ಬೆಂಗಳೂರು:ನಟಿ ರಶ್ಮಿಕಾ ಮಂದಣ್ಣ ತೆಲುಗಿನ “ಪುಷ್ಪ’ ಚಿತ್ರದ ಮೂಲಕ ಮನೆ ಮಾತಾಗಿದ್ದಾರೆ. ಅಭಿಮಾನಿಗಳು ರಶ್ಮಿಕಾ ಅವರಲ್ಲಿ ಪುಷ್ಪ ಸಿನಿಮಾದ ಸಾಮಿ..ಸಾಮಿ ಹಾಡಿಗೆ ಹೆಜ್ಜೆ ಹಾಕಲು ಡಿಮ್ಯಾಂಡ್ ಮಾಡುತ್ತಾರೆ. ಆದರೆ ಇನ್ಮುಂದೆ ಈ ಹಾಡಿಗೆ ಡಾನ್ಸ್​​ ಮಾಡುವುದಿಲ್ಲ ಎಂದು ಹೇಳುವ ಮೂಲಕವಾಗಿ ರಶ್ಮಿಕಾ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿದ್ದಾರೆ ಶೂ ಕಳ್ಳರು; ಮಧ್ಯರಾತ್ರಿ ಅಪಾರ್ಟ್​ಮೆಂಟ್​ಗೆ ನುಗ್ಗುತ್ತಾರೆ ಈ ಖದೀಮರು!ಆಗಾಗ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜತೆ ಚಾಟ್​ ಮಾಡುವ ರಶ್ಮಿಕಾ, ಇತ್ತೀಚೆಗೆ ಅಭಿಮಾನಿಯೊಬ್ಬರ ಪ್ರಶ್ನೆಗೆ ಹೀಗೆ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಫ್ಯಾನ್​ ಒಬ್ಬರು ರಶ್ಮಿಕಾ ಮಂದಣ್ಣ ಬಳಿ, “ಮುಂದಿನ ನಿಮ್ಮನ್ನು ಭೇಟಿಯಾದಾಗ ನನ್ನ ಜತೆ ನೀವು “ಸಾಮಿ..ಸಾಮಿ’ ಹಾಡಿಗೆ ಕುಣಿಯಬೇಕು’ ಎಂದಿದ್ದಾರೆ.
ಇದನ್ನೂ ಓದಿ:ದಾಖಲೆ ಇಲ್ಲದೆ ಸಾಗಿಸುತ್ತಿದ್ದ 9 ಲಕ್ಷ ರೂ….16 ಲಕ್ಷ ರೂ.ಬೆಲೆ ಬಾಳುವ ಸೀರೆಗಳು ವಶಕ್ಕೆ!
ಅದಕ್ಕೆ ರಶ್ಮಿಕಾ, “ನಾನು ಆ ಹಾಡಿಗೆ ಡಾನ್ಸ್​ ಮಾಡಿ ಸಾಕಾಗಿಹೋಗಿದೆ. ಆ ಡಾನ್ಸ್​ನಿಂದಲೇ ನನಗೆ ವಯಸ್ಸಾದ ಬಳಿಕ ಬೆನ್ನು ನೋವು ಬರುತ್ತೇನೋ ಅನ್ನುವಷ್ಟರ ಮಟ್ಟಿಗೆ ಕುಣಿದಿದ್ದೇನೆ. ನಾನು, ನೀವು ಭೇಟಿಯಾದಾಗ ಬೇರೆ ಏನಾದರೂ ಮಾಡೋಣ’ ಎಂದು ಉತ್ತರಿಸಿದ್ದಾರೆ. ರಶ್ಮಿಕಾ ಈ ರೀತಿ ಹಾಸ್ಯ ಮಾಡಿದ್ದಾರೋ ಅಥವಾ ಗಂಭೀರವಾಗಿ ಹೇಳಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ.
ಸದ್ಯ ರಶ್ಮಿಕಾ ಮಂದಣ್ಣ ಮುಂಬೈನಲ್ಲಿದ್ದು, ರಣಬೀರ್​ ಕಪೂರ್​ ಜತೆ “ದಿ ಅನಿಮಲ್​’ ಹಾಗೆಯೇ ಅಲ್ಲು ಅರ್ಜುನ್​ ಜತೆ “ಪುಷ್ಪ 2 ದಿ ರೂಲ್​’ ಚಿತ್ರದಲ್ಲೂ ನಟಿಸುತ್ತಿದ್ದಾರೆ.
ಇನ್ಮುಂದೆ ಬಿಸಿಯೂಟದೊಂದಿಗೆ ಸಿಗಲಿದೆ ರಾಗಿ ಮಾಲ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 11 =
Remember me
