ಬಲಿಯಾ:ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದಿದೆ ಎನ್ನಲಾದ ಗ್ಯಾಂಗ್​ರೇಪ್​ ಪ್ರಕರಣವು ದೇಶಾದ್ಯಂತ ಆಕ್ರೋಶದ ಕಿಚ್ಚು ಹಚ್ಚಿದ್ದು, ಇದರ ನಡುವೆ ಆಡಳಿತಾರೂಢ ಬಿಜೆಪಿ ಶಾಸಕ ನೀಡಿರುವ ಹೇಳಿಕೆಯೊಂದು ವಿವಾದವನ್ನು ಹುಟ್ಟುಹಾಕಿದೆ.
ಬಲಿಯಾ ಕ್ಷೇತ್ರದ ಶಾಸಕ ಸುರೇಂದ್ರ ಸಿಂಗ್​ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಾನು ಶಾಸಕನಾಗಿರುವುದರ ಜತೆಗೆ ಓರ್ವ ಶಿಕ್ಷಕನು ಹೌದು. ಉತ್ತಮ ಆಡಳಿತವಾಗಲಿ ಅಥವಾ ತಲ್ವಾರ್​ನಿಂದಾಗಲಿ ರೇಪ್​ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ. ಬದಲಾಗಿ ಉತ್ತಮ ಸಂಸ್ಕಾರದಿಂದ ಮಾತ್ರ ಇಂತಹ ಪ್ರಕರಣಗಳನ್ನು ನಿಲ್ಲಿಸಬಹುದು. ಹೀಗಾಹಿ ಎಲ್ಲ ತಂದೆ-ತಾಯಂದಿರು ತಮ್ಮ ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಸ್ಕೃತಿಯನ್ನು ಕಲಿಸಿ ಉತ್ತಮ ಮೌಲ್ಯಗಳನ್ನು ಬೆಳೆಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:ರಚಿತಾ ಅಕೌಂಟ್​ಗೆ ಇನ್ನೆರಡು: ಹುಟ್ಟುಹಬ್ಬಕ್ಕೆ ಫಸ್ಟ್​ಲುಕ್​ಗಳ ಉಡುಗೊರೆ
ಮುಂದುವರಿದು ಮಾತನಾಡಿ, ಇದು ನನ್ನ ಧರ್ಮವೂ ಹೌದು, ಸರ್ಕಾರದ ಕರ್ತವ್ಯವೂ ಸರಿಯೇ, ಹಾಗೆಯೇ ಕುಟುಂಬದ ಧರ್ಮವೂ ಇದೆ. ರಕ್ಷಣೆಗೆ ಸರ್ಕಾರ ಬದ್ಧವಾಗಿರುವಾಗ ಕುಟುಂಬವೂ ಸಹ ತಮ್ಮ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ತಿಳಿಸಲು ಬದ್ಧವಾಗಿರಬೇಕು. ಸಂಸ್ಕಾರ ಮತ್ತು ಸರ್ಕಾರ ಭವ್ಯ ಭಾರತವನ್ನು ನಿರ್ಮಿಸಬಹುದೇ ಹೊರತು ಇದಕ್ಕೆ ಯಾವುದೇ ಆಯ್ಕೆ ಇಲ್ಲ ಎಂದು ಹೇಳಿದರು.
ಇನ್ನು ಶಾಸಕ ಸುರೇಂದ್ರ ಸಿಂಗ್​ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಸಿದ್ಧಿ ಪಡೆದವರು. ಕಳೆದ ವರ್ಷ ಗಾಂಧೀಜಿ ಕೊಂದ ನಾಥೂರಾಮ್​ ಗೂಡ್ಸೆ ಉಗ್ರನಲ್ಲ ಎಂದು ವಿವಾದ ಸೃಷ್ಟಿಸಿದ್ದರು. ಹೀಗೆ ಸಾಕಷ್ಟು ಬಾರಿ ತಮ್ಮ ಹೇಳಿಕೆಗಳಿಂದ ಸುರೇಂದ್ರ ಸಿಂಗ್​ ಜನರ ಆಕ್ರೋಶಕ್ಕೂ ಗುರಿಯಾಗಿದ್ದಾರೆ.
ಇನ್ನು ಹತ್ರಾಸ್​ ಗ್ಯಾಂಗ್​ರೇಪ್​ ಪ್ರಕರಣಕ್ಕೆ ಸಂಬಂಧಸಿದಂತೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗುತ್ತದೆ. ಅಲ್ಲದೆ, ಪೊಲೀಸರ ನಡೆದುಕೊಂಡ ರೀತಿಗೆ ಇಡೀ ದೇಶವೇ ಛೀಮಾರಿ ಹಾಕುತ್ತಿದೆ.(ಏಜೆನ್ಸೀಸ್​)
ಡೊನಾಲ್ಡ್​ ಟ್ರಂಪ್​ ದಾಖಲಾಗಿರುವ ಆಸ್ಪತ್ರೆ ಬಳಿ ಅನುಮಾನಾಸ್ಪದ ಬ್ಯಾಗ್​ ಪತ್ತೆ..!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen − 12 =
Remember me
