ಗುರುಗ್ರಾಮ:ಆಕೆ 14ರ ಬಾಲಕಿ. ಆಕೆಯ ಬಾಳಿನಲ್ಲಿ ಅದೆಲ್ಲವೂ ನಡೆಯದಿದ್ದರೆ ಉಂಡಾಡಿಕೊಂಡು ಗೆಳತಿಯರೊಂದಿಗೆ ಸಂತೋಷದಿಂದ ಇರುತ್ತಿದ್ದಳೇನೋ. ಆದರೆ ಆ ವಿಧಿ ಇವಳ ಬಾಳಲ್ಲಿ ಆಡಿದ ಆಟವೇ ಬೇರೆ.ಉದ್ಯಾನವೊಂದರಲ್ಲಿ ಗೆಳೆತಿಯರೊಂದಿಗೆ ಆಟವಾಡಲು ಹೋದಾಕೆಗೆ ಅಲ್ಲಿದ್ದ ಪುಂಡರ ಗುಂಪೊಂದು ಮಾದಕ ದ್ರವ್ಯ ನೀಡಿ ಅರಿವು ತಪ್ಪಿಸಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಪರಿಣಾಮ ಆಕೆ ಈಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಗುರುಗ್ರಾಮದ ಸೆಕ್ಟರ್ 10 ಎ ಸಿವಿಲ್ ಆಸ್ಪತ್ರೆಯಲ್ಲಿ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಇದನ್ನೂ ಓದಿ:ತಮಿಳುನಾಡಿನ 14ರ ಬಾಲೆ ಆತ್ಮಹತ್ಯೆಯ ನಾಟಕ ಆಡಿದ್ದು ಏಕೆ?
ಸಮಾಜಕ್ಕೆ ಹೆದರಿ ಆಕೆಯ ಕುಟುಂಬವು ಮಗುವನ್ನು ಇಟ್ಟುಕೊಳ್ಳಲು ನಿರಾಕರಿಸಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಕೂಡ ಮಗುವನ್ನು ಇಟ್ಟುಕೊಳ್ಳಲು ನಿರಾಕರಿಸಿದರೆ ನವಜಾತ ಶಿಶುವನ್ನು ಅನಾಥಾಶ್ರಮಕ್ಕೆ ಕಳುಹಿಸಲಾಗುತ್ತದೆ.ಅಪ್ರಾಪ್ತ ಹುಡುಗಿ ತನ್ನ ತಾಯಿ ಮತ್ತು ಸಹೋದರನೊಂದಿಗೆ ಗುರುಗ್ರಾಮದಲ್ಲಿ ವಾಸಿಸುತ್ತದ್ದಳು. ಈ ಕುಟುಂಬವು 2016 ರಲ್ಲಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಿಂದ ನಗರಕ್ಕೆ ಸ್ಥಳಾಂತರಗೊಂಡಿತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಯಾರೋ ಆಕೆಗೆ ಮಾದಕ ದ್ರವ್ಯ ನೀಡಿ ಮತ್ತು ಅತ್ಯಾಚಾರ ವೆಸಗಿದ್ದರು. ಆಕೆ ಗರ್ಭಿಣಿಯಾದ ಕುರಿತು ತಿಳಿದಿರಲಿಲ್ಲ ಎಂದು ಆಕೆಯ ಕುಟುಂಬ ಸದಸ್ಯರು ಹೇಳಿದ್ದಾರೆ. ಶುಕ್ರವಾರ, ಆಕೆಗೆ ಹೆರಿಗೆ ನೋವು ಶುರುವಾಗಿತ್ತು, ಅದರ ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಇದನ್ನು  ಓದಿ:ಧಾರಾಕಾರ ಮಳೆಯಲ್ಲಿ ತೆರೆದ ಮ್ಯಾನ್​ಹೋಲ್​ ಬಳಿ 7 ತಾಸು ನಿಂತ ಈ ಮಹಿಳೆಗೊಂದು ಸೆಲ್ಯೂಟ್…
2019 ರ ಅಕ್ಟೋಬರ್‌ ನ ಅದೊಂದು ದಿನ ಬಾಲಕಿ ಮತ್ತು ಅವಳ ಸ್ನೇಹಿತರು ಉದ್ಯಾನವನವೊಂದರಲ್ಲಿ ಆಟವಾಡುತ್ತಿದ್ದಾಗ ಅಲ್ಲಿ ಆರು ಹುಡುಗರು ಇದ್ದರು. ಅವಳಿಗೆ ಮಾದಕ ದ್ರವ್ಯ ನೀಡಲಾಯಿತು. ಪಾನೀಯ ಕುಡಿದ ನಂತರ ಅವಳು ಪ್ರಜ್ಞೆ ಕಳೆದುಕೊಂಡಳು. ಮಹಿಳೆಯೊಬ್ಬಳು ಉದ್ಯಾನವನದಲ್ಲಿ ಬಾಲಕಿ ಮಲಗಿರುವುದನ್ನು ಕಂಡು ಅವಳನ್ನು ಎಚ್ಚರಗೊಳಿಸಿದಳು. ಅವಳು ಮನೆಗೆ ಹಿಂತಿರುಗಿ ಹೋದಾಗ ರಕ್ತಸಿಕ್ತ ಬಟ್ಟೆಯನ್ನು ನೋಡಿದಳು. ಮನೆಯವರು ಗದರಿಸಬಹುದೆಂದು ಹೆದರಿ, ಹುಡುಗಿ ತನ್ನ ಬಟ್ಟೆಗಳನ್ನು ತೊಳೆದುಕೊಂಡಳಷ್ಟೇ. ತಾಯಿಯೊಂದಿಗೆ ಏನನ್ನೂ ಹಂಚಿಕೊಳ್ಳಲಿಲ್ಲ. ಇಷ್ಟೆಲ್ಲವನ್ನೂ ಈಗ ಬಾಲಕಿ ತನ್ನ ಕಾನೂನು ಸಲಹೆಗಾರರಿಗೆ ತಿಳಿಸಿದ್ದಾಳೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಪೋಕ್ಸೋ ಕಾಯ್ದೆಯಡಿ ಎಫ್​ಐಆರ್ ದಾಖಲಿಸಲಾಗಿದೆ, ಆದರೆ ಆರೋಪಿ ಯಾರೆಂದು ಈವರೆಗೂ ಗುರುತಿಸಲಾಗಿಲ್ಲ. ಬಾಲಕಿಯಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕ್​ ಕಳವು ಮಾಡಲು ಬಂದ, ಆಕಸ್ಮಿಕವಾಗಿ ತನ್ನ ಕತ್ತನ್ನೇ ಕೊಯ್ದುಕೊಂಡ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + one =
Remember me
