ನವದೆಹಲಿ:ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್​ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಗುಂಟೂರು ಮೂಲದ ಏಮಾನಿ ನವೀನ್ (24)​ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಬಿ.ಟೆಕ್​ ವ್ಯಾಸಂಗ ಮಾಡುತ್ತಿದ್ದು, ರಶ್ಮಿಕಾ ಮಂದಣ್ಣ ಸೇರಿದಂತೆ ದಕ್ಷಿಣ ಭಾರತದ ಮೂವರು ಪ್ರಮುಖ ನಟಿಯರ ಫ್ಯಾನ್​ ಪೇಜ್​ ನೋಡಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಓರ್ವ ಅಭಿಮಾನಿಯಾಗಿ ಆತನೇ ಈ ರೀತಿಯ ಕೃತ್ಯ ಎಸಗಿರುವುದು ಹಲವರಿಗೆ ಆಘಾತವನ್ನುಂಟು ಮಾಡಿದೆ.
#WATCH| Delhi: On main accused arrested in the case of deep fake profiles of actor Rashmika Mandana, DCP IFSO Unit Hemant Tiwari says, "..We've arrested the main accused identified as Eemani Naveen, 24, from Andhra Pradesh's Guntur. Laptop and mobile phone recovered from him.…pic.twitter.com/YzLXMcSaZ8
ಇದನ್ನೂ ಓದಿ:ರಾಮಲಲ್ಲಾನ ಪ್ರತಿಷ್ಠಾಪನೆಗೆ ದಿನಗಣನೆ; ಅಯೋಧ್ಯೆಗೆ ಪ್ರಯಾಣ ಬೆಳೆಸಿದ ಕರ್ನಾಟಕದ ಪ್ರಮುಖ ಮಠಾಧೀಶರು
ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಐಎಫ್‌ಎಸ್‌ಒ ಘಟಕದ ಡಿಸಿಪಿ ಹೇಮಂತ್​ ತಿವಾರಿ, ಬಂಧಿತ ಆರೋಪಿ ಬಿ.ಟೆಕ್​ ಪದವಿ ವ್ಯಾಸಂಗ ಮಾಡುತ್ತಿದ್ದು, 2019ರಲ್ಲಿ ಈತ ಗೂಗಲ್​ ಮೂಲಕ ಡಿಜಿಟಲ್​ ಮಾರ್ಕೆಟಿಂಗ್​ ಕೋರ್ಸ್​ ಮಾಡಿಕೊಂಡಿದ್ದಾನೆ. ದಕ್ಷಿಣ ಭಾರತದ ಮೂವರು ಸೆಲೆಬ್ರಿಟಿಗಳ ಫ್ಯಾನ್ಸ್​ ಪೇಜ್​ಗಳನ್ನು ಈತ ನಡೆಸುತ್ತಿದ್ದ. ರಶ್ಮಿಕಾ ಮಂದಣ್ಣ ಅವರ ಫ್ಯಾನ್​ ಪೇಜ್​ನಲ್ಲಿ ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚು ಮಾಡಲು ಈ ರೀತಿ ಡೀಪ್​ಫೇಕ್​ ವಿಡಿಯೋ ಹಾಕಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಬಳಿ ಇದ್ದ ಮೊಬೈಲ್​ಫೋನ್​, ಲ್ಯಾಪ್​ಟಾಪ್​ ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಇರುವ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಆತನೇ ಡೀಪ್​ಫೇಕ್​ ಮಾಡಿದ್ದಾನೆ ಎಂಬುದಕ್ಕೆ ಸಾಕ್ಷಿಗಳು ದೊರೆತಿವೆ. ಇನ್ನೂ ಕೆಲವರ ಹೆಸರು ಹೊರಬರುವ ಸಾಧ್ಯತೆ ಇದ್ದು ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಐಎಫ್‌ಎಸ್‌ಒ ಘಟಕದ ಡಿಸಿಪಿ ಹೇಮಂತ್​ ತಿವಾರಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
