ನವದೆಹಲಿ:ನನ್ನ ಮಗಳು ಒಬ್ಬ ಭಯೋತ್ಪಾದಕಿ. ಮನೆಯಲ್ಲೇ ಭಯೋತ್ಪಾದನೆಯ ಕೆಲಸ ಮಾಡುತ್ತಿದ್ದಳು ಎಂದು ಜೆಎನ್​ಯು ಶೈಲಾ ರಷೀದ್‌ ತಂದೆ ಅಬ್ದುಲ್‌ ರಷೀದ್‌ ಆರೋಪ ಮಾಡಿರುವ ಬೆನ್ನಲ್ಲೇ, ಮಗಳು ತಂದೆಯ ವಿರುದ್ಧ ಆರೋಪದ ಸುರಿಮಳೆ ಸುರಿಸಿದ್ದಾರೆ.
ಇದನ್ನೂ ಓದಿ:ಗಡಿಯಲ್ಲಿ ಕ್ಯಾತೆ ತೆಗೆದ ಚೀನಾಕ್ಕೆ ತಿನ್ನೋ ಅನ್ನಕ್ಕೆ ನಾವೇ ಗತಿ! ಮೊದಲನೇ ಬಾರಿಗೆ ಭಾರತದಿಂದ ಅಕ್ಕಿ ಖರೀದಿಗೆ ಮುಂದಾದ ಚೀನಾ
ನಾನು, ನನ್ನ ಸಹೋದರಿ ಇಬ್ಬರೂ ಅಮ್ಮನನ್ನೇ ಅಪ್ಪ ಅಂದುಕೊಂಡು ಬೆಳೆದಿದ್ದೇವೆ. ಆತ ಯಾವತ್ತಿಗೂ ನಮಗೆ ತಂದೆಯ ರೀತಿಯಲ್ಲಿ ಕಾಣಿಸಿಕೊಂಡೇ ಇಲ್ಲ. ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ನಮ್ಮ ಆತನ ಮಧ್ಯೆ ತಂದೆ ಮಗಳ ಸಂಬಂಧ ಇಲ್ಲವೇ ಇಲ್ಲ ಎಂದು ಶೈಲಾ ರಷೀದ್​ ಹೇಳಿದ್ದಾರೆ.
ತಂದೆ ಎಂದು ಈಗ ದೂರು ಮಾಡಿರುವ ಆತನಿಗೆ ನಾನು ಯಾವಾಗ ಯಾವ ತರಗತಿಯಲ್ಲಿ ಓದುತ್ತಿದ್ದೆ ಎನ್ನುವುದೇ ಗೊತ್ತಿಲ್ಲ. 2017ರಲ್ಲಿ ಸೋಶಿಯಾಲಜಿ ಪಿಎಚ್​ಡಿ ಕೊನೆಯ ಸೆಮಿಸ್ಟರ್​ನಲ್ಲಿದ್ದೆ ಎಂದು ದೂರಿನಲ್ಲಿ ಬರೆದಿದ್ದಾನೆ. ಆದರೆ ಗೂಗಲ್​ ಸರ್ಚ್​ ಮಾಡಿದರೆ ನನ್ನ ವಿದ್ಯಾಭ್ಯಾಸದ ಸರಿಯಾದ ಮಾಹಿತಿ ಸಿಗುತ್ತದೆ. ನನ್ನ ಎನ್​ಜಿಒಗಳ ಮೇಲೆ ತನಿಖೆಯಾಗಬೇಕು ಎಂದು ಹೇಳಿದ್ದಾನೆ. ನಾನು ಯಾವುದೇ ಎನ್​ಜಿಒ ಹೊಂದಿಲ್ಲ. ಆದರೆ ಆತ ನನಗೆ 3 ಎನ್​ಜಿಒ ಇರುವುದಾಗಿ ತಿಳಿಸಿದ್ದಾನೆ. ನನ್ನನ್ನು ಗೌಪ್ಯವಾಗಿ ತನಿಖೆ ಮಾಡಿದರೂ ಯಾವುದೇ ಎನ್​ಜಿಒ ಜತೆಗೆ ನನಗೆ ಸಂಪರ್ಕ ಇಲ್ಲ ಎಂದೇ ತಿಳಿಯುತ್ತದೆ ಎಂದು ಆಕೆ ಹೇಳಿದ್ದಾರೆ.
ಇದನ್ನೂ ಓದಿ:ನಾಲ್ವರು ಮಕ್ಕಳನ್ನು ಮೃತ್ಯು ಕೂಪಕ್ಕೆ ತಳ್ಳಿದ ಅಪ್ಪ! ಮೈ ಮೇಲೆ ಏನೋ ಬಂದಂತಾಗಿ ಕೊಲೆ ಮಾಡಿದೆ ಎಂದ ಪಾಪಿ
ಆತ ಅಪ್ಪನಾಗಿ ಮಾಡಿದ್ದೇನು ಇಲ್ಲ. ನನ್ನ ಅಮ್ಮನಿಗೆ ಯಾವಾಗಲೂ ಹಿಂಸೆ ಕೊಡುತ್ತಿದ್ದ. ಆಕೆಗೆ ದೈಹಿಕ ಹಲ್ಲೆ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ. ನನ್ನ ಅಮ್ಮ 32 ವರ್ಷಗಳ ಕಾಲ ಸರ್ಕಾರಿ ಕೆಲಸ ಮಾಡಿ ನನ್ನನ್ನು ಮತ್ತು ನನ್ನ ಸಹೋದರಿಯನ್ನು ಸಾಕಿದ್ದಾರೆ. ಅವರ ಬೆವರಿನ ಫಲವಾಗಿ ನಾವು ಇಂದು ಹೀಗಿದ್ದೇವೆ ಎಂದು ಶೈಲಾ ನುಡಿದಿದ್ದಾರೆ. (ಏಜೆನ್ಸೀಸ್​)
My sister & I have been brought up by a single parent, as my father has never been there for us, emotionally or financially.
He never even knew which class we are studying in – clear from his letter which says that "Shehla was in last semester of Ph.D. of Sociology in 2017."
+
— Shehla Rashid (@Shehla_Rashid)December 2, 2020

ಮನೆಯಲ್ಲೇ ಮಗಳ ಭಯೋತ್ಪಾದನಾ ಚಟುವಟಿಕೆ – ಜೆಎನ್​ಯು ವಿದ್ಯಾರ್ಥಿನಿ ಅಪ್ಪ ಬಿಚ್ಚಿಟ್ಟ ಕರಾಳ ಕಥೆ…

ಮಗನಿಗೆ ನೋವಾಗಬಾರದೆಂದು ಕೊಂದೇ ಬಿಟ್ಟ! ಮಗನ ಶವದ ಜತೆಯೇ ರಾತ್ರಿ ಮಲಗಿದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 10 =
Remember me
