ಬೆಂಗಳೂರು:ಚಿಕ್ಕವಳಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದಳು. ಕೊನೆಗೆ ಕುಡುಕ ತಂದೆಗೂ ಬೇಡವಾಗಿ, ಕಾಮಪಿಪಾಸುಗಳ ತೃಷೆಗೆ ಸರಕಾದಳು….
ಇಂಥದ್ದೊಂದು ಹೃದಯವಿದ್ರಾವಕ ಹಾಗೂ ಕರುಣಾಜನಕ ಕಥೆಗೆ ರಾಜಧಾನಿಯೇ ವೇದಿಕೆ. ಇಲ್ಲಿನ ಸುಬ್ರಹ್ಮಣ್ಯಪುರದ ಕೊಳೆಗೇರಿಯಲ್ಲಿ ತಂದೆಯೊಂದಿಗೆ ವಾಸವಾಗಿದ್ದ ಬಾಲಕಿಗೀಗ 15 ವರ್ಷ. ಏಳನೇ ತರಗತಿ ಬಳಿಕ ಶಾಲೆ ಬಿಟ್ಟಿದ್ದಳು. ಕುಡುಕನಾಗಿದ್ದ ತಂದೆಗೆ ಮಗಳ ಬಗ್ಗೆ ಯೋಚನೆಯೇ ಇರಲಿಲ್ಲ. ಹೀಗಾಗಿ ದಿಕ್ಕಿಲ್ಲದಂತಾದ ಹುಡುಗಿಗೆ ಚಾಕ್​ಲೇಟ್​ ಹಾಗೂ ಊಟ ಹಾಗೂ ವಿವಿಧ ವಸ್ತುಗಳ ಆಮಿಷವೊಡ್ಡಿ ಸ್ವತಃ ಚಿಕ್ಕಪ್ಪ ಹಾಗೂ ಇನ್ನಿಬ್ಬರು ದುರುಳರು ಲೈಂಗಿಕ ತೃಷೆ ತೀರಿಸಿಕೊಂಡಿದ್ದಾರೆ.
ಇದನ್ನೂ ಓದಿ;ಎರಡೂವರೆ ತಿಂಗಳ ಹೆಣ್ಣುಮಗು ಅಳುವ ಸದ್ದೇ ಇರಲಿಲ್ಲ; ಲಾಕ್​ಡೌನ್​ನಿಂದಾಗಿ ಹೆತ್ತಮ್ಮ ಮಾಡಿದ್ದೇನು?
ಆಕೆಯ ಚಿಕ್ಕಪ್ಪ ಕುಡಿದು ಬಂದು ಅತ್ಯಾಚಾರ ನಡೆಸಿದ್ದಾನೆ. ಇದನ್ನು ತಂದೆಗೆ ಹೇಳಿದರೆ, ಆತ ನಿರ್ಲಕ್ಷಿಸಿದ್ದಾನೆ. ಹೀಗಾಗಿ ಹಲವಾರು ಬಾರಿ ಈಕೆ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ಇದರ ಫಲವಾಗಿಯೇ ತಾನು ಗರ್ಭಿಣಿಯಾಗಿರುವುದು ಈ ಬಾಲಕಿಗೆ ತಿಳಿದಿರಲಿಲ್ಲ.
ಲಾಕ್​ಡೌನ್​ ಶುರುವಾದ ಎರಡು ದಿನಗಳ ನಂತರ ಅಂದರೆ, ಮಾರ್ಚ್​ 25 ರಂದು ಕುಮಾರಸ್ವಾಮಿ ಲೇಔಟ್​ ಪಾರ್ಕ್​ ಬಳಿ ಹೋಗುತ್ತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡು ಬಾಲಕಿ ಸುಸ್ತಾಗಿ ಬಿದ್ದಿದ್ದಾಳೆ. ಅಲ್ಲಿಯೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ದಾರಿಹೋಕರೊಬ್ಬರು ಇದನ್ನು ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಲಕಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಮಗು ತೀರಿಕೊಂಡಿದೆ.ಪೊಲೀಸರು ಈಕೆಯ ಚಿಕ್ಕಪ್ಪ ಸೇರಿ ಮೂವರನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ;ದೆಹಲಿ ಆಸ್ಪತ್ರೆಗಳು ಸ್ಥಳೀಯರಿಗಷ್ಟೇ ಮೀಸಲು; ತಜ್ಞರ ಸಮಿತಿ ಶಿಫಾರಸು; ಅನುಷ್ಠಾನಕ್ಕೆ ಮುಂದಾದ ಸರ್ಕಾರ
‘ಪರಿಹಾರ’ ಮಕ್ಕಳ ಸಹಾಯವಾಣಿ ಕೇಂದ್ರ ಈಕೆಗೆ ಆಪ್ತ ಸಮಾಲೋಚನೆ ನೀಡಿ ಆಶ್ರಯ ಕಲ್ಪಿಸಲು ಶ್ರಮಿಸಿದೆ. ಸದ್ಯ ಈಕೆ ಸರ್ಕಾರಿ ಮಕ್ಕಳ ಆಶ್ರಯ ಕೇಂದ್ರದಲ್ಲಿದ್ದಾಳೆ. ಓದನ್ನು ಮುಂದುವರಿಸಲು ಇಚ್ಛಿಸಿದ್ದಾಳೆ. ಶಾಲೆ ಶುರುವಾಗುವುದನ್ನೇ ಕಾಯುತ್ತಿದ್ದು, ಹೊಸ ಬದುಕು ಕಟ್ಟಿಕೊಳ್ಳುವ ಕನಸು ಹೊಂದಿದ್ದಾಳೆ.
ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಈ ಸುಂದರಿಯನ್ನು ಮಂಚಕ್ಕೆ ಕರೆದಿದ್ದರಂತೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
