ಮುಂಬೈ:ಸೋಶಿಯಲ್​ ಮೀಡಿಯಾ ವೈರಸ್​ನಂತಹುದು. ಅದು ಕರೋನಾಕ್ಕಿಂತ ಬಲವಾದದ್ದು. ಒಮ್ಮೆ ಅದರಲ್ಲಿ ಪ್ರಚಾರವಾಗುತ್ತಿರುವ ಫೋಟೋ, ವೀಡಿಯೋಗಳು ಯಾವು ಅಸಲಿ, ಯಾವು ನಕಲಿ ಎಂಬುದನ್ನು ದೃಢಪಡಿಸಿಕೊಳ್ಳುವುದು ಕಷ್ಟ. ಏಕೆಂದರೆ ಇದು ತಿಳಿಯುವಷ್ಟರ ಹೊತ್ತಿಗೆ ಲೆಕ್ಕವಿಲ್ಲದಷ್ಟು ಜನರನ್ನು ಅವು ತಲುಪಿಯಾಗಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸೃಷ್ಟಿಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಸೆಲಬ್ರಿಟಿಗಳ ಮೇಲೆ ಫೇಕ್​ ನ್ಯೂಸ್​, ಫೋಟೋ, ವೀಡಿಯೋಗಳನ್ನು ತಯಾರಿಸಿ ಅವರ ವ್ಯಕ್ತಿಗತ ಜೀವನಕ್ಕೆ ದಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಭಾನುವಾರ ನಟಿ ರಶ್ಮಿಕಾ ಮಂದಣ್ಣ ಮುಖದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ನನ್ನ ವೃತ್ತಿಜೀವನದ ಅತ್ಯುತ್ತಮ ಪಾತ್ರವಿದು: ನಟಿ ಮೃಣಾಲ್​ ಠಾಕೂರ್ಪ್ರಸ್ತುತ ರಶ್ಮಿಕಾ ಡೀಪ್​ ನೆಕ್​ ಬ್ಲಾಕ್​ ಕಲರ್​ ಡ್ರೆಸ್​ನಲ್ಲಿ ಲಿಫ್ಟ್​ ಒಳಗೆ ನಿಂತಿರುವ ವೀಡಿಯೋ ವೈರಲ್​ ಆಗುತ್ತಿದೆ. ಈ ವೀಡಿಯೋ ನೋಡಿದ ಎಲ್ಲರೂ ರಶ್ಮಿಕಾನೇ ಎಂದು ನಂಬಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ರಶ್ಮಿಕಾ ಇಂತಹ ಬಟ್ಟೆ ದರಿಸುವುದು ಎಂದರೆ ಏನರ್ಥ? ಮತ್ತೆ ಇಷ್ಟೊಂದು ಹಾಟ್​ ಆಗಿ ಏಕೆ ಕಾಣಿಸಿಕೊಂಡಿದ್ದಾರೆ ಎಂದು ಆಕೆಯ ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲ ಈ ವೀಡಿಯೋ ನೋಡಿದವರೆಲ್ಲ ಆಶ್ಚರ್ಯ ಚಕಿತರಾಗಿದ್ದಾರೆ. ಆದರೆ ಈ ವೀಡಿಯೀ ರಶ್ಮಿಕಾ ಅವರದ್ದಲ್ಲ, ಯಾರೋ ನಕಲಿ ವೀಡಿಯೋ ಸೃಷ್ಟಿಸಿ ಹಲ್​ಚಲ್​ ಸೃಷ್ಟಿಸಲು ಹರಿಯಬಿಟ್ಟಿದ್ದಾರೆ.
ಬೆಂಕಿಯಾದ ಅಮಿತಾಬ್​:ನಕಲಿ ವಿಡಿಯೋ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಆಗ್ರಹಿಸಿದ್ದಾರೆ. ದೇಶದಲ್ಲಿ ಫೇಕ್‌ಗಳನ್ನು ಎದುರಿಸಲು ಕಾನೂನು ಮತ್ತು ನಿಯಂತ್ರಕ ಚೌಕಟ್ಟನ್ನು ರೂಪಿಸಬೇಕು ಎಂದು ಪತ್ರಕರ್ತರೊಬ್ಬರು ‘x’ನಲ್ಲಿ ಒತ್ತಾಯಿಸಿದ್ದು, ಇದನ್ನು ರಿಪೋಸ್ಟ್ ಮಾಡುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಮಿತಾಬ್ ಬಚ್ಚನ್ ಆಗ್ರಹಿಸಿದ್ದಾರೆ.
ಟೀಸರ್​ಗೆ ‘ದಿಲ್ ಖುಷ್’!; ನವೀರಾದ ಪ್ರೇಮಕಥೆಯ ಹಾದಿ ಹೀಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − two =
Remember me
