ಮುಂಬಯಿ:ನವಿ ಮುಂಬಯಿಯ ಪನ್ವೇಲ್‌ನಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ಕರೊನಾ ದೃಢಪಟ್ಟಿರುವ 40 ವರ್ಷದ ಮಹಿಳೆಯ ಮೇಲೆ 25 ವರ್ಷದ ಯುವಕನೊಬ್ಬ ಅತ್ಯಾಚಾರ ಮಾಡಿರುವ ಆಘಾತಕಾರಿ ಪ್ರಕರಣ ನಡೆದಿದೆ.
ಶುಭಂ ಖಾತು ಎಂಬ ಹೆಸರಿನ ಈ ಯುವಕ ತಾನು ವೈದ್ಯ ಎಂದು ಹೇಳಿಕೊಂಡು ನಿನ್ನೆ ಸಂಜೆ ಕ್ವಾರಂಟೈನ್ ಕೇಂದ್ರದಲ್ಲಿರುವ ಈ ಮಹಿಳೆಯ ಕೊಠಡಿಯನ್ನು ಪ್ರವೇಶಿಸಿದ್ದ. ಕರೊನಾ ಲಕ್ಷಣಗಳೇನಾದರೂ ಇವೆಯೇ ಎಂದು ಈ ಮಹಿಳೆಯನ್ನು ವಿಚಾರಿಸಿದ. ಮೈಕೈ ನೋವು ಇದೆಯೆಂದು ಆಕೆ ಹೇಳಿದಳು. ಆಕೆಯ ಕೋವಿಡ್-19 ವರದಿಗಳನ್ನೆಲ್ಲ ಒಮ್ಮೆ ನೋಡಿ, ಆಕೆಗೆ ಮಸಾಜ್‌ನ ಅವಶ್ಯಕತೆ ಇದೆಯೆಂದು ಹೇಳಿದ. ಆತ ವೈದ್ಯನೆಂದು ಹೇಳಿದ್ದರಿಂದ ಆಕೆಗೆ ಸಂಶಯ ಬರಲಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡು ಆತ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ:ಪಾಸಿಟಿವ್‌ ರಿಪೋರ್ಟ್‌ ಇಟ್ಕೊಂಡು ವಿಮಾನದಲ್ಲಿ ಮೂರು ರಾಜ್ಯ ಸುತ್ತಿದ ಭೂಪ!
ಇಂದು ಬೆಳಗಿನ ಜಾವ ಆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ಫೂಟೇಜ್ ಆಧರಿಸಿ ಪೊಲೀಸರು ಆತನನ್ನು ಗುರುತಿಸಿದ್ದಾರೆ. ಪನ್ವೇಲ್ ತಾಲೂಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ಆತನನ್ನೂ ಈಗ ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಬೇರೊಂದು ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿದೆ. ಇನ್ನೂ ವರದಿ ಬಂದಿಲ್ಲ. ವರದಿಯನ್ನು ಆಧರಿಸಿ, ಆತನ ಬಂಧನ ಮತ್ತು ನ್ಯಾಯಾಧೀಶರ ಎದುರು ಹಾಜರುಪಡಿಸುವ ಕುರಿತು ನಿರ್ಧರಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಫೇಸ್‌ಬುಕ್‌ ಗೆಳತಿಗಾಗಿ ಪಾಕ್‌ಗೆ ಹೊರಟು ಗಡಿಯಲ್ಲಿ ಸಿಕ್ಕಿಬಿದ್ದ ಪ್ರೇಮಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 20 =
Remember me
