬರು ಉದ್ಯಮಿಯೊಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಂಜಾನಿಯಾದ ಅನಿವಾಸಿ ಭಾರತೀಯ ಉದ್ಯಮಿ ವಿರೇನ್ ಪಟೇಲ್ (41) ಆರೋಪಿ. ಈತನ ವಿರುದ್ಧ ನಟಿ ಹಾಗೂ ನಿರೂಪಕಿಯೂ ಆಗಿರುವ 34 ವರ್ಷದ ಮಹಿಳೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ವಾರ ಈ ದೂರು ನೀಡಲಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ:ಡಿ.ಕೆ.ಶಿವಕುಮಾರ್ ‘ಬೊಂಬಾಟ್ ಭೋಜನ’; ‘ಸಿಹಿಕಹಿ’ ಕೈರುಚಿ ಸವಿದ ಡಿಸಿಎಂ
ಮುಂಬೈನ ಅಂಧೇರಿ ಪ್ರದೇಶದಲ್ಲಿ 2022ರ ಅಕ್ಟೋಬರ್​ನಲ್ಲಿ ಫ್ರೆಂಡ್ ಬರ್ತ್​ಡೇ ಪಾರ್ಟಿಯಲ್ಲಿ ನಾನು ವಿರೇನ್​ನನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ. ಆ ದಿನ ನನ್ನ ಕಾಂಟ್ಯಾಕ್ಟ್​ ನಂಬರ್ ತೆಗೆದುಕೊಂಡಿದ್ದ ವಿರೇನ್​, ಬಳಿಕ ಮೆಸೇಜ್-ಕಾಲ್ ಮಾಡಲು ಆರಂಭಿಸಿದ್ದ. ನಂತರ ಸ್ನೇಹಿತರಾದ ನಾವು ಪರಸ್ಪರ ಐಡಿಯಾಗಳನ್ನು ಹಂಚಿಕೊಳ್ಳುತ್ತಿದ್ದೆವು, ಒಬ್ಬರಿಗೊಬ್ಬರು ನೆರವಾಗುತ್ತಿದ್ದೆವು. ಇದರಿಂದ ನಮ್ಮ ನಡುವಿನ ಬಂಧ ಗಾಢವಾಯಿತು ಎಂದು ನಟಿ ದೂರಿನಲ್ಲಿ ವಿವರಿಸಿದ್ದಾರೆ.
ಆತ 2023ರ ಫೆ. 14ರಂದು ನನ್ನನ್ನು ಫ್ಲ್ಯಾಟ್​ಗೆ ಕರೆಸಿಕೊಂಡು ತನ್ನ ಜತೆಗಿರುವಂತೆ ಹೇಳಿದ್ದಲ್ಲದೆ ಮದುವೆ ಆಗುವುದಾಗಿ ಪ್ರಪೋಸ್ ಮಾಡಿದ. ನಾವಿಬ್ಬರೂ ಸಿಂಗಲ್ ಆಗಿದ್ದರಿಂದ ಹಾಗೂ ಇಬ್ಬರೂ ಗುಜರಾತಿ ಸಮುದಾಯದವರೇ ಆಗಿರುವುದರಿಂದ ನಾನು ಒಪ್ಪಿದ್ದು, ನನ್ನ ಮನೆಯವರಿಗೂ ವಿಷಯ ತಿಳಿಸಿದ್ದೆ ಎಂದೂ ನಟಿ ವಿವರಿಸಿದ್ದಾರೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ನಂತರ ಇದೇ ಮಾರ್ಚ್ 28ರಂದು ಪಾನಮತ್ತನಾಗಿ ಮನೆಗೆ ಬಂದಿದ್ದ ವಿರೇನ್ ಕೊಠಡಿಗೆ ಹೋಗಿ ಮಲಗಿದ್ದ. ಸ್ವಲ್ಪ ಹೊತ್ತಿನ ಬಳಿಕ ನನ್ನ ಬೆಡ್​ರೂಮ್​ಗೆ ಬಂದ ವಿರೇನ್, ನನ್ನನ್ನು ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ನನ್ನ ಬೆಡ್​ನಲ್ಲೇ ಮಲಗಿದ. ನಂತರ ಎಚ್ಚರಗೊಂಡ ಆತ ನನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ. ರಾತ್ರಿ ಆಗಿದ್ದರ ಕುರಿತು ನಾನು ಬೆಳಗ್ಗೆ ಅಳುತ್ತಿದ್ದಾಗ, ಡಿಸೆಂಬರ್​ನಲ್ಲಿ ನಾವು ಮದುವೆ ಆಗಲಿದ್ದೇವಲ್ಲ ಎಂದು ಹೇಳಿ ಸಂತೈಸಿದ್ದ ಎಂದೂ ನಟಿ ವಿವರಿಸಿದ್ದಾರೆ.
ಇದನ್ನೂ ಓದಿ:ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ಏಪ್ರಿಲ್ 11ರಂದು ನನ್ನನ್ನು ಅಲಿಬಾಗ್​ನಲ್ಲಿರುವ ಆತನ ಗೆಳೆಯನ ಫಾರ್ಮ್​ಹೌಸ್​ಗೆ ಕರೆದೊಯ್ದಿದ್ದ ವಿರೇನ್​, ಅಲ್ಲಿ ಕೂಡ ನನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಲು ಮುಂದಾದ. ನಾನು ನಿರಾಕರಿಸಿದ್ದಕ್ಕೆ, ನನಗೆ ಹೊಡೆದು ಹಿಂಸಿಸಿದ. ಇದೇ ರೀತಿ ಆತ ನನ್ನೊಂದಿಗೆ ಹಲವು ಬಾರಿ ನಡೆದುಕೊಂಡಿದ್ದ ಎಂದು ನಟಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಮುಂಬೈನ ಎನ್​ಎಂ ಜೋಶಿಮಾರ್ಗ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. –ಏಜೆನ್ಸೀಸ್
ನಿದ್ರಿಸಲು ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಕೇಸು ದಾಖಲಿಸಬಹುದಾ?

ಇನ್ನು ಜನನ ಪ್ರಮಾಣಪತ್ರವೇ ಎಲ್ಲದಕ್ಕೂ ದಾಖಲೆ; ಸಂಸತ್ತಲ್ಲಿ ಮಹತ್ವದ ಮಸೂದೆ ಅಂಗೀಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
