ಬಾಲಾಸೋರ್​:ಕೆಲದಿನಗಳ ಹಿಂದೆ ಮಳೆಗಾಲದಲ್ಲಿ ಸಂಗಾತಿಯನ್ನು ಆಕರ್ಷಿಸಲು ಕಪ್ಪೆಗಳು ಹಳದಿ ಬಣ್ಣಕ್ಕೆ ತಿರುಗುವ ಸಂಗತಿಯನ್ನು ಓದಿದ್ದಿರಿ. ಆದರೆ ಈಗ ಆಮೆಯ ಸರದಿ.
ಓಡಿಶಾದ ಬಾಲಾಸೋರ್​ನ ಸುಜಾನ್​ಪುರ ಗ್ರಾಮದ ನಿವಾಸಿಗಳು ಅತ್ಯಂತ ಅಪರೂಪದ ಹಳದಿ ಬಣ್ಣದ ಆಮೆಯೊಂದನ್ನು ಪತ್ತೆ ಮಾಡಿದ್ದಾರೆ. ಹಾಗೆಂದು ಮಳೆಗಾಲದಲ್ಲಿ ಸಂಗಾತಿಯನ್ನು ಆಕರ್ಷಿಸಲು ಮೈಬಣ್ಣ ಬದಲಿಸಿಕೊಳ್ಳುವ ಕಪ್ಪೆಗಳಂತೆ ಇದು ತನ್ನ ಮೈಬಣ್ಣವನ್ನು ಬದಲಿಸಿಕೊಂಡಿಲ್ಲ. ಬದಲಿಗೆ ಅದು ಇರುವುದೇ ಹಾಗೆ.
ಗ್ರಾಮಸ್ಥರು ಈ ಆಮೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. ಅಧಿಕಾರಿಗಳ ಪ್ರಕಾರ ಈ ಆಮೆಯು ಚರ್ಮ ಬಿಳಿಚುವಿಕೆ (Albino) ರೋಗದಿಂದ ಬಳಲುತ್ತಿರಬಹುದು. ಇದರ ಕಣ್ಣು ಕೂಡ ನಸುಗೆಂಪು ಬಣ್ಣದಿಂದ ಕೂಡಿದೆ. ಇದು ಕೂಡ ಚರ್ಮದ ಬಿಳಿಚುವಿಕೆಯ ರೋಗದ ಲಕ್ಷಣವಾಗಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ದೇಶದಲ್ಲಿ ಕರೊನಾ ವೈರಾಣು ಸೋಂಕು ಸಾಮುದಾಯಿಕವಾಗಿ ಹಬ್ಬುತ್ತಿದೆ, ಸತ್ಯ ಒಪ್ಪಿಕೊಳ್ಳಲು ಹಿಂದೇಟು
ಹಳದಿ ಬಣ್ಣದ ಆಮೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ವನ್ಯಜೀವಿಗಳ ವಾರ್ಡನ್​ ಭಾನುಮಿತ್ರಾ ಆಚಾರ್ಯ, ಆಮೆಯ ಚಿಪ್ಪು ಮತ್ತು ದೇಹವಿಡೀ ಹಳದಿ ಬಣದ್ದಾಗಿದೆ. ಇಂಥ ಆಮೆಯನ್ನು ನಾನು ಹಿಂದೆಂದೂ ನೋಡಿರಲಿಲ್ಲ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಒಡಿಶಾದ ಮಯೂರಭ್​ಗಂಜ್​ ಜಿಲ್ಲೆಯ ಡ್ಯೂಲಿ ಅಣೆಕಟ್ಟಿನಲ್ಲಿ ಅತ್ಯಂತ ಅಪರೂಪದ ಟ್ರಿಯಾನ್​ಚಿಡೇ ಆಮೆಯೊಂದು ಪತ್ತೆಯಾಗಿತ್ತು. ಸಾಮಾನ್ಯವಾಗಿ ಆಮೆಗಳ ಚಿಪ್ಪು ಗಟ್ಟಿಯಾಗಿರುತ್ತದೆ. ಆದರೆ, ಈ ಆಮೆಯ ಚಿಪ್ಪು ತುಂಬಾ ಮೆದುವಾಗಿರುತ್ತದೆ. ಇಂಥ ಆಮೆಗಳು ಆಫ್ರಿಕಾ, ಏಷ್ಯಾ ಮತ್ತು ಉತ್ತರ ಅಮೆರಿಕದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಕುಖ್ಯಾತ ದುಬೆಗೆ ಜಾಮೀನು ಸಿಗುತ್ತಿದುದು ಹೇಗೆ- ಅಚ್ಚರಿಪಟ್ಟ ಸುಪ್ರೀಂಕೋರ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 9 =
Remember me
