ದೆಹಲಿ:ಪ್ರಕೃತಿಯಲ್ಲಿ ಏನೆಲ್ಲ ವಿಚಿತ್ರಗಳು ಸಂಭವಿಸುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣಗಳಿವೆ. ಇದಕ್ಕೆ ಪುಷ್ಟಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಜಿಂಕೆಯೊಂದು ಹಾವನ್ನು ಜಗಿದು ನುಂಗುತ್ತಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.
ನಾವು-ನೀವು ತಿಳಿದುಕೊಂಡಂತೆ ಜಿಂಕೆ ಅನಾದಿಕಾಲದಿಂದಲೂ ಜಿಂಕೆ ಸಸ್ಯಹಾರಿ ಪ್ರಾಣಿಯಾಗಿದ್ದು, ಇದು ಸಸ್ಯ, ಹುಲ್ಲು ಮತ್ತಿತರ ಆಹಾರವನ್ನು ಸೇವಿಸುತ್ತದೆ. ಆದರೆ ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಎಂಬುವರು ಶೇರ್​ ಮಾಡಿರುವ ವಿಡಿಯೋ ನೋಡಿ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ.
ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ಅಧಿಕಾರಿ, ಕ್ಯಾಮೆರಾಗಳು ನೈಸರ್ಗಿಕ ಪ್ರಪಂಚದ ಉತ್ತಮ ಗ್ರಹಿಕೆಯನ್ನು ಪಡೆಯಲು ನಮಗೆ ಅವಕಾಶ ಮಾಡಿಕೊಡುತ್ತವೆ. ಸಸ್ಯಹಾರಿಗಳು ಸಾಂದರ್ಭಿಕವಾಗಿ ಹಾವುಗಳನ್ನು ತಿನ್ನುತ್ತವೆ ಎಂಬ ಅಡಿಬಹರವನ್ನು ನೀಡಿದ್ದಾರೆ.
Cameras are helping us understand Nature better.Yes. Herbivorous animals do eat snakes at times.pic.twitter.com/DdHNenDKU0
— Susanta Nanda (@susantananda3)June 11, 2023
ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದು, ಕೆಲವರು ಜಿಂಕಗೆ ಸಸ್ಯಹಾರ ಪದಾರ್ಥವನ್ನು ತಿಂದು ಬೇಜಾರಗಿರಬೇಕು. ಅದಕ್ಕೆ ಮಾಂಸವನ್ನು ತಿನ್ನುತ್ತಿದೆ ಎಂದಿದ್ದಾರೆ. ಇನ್ನು ಕೆಲವರು ನಾನು ಶಾಲೆಯಲ್ಲಿ ಪರಿಸರ ವಿಜ್ಞಾನ ವಿಷಯವನ್ನು ಓದಿಲ್ಲ ಎಂಬಿತ್ಯಾದಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ.(ಏಜೆನ್ಸೀಸ್)​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − two =
Remember me
