ಬೆಂಗಳೂರು:ರ್‍ಯಾಪಿಡೋ ಬೈಕ್​ ಚಾಲಕನೋರ್ವ ಮಹಿಳಾ ಪ್ರಯಾಣಿಕರ ಎದುರಲ್ಲೇ ಅಸಭ್ಯವಾಗಿ ವರ್ತಿಸಿ ಬಳಿಕ ಅವರ ವಾಟ್ಸ್​ಅಪ್​ಗೆ ಮೆಸ್ಸೇಜ್​ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಎಸ್​ಜೆ ಪಾರ್ಕ್​ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆರೋಪಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಈ ಕುರಿತು ಟ್ವೀಟ್​ ಮಾಡಿರುವ ಸಂತ್ರಸ್ತ ಮಹಿಳೆ ಜುಲೈ 21ರಂದು ಗಲಭೆ ಪೀಡಿತ ಮಣಿಪುರದಲ್ಲಿ ಬುಡಕಟ್ಟು ಸಮುದಾಯದ ಹೆಣ್ಣುಮಕ್ಕಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಟೌನ್​ಹಾಲ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಬಳಿಕ ಮಹಿಳೆ ಎಲೆಕ್ಟ್ರಾನಿಕ್ ಸಿಟಿಗೆ ಆಟೋ ಬುಕ್​ ಮಾಡಿದ್ದು ಅವರು ಆರ್ಡರ್​ ಕ್ಯಾನ್ಸಲ್​ ಮಾಡಿದ್ದಾರೆ.
ಬಳಿಕ ರ್‍ಯಾಪಿಡೋನಲ್ಲಿ ಬೈಕ್​ ಟ್ಯಾಕ್ಸಿ ಬುಕ್​ ಮಾಡಿದ್ದು, ಆರೋಪಿಯೂ ಮಹಿಳಾ ಪ್ರಯಾಣಿಕರನ್ನು ಮಾರ್ಗಮಧ್ಯೆ ನಿರ್ಜನ ಪ್ರದೇಶದಕ್ಕೆ ಕರೆದೊಯ್ದು ಅವರ ಮುಂಭಾಗ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಮಹಿಳೆ ತಮ್ಮ ಮನೆ 200 ಮೀಟರ್​ ದೂರ ಇರಬೇಕಾದರೆ ಗಾಡಿಯನ್ನು ನಿಲ್ಲಿಸುವಂತೆ ಸೂಚಿಸಿದ್ದರು ಸಹ ಆತ ಅವರ ಮಾತನ್ನು ಕೇಳದೆ ಅವರ ನಿವಾಸದ ಮುಂಭಾಗ ತೆರಳಿದ್ದಾನೆ.
ಇದನ್ನೂ ಓದಿ:VIDEO| ಹೆಣ್ಣಿಗೆ ಹೆಣ್ಣೇ ಶತ್ರು; ಮಹಿಳೆಯರ ಬೆತ್ತಲೆ ಮೆರವಣಿಗೆ
I asked him to drop me 200 meters before my actual destination to conceal my home location. Once the ride was over, he started relentlessly calling and messaging me on WhatsApp. I had to block his number to stop the harassment.
ಬಳಿಕ ಆರೋಪಿಯೂ ಅವರ ವೈಯಕ್ತಿಕ ದೂರವಾಣಿ ನಂಬರ್​ಗೆ ಕರೆ ಮಾಡಲು ಶುರು ಮಾಡಿದ್ದು, ವಾಟ್ಸ್​ಅಪ್​ನಲ್ಲಿ ಮೆಸ್ಸೇಜ್​ ಮಾಡಿದ್ದಾನೆ. ಈ ಸಂಬಂಧ ಮಹಿಳೆ ಎಚ್ಚರಿಕೆ ನೀಡಿದ್ದರು ಸಹ ಆತ ಮೆಸ್ಸೇಜ್​ ಮತ್ತು ಕರೆ ಮಾಡುವುದನ್ನು ನಿಲ್ಲಿಸದೆ ಇರುವುದನ್ನು ನೋಡಿ ಬ್ಲಾಕ್​ ಮಾಡಿದ್ದಾರೆ.
ಈ ಸಂಬಂಧ ಮಹಿಳೆ ಟ್ವೀಟ್​ ಮಾಡಿ ರ್‍ಯಾಪಿಡೋ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದು, ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದು ಎಸ್​ಜೆಪಾರ್ಕ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.
We have informed to@sjparkpsto take necessary action in this regard, Please DM your contact number.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − 14 =
Remember me
