ಬೆಂಗಳೂರು:ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ತೆಲುಗು, ಹಿಂದಿ ಮತ್ತು ತಮಿಳು ಸಿನಿಮಾಗಳ ಮೂಲಕವಾಗಿ ಸದಾ ಸುದ್ದಿಯಲ್ಲಿರುವ ನಟಿಮಣಿ. ಅಭಿಮಾನಿಗಳ ನೆಚ್ಚಿನ ನ್ಯಾಷನಲ್​​ ಕ್ರಷ್​ ಸಂದರ್ಶನವೊಂದರಲ್ಲಿ ನಾನು ಮದುವೆಯಾಗಿದ್ದೇನೆಂದು ಹೇಳುವ ಮೂಲಕವಾಗಿ ಅಭಿಮಾನಿಗಳಿಗೆ ಶಾಕ್​​ ಕೊಟ್ಟಿದ್ದಾರೆ.

ಇದನ್ನೂ ಓದಿ:Friendship Day 2023; ನಿಮ್ಮ ಸ್ನೇಹಿತರೊಂದಿಗೆ ಶುಭಾಶಯ ಹಂಚಿಕೊಳ್ಳುವ ಸಂದೇಶಗಳು ಇಂತಿವೆ…
ಹೌದು.. ಕೊಡಗಿನ ಸುಂದರಿ ರಶ್ಮಿಕಾ, ಬಾಲಿವುಡ್ ಹೀರೋ ಟೈಗರ್ ಶ್ರಾಫ್ ಜತೆ ಸಿನಿಮಾ ಪ್ರಚಾರಕ್ಕೆ ಹೋಗಿದ್ದರು. ಈ ವೇಳೆ ಮದುವೆ ಯಾವಾಗ ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ರಶ್ಮಿಕಾ ಕೊಟ್ಟಿರುವ ಉತ್ತರ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಮಾಷೆಯ ಉತ್ತರವನ್ನು ಕೊಟ್ಟ ರಶ್ಮಿಕಾ, ನಾನು ಈಗಾಗಲೇ ಮದುವೆಯಾಗಿದ್ದೇನೆ. ನಾನು ನರುಟೊನನ್ನು ಮದುವೆಯಾಗಿದ್ದೇನೆ, ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ. ಅದು ನನ್ನ ನೆಚ್ಚಿನ ಪಾತ್ರ. ಆ ಪಾತ್ರವನ್ನು ನಾನು ಸಂಪೂರ್ಣವಾಗಿ ಮದುವೆಯಾಗಿದ್ದೇನೆ ಅವನು ನನ್ನ ಹೃದಯದಲ್ಲಿದ್ದಾನೆ ಎಂದಿದ್ದಾರೆ. ನಟಿ ಹೇಳಿದ್ದನ್ನು ಕೇಳಿ ಅಲ್ಲಿದ್ದವರು ಜೋರಾಗಿ ನಕ್ಕರು.

ನರುಟೊ ನಿಂಜಾ ವಾರಿಯರ್‌ನಂತೆ ಕಾಣುವ ಗೊಂಬೆಯೊಂದಿಗೆ ನಟಿಯ ಚಿತ್ರವೂ ವೈರಲ್ ಆಗುತ್ತಿದೆ. ಮಕ್ಕಳಿಂದ ಸೆಲೆಬ್ರಿಟಿಗಳವರೆಗೆ ಅನೇಕರು ಈ ಕಾರ್ಟೂನ್ ಪಾತ್ರಗಳಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ನಟಿ ರಶ್ಮಿಕಾ ಅವರು ರಹಸ್ಯವಾಗಿ ಮದುವೆಯಾಗುವಷ್ಟು ನರುಟೊವನ್ನು ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ ಎಂಬ ಸುದ್ದಿ ಅಂತರ್ಜಾಲದಲ್ಲಿ ಸಖತ್​ ಸುದ್ದಿಯಲ್ಲಿದೆ. ನರುಟೊ ಸರಣಿಯ ಪಾತ್ರ. ಪಾತ್ರಕ್ಕೆ ಉತ್ತಮ ಅಭಿಮಾನಿ ಬಳಗವಿದೆ. ತಮ್ಮಿ ವಿಶಿಷ್ಟವಾದ ನಟನೇ ಮೂಲಕವಾಗಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ರಶ್ಮಿಕಾ ಕೂಡಾ ನರುಟೊ ಅಭಿಮಾನಿಯಾಗಿದ್ದಾರೆ.

ರಶ್ಮಿಕಾ ಪ್ರಸ್ತುತ ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಇದರಲ್ಲಿ ಅವರು ಅಲ್ಲು ಅರ್ಜುನ್‌ನ ಮೂಲದಿಂದ ಶ್ರೀವಲ್ಲಿ ಪಾತ್ರವನ್ನು ಪುನರಾವರ್ತಿಸುತ್ತಿದ್ದಾರೆ. ಪ್ರಸ್ತುತ ಮಹಡಿಯಲ್ಲಿರುವ ಮಹಿಳಾ ಕೇಂದ್ರಿತ ತಮಿಳು ಚಿತ್ರ ‘ರೇನ್‌ಬೋ’ಗೆ ಸಹ ಅವರು ಸಹಿ ಹಾಕಿದ್ದಾರೆ ಎನ್ನಲಾಗಿದೆ.
ನಟ ಕಮಲ್ ಹಾಸನ್ ಜತೆ ನಟಿಸಿದ್ದ ಸಹಕಲಾವಿದ ಮೋಹನ್ ಮೃತದೇಹ ರಸ್ತೆಬದಿಯಲ್ಲಿ ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + thirteen =
Remember me
