ಲಖನೌ:ಮದರಸಾ ಶಿಕ್ಷಕನೊಬ್ಬ ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ಲೈಂಗಿಕವಾಗಿ ಶೋಷಿಸಿದ ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಶೀಶ್​ಗಡ್ ಪೊಲೀಸರು ಶಿಕ್ಷಕನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.
ಸಂತ್ರಸ್ತ ಮಹಿಳೆಯು ನಾಲ್ಕು ವರ್ಷಗಳ ಹಿಂದೆ ಪ್ರದೇಶದ ಮದರಸಾಗೆ ಹೋಗಿದ್ದು, ಆರೋಪಿಯು ಆಕೆಯ ಜೊತೆಗೆ ಓದುತ್ತಿದ್ದ. ಆತ ನಂತರ ಮದರಸಾದಲ್ಲೇ ಶಿಕ್ಷಕನಾಗಿ ಸೇರಿಕೊಂಡಿದ್ದು, ಇಬ್ಬರಿಗೂ ಪ್ರೇಮಾಂಕುರವಾಯಿತು. ಮದುವೆಯಾಗುವುದಾಗಿ ನಂಬಿಸಿದ ಆತ ಮತ್ತೆ ಮತ್ತೆ ಲೈಂಗಿಕವಾಗಿ ಶೋಷಿಸಿದ್ದು, ಇದರಿಂದಾಗಿ ಒಮ್ಮೆ ಗರ್ಭಪಾತ ಕೂಡ ಒಳಗೊಂಡಿರುವುದಾಗಿ ಸಂತ್ರಸ್ತೆಯು ದೂರಿನಲ್ಲಿ ಹೇಳಿದ್ದಾಳೆ.
ಇದನ್ನೂ ಓದಿ:ಡೆತ್​ನೋಟ್​ನಲ್ಲಿ ನಾಲ್ವರ ಹೆಸರು ಬರೆದು ಯುವತಿ ಆತ್ಮಹತ್ಯೆ! ಮದ್ವೆ ಆಗಬೇಕಿದ್ದವಳ ಬಾಳಿಗೆ ಕೊಳ್ಳಿ ಇಟ್ಟಿದ್ಯಾರು?
ನಂತರದಲ್ಲಿ ಮದುವೆಯಾಗಲು ಕೇಳಿಕೊಂಡು ಆತನ ಮನೆಗೆ ಹೋದ ಸಂತ್ರಸ್ತೆಗೆ ಆರೋಪಿಯು ಪ್ರಾಣ ಬೆದರಿಕೆ ಹಾಕಿ, ಅಲ್ಲಿಂದ ಹೊರಟುಹೋಗುವಂತೆ ಎಚ್ಚರಿಕೆ ನೀಡಿದ ಎಂದೂ ಆರೋಪಿಸಲಾಗಿದೆ. ಆರೋಪಿ ಶಿಕ್ಷಕನ ಮೇಲೆ ರೇಪ್​ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ರೋಹಿತ್​ ಸಿಂಗ್ ಸಜ್ವಾನ್ ತಿಳಿಸಿದ್ದಾರೆ.(ಏಜೆನ್ಸೀಸ್)
ಶಾರುಖ್​ ಪುತ್ರನ​ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ

‘ಲಖೀಂಪುರ್​ ಆಧಾರದಲ್ಲಿ ವಿರೋಧ ಪಕ್ಷಗಳ ಪುನಶ್ಚೇತನ ಯತ್ನಕ್ಕೆ ನಿರಾಶೆ ಕಾದಿದೆ’ ಎಂದ ಪ್ರಶಾಂತ್​ ಕಿಶೋರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 4 =
Remember me
