ನವದೆಹಲಿ:ದೆಹಲಿಯ ಪಶ್ಚಿಮ ವಿಹಾರ್​ ಪ್ರದೇಶದಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದ 33 ವರ್ಷದ ಕಾರ್ಮಿಕನನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಮೊಂಗೊಲ್​ಪುರಿ ಬಡಾವಣೆ ನಿವಾಸಿ ಹಾಗೂ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವ 33 ವರ್ಷದ ಅಪರಾಧ ಹಿನ್ನೆಲಯುಳ್ಳ ವ್ಯಕ್ತಿಯನ್ನು ಬಂಧಿಸಲಾಗಿದೆ. 2006ರಲ್ಲಿ ಈತ ಒಂದು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ಅನೇಕ ಕಳ್ಳತನದ ಪ್ರಕರಣಗಳು ದಾಖಲಾಗಿರುವುದಾಗಿ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರಾಜಸ್ಥಾನ ರಾಜಕೀಯ: ಪಕ್ಷಗಳ ವಿಲೀನ ಒಕೆ, ಶಾಸಕರ ವಿಲೀನಕ್ಕೆಲ್ಲಿ ಅವಕಾಶ- ಬಿಎಸ್​ಪಿ ಪ್ರಶ್ನೆ
ಕಳ್ಳತನ ಮಾಡಿದ್ದನ್ನು ನೋಡಿದ್ದಕ್ಕೆ ಅತ್ಯಾಚಾರ: ಈ ವ್ಯಕ್ತಿಯು ಆ.2ರಂದು ಕಳ್ಳತನ ಮಾಡುತ್ತಿರುವುದನ್ನು 12 ವರ್ಷದ ಬಾಲಕಿ ನೋಡಿದ್ದಳು. ಈಕೆ ತನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡುವ ಭೀತಿಯಲ್ಲಿ ಆತ, ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದ. ಅದಕ್ಕೂ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಈತನಿಂದ ತೀವ್ರ ಹಲ್ಲೆಗೆ ಒಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲೆಯನ್ನು ಗಮನಿಸಿದ ದಾರಿ ಹೋಕರು ಆಕೆಯನ್ನು ಏಮ್ಸ್​ಗೆ ದಾಖಲಿಸಿದ್ದರು.
ಶ್ರೀಲಂಕಾ ಸಂಸತ್​ ಚುನಾವಣೆಯಲ್ಲಿ ಮಹಿಂದಾ ರಾಜಪಕ್ಸ ಸರ್ಕಾರಕ್ಕೆ ಭಾರಿ ಗೆಲುವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + seven =
Remember me
