ಕೊಚ್ಚಿ (ಕೇರಳ):ಸನ್ಯಾಸಿನಿ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತು ಜಾಮೀನು ಪಡೆದುಕೊಂಡಿದ್ದ ಕೇರಳದ ಬಿಷಪ್ ಫ್ರಾಂಕೋ ಮುಳ್ಳಕಾಲ್‌ಗೆ ನೀಡಿದ್ದ ಜಾಮೀನನ್ನು ಇದೀಗ ರದ್ದುಪಡಿಸಿರು ಕೋರ್ಟ್‌, ಇವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಿದೆ.
ಜಾಮೀನು ನೀಡಿಕೆ ಸಂದರ್ಭದಲ್ಲಿ, ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಷರತ್ತು ಮೀರಿ ಒಮ್ಮೆಯೂ ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ, ಜಾಮೀನನ್ನು ರದ್ದುಪಡಿಸಲಾಗಿದೆ. ಅವರನ್ನು ಕೂಡಲೇ ಅರೆಸ್ಟ್‌ ಮಾಡುವ ಸಂಬಂಧ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಲಾಗಿದೆ. ಇದರ ಅರ್ಥ ಇನ್ನು ಅವರು ತಮಗೆ ಜಾಮೀನು ನೀಡುವಂತೆ ಕೋರುವಂತಿಲ್ಲ. ಕೋರ್ಟ್‌ಗೆ ಕಡ್ಡಾಯವಾಗಿ ಹಾಜರಾಗಬೇಕಿದೆ.
ಇದನ್ನೂ ಓದಿ:‘ಸ್ವಪ್ನ ಸುಂದರಿ’ ತಂದ ಆಪತ್ತು- ಕೇರಳ ಸಿಎಂ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ನಿರ್ಧಾರಪ್ರಕರಣದ ವಿಚಾರಣೆ ನಡೆಸಿದ ಕೊಟ್ಟಾಯಂ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ1ರಿಂದ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಆದರೆ ಬಿಷಪ್‌ ಒಮ್ಮೆಯೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಕೋರ್ಟ್‌ ಜಾಮೀನು ರದ್ದು ಮಾಡಿದೆ.
ಸದ್ಯ ಪಂಜಾಬ್‌ನಲ್ಲಿ ಇರುವ ಬಿಷಪ್‌, ಕಂಟೈನ್ಮೆಂಟ್‌ ಝೋನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಆದ್ದರಿಂದ ನ್ಯಾಯಾಲಯಕ್ಕೆ ಬರಲು ಆಗುತ್ತಿಲ್ಲ ಎಂದು ಅವರ ಪರ ವಕೀಲ ವಾದಿಸಿದ್ದರು.ಆದರೆ, ಫ್ರಾಂಕೋ ಜಲಂಧರ್‌ನಲ್ಲಿ ವಾಸಿಸುತ್ತಿರುವ ಪ್ರದೇಶ ಕಂಟೈನ್ಮೆಂಟ್‌ ಝೋನ್‌ಗೆ ಒಳಪಡಲ್ಲ ಎಂದು ಪ್ರತಿವಾದಿ ವಾದಿಸಿದ್ದರಿಂದ ಕೋರ್ಟ್‌ ಈ ಆದೇಶ ಹೊರಡಿಸಿದೆ.
ಫ್ರಾಂಕೋ ಮುಳ್ಳಕಾಲ್‌ ಅವರು 2014 ರಿಂದ 2016ರ ನಡುವೆ ತಮ್ಮ ಮೇಲೆ 13 ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿಯೊಬ್ಬರು ಆರೋಪ ಮಾಡಿದ್ದರು. ರಾಜಕೀಯ ಮತ್ತು ಹಣ ಬಲದಿಂದ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿರುವ ಅವರನ್ನು ಶಿಕ್ಷಿಸಿ, ತನಗೆ ನ್ಯಾಯ ಒದಗಿಸಲು ಮಧ್ಯ ಪ್ರವೇಶ ಮಾಡಬೇಕು ಎಂದು ವ್ಯಾಟಿಕನ್‌ಗೂ ಮನವಿ ಸಲ್ಲಿಸಿದ್ದರು.
ಕೇರಳ ಹೈಕೋರ್ಟ್‌ 2018ರಲ್ಲಿ ಷರತ್ತುಬದ್ಧ ಜಾಮೀನನ್ನು ನೀಡಿತ್ತು.
ಸೋಂಕಿನ ಮಾದರಿ ಕೊಟ್ಟು ಅಡ್ಡಾಡುವಂತಿಲ್ಲ: ಏನಿದು ಹೊಸ ಆದೇಶ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 1 =
Remember me
