ನವದೆಹಲಿ:ಇಂದು ಎಲ್ಲಿಯೂ ಹೋಗದೇ ಮನೆಯಲ್ಲೇ ಕುಳಿತು ತಮಗೇ ಬೇಕಾದ ವಸ್ತುವನ್ನು ತರಿಸಿಕೊಳ್ಳಬಹುದು. ಇದಕ್ಕೆ ಸ್ಮಾರ್ಟ್​ಫೋನ್​ ಒಂದಿದ್ದರೆ ಸಾಕು. ಮೊದಲೆಲ್ಲ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಆನ್​​ಲೈನ್​​ ವ್ಯವಹಾರ ಇಂದು ಹಳ್ಳಿ ಹಳ್ಳಿಗೂ ವ್ಯಾಪಿಸಿದೆ. ನಿಮ್ಮಿಷ್ಟದ ವಸ್ತುಗಳು, ಊಟ ಸೇರಿದಂತೆ ಎಲ್ಲವು ಆನ್​ಲೈನ್​ನಲ್ಲಿ ಲಭ್ಯವಿದ್ದು, ಆರ್ಡರ್​ ಮಾಡಿದ ಕೆಲವೇ ಕ್ಷಣಗಳಲ್ಲಿ ನಿಮ್ಮ ಬಳಿಗೆ ತಲುಪಿಸುತ್ತಾರೆ.
ಆನ್​ಲೈನ್​ ಶಾಪಿಂಗ್​ನಲ್ಲಿ ಕೆಲವೊಮ್ಮೆ ಕಂಪನಿಯವರು ಮಾಡುವ ಎಡವಟ್ಟುಗಳಿಂದ ಗ್ರಾಹಕರು ಆಘಾತಕ್ಕೊಳಗಾಗುವ ಘಟನೆ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಗ್ರಾಹಕರೊಬ್ಬರು ತಾವು ಅನುಭವಿಸಿದ ಕಹಿ ಅನುಭವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಗ್ರಾಹಕರೊಬ್ಬರು ದಿನಸಿ ಪದಾರ್ಥವನ್ನು ಆರ್ಡರ್​ ಮಾಡಿದ್ದರು. ಮನೆಗೆ ಬಂದ ಪದಾರ್ಥಗಳಲ್ಲಿ ಬ್ರೆಡ್​ ಪ್ಯಾಕೆಟ್​ ಸಹ ಒಂದು. ಅದನ್ನು ನೋಡಿದ ಗ್ರಾಹಕರಿಗೆ ಭಾರಿ ಆಘಾತ ಕಾದಿತ್ತು. ಏಕೆಂದರೆ, ಆ ಬ್ರೆಡ್​ ಪ್ಯಾಕೆಟ್​ನಲ್ಲಿ ಜೀವಂತ ಇಲಿ ಇತ್ತು. ಅಂದಹಾಗೆ ಆ ಗ್ರಾಹಕರ ಹೆಸರು ನಿತಿನ್​ ಅರೋರಾ, ಟ್ವಿಟರ್​ನಲ್ಲಿ ಬ್ರೆಡ್​ ಪ್ಯಾಕೆಟ್​ನಲ್ಲಿ ಇಲಿ ಇರುವ ಫೋಟೋವನ್ನು ಶೇರ್​ ಮಾಡಿಕೊಂಡಿದ್ದು, ಕಹಿ ಅನುಭವ ವಿವರಿಸಿದ್ದಾರೆ.
ಅರೋರಾ ಅವರು ಬ್ಲಿಂಕಿಟ್​ ಹೆಸರಿನ ಆನ್​ಲೈನ್​ ಶಾಪಿಂಗ್​ನಲ್ಲಿ ದಿನಸಿ ಪದಾರ್ಥಗಳನ್ನು ಬುಕ್​ ಮಾಡಿದ್ದರು. ಮನೆಗೆ ಬಂದು ಆಹಾರ ಪದಾರ್ಥಗಳಲ್ಲಿ ಬ್ರೆಡ್​ ಪ್ಯಾಕೆಟ್​ನಲ್ಲಿ ಜೀವಂತ ಇಲಿ ಪತ್ತೆಯಾಗಿದೆ. ಬಳಿಕ ಟ್ವಿಟರ್​ನಲ್ಲಿ ಕಂಪನಿಯ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಕೇವಲ 10 ನಿಮಿಷದ ಡೆಲಿವರಿಯಲ್ಲಿ ಇಂತಹ ಅನಾಹುತಗಳು ಸಾಮಾನ್ಯ ಎನಿಸಿದರೆ, ಸರಿಯಾದ ಡೆಲಿವರಿಗೆ ಗಂಟೆಗಟ್ಟಲೆ ಕಾಯಲು ಹಿಂಜರಿಯುವುದಿಲ್ಲ ಎಂದು ನಿತಿನ್ ಟ್ವೀಟ್ ಮಾಡಿದ್ದಾರೆ.
ನಿತಿನ್​ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಬ್ಲಿಂಕಿಟ್​, ನಾವು ನಿಮಗೆ ಅನನುಕೂಲತೆ ಉಂಟುಮಾಡಲು ಬಯಸುವುದಿಲ್ಲ. ನಿಮ್ಮ ಸಂಪರ್ಕ ಸಂಖ್ಯೆ ಅಥವಾ ಆರ್ಡರ್ ಐಡಿಯನ್ನು ನಮಗೆ ಕಳುಹಿಸಿ ಮತ್ತು ನಾವು ಸಮಸ್ಯೆಯನ್ನು ಪರಿಹರಿಸುತ್ತೇವೆ. ಇದಲ್ಲದೆ, ಬ್ಲಿಂಕಿಟ್​ನ ಗ್ರಾಹಕ ಬೆಂಬಲದ ಮುಖ್ಯಸ್ಥರು ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದು, ಕಂಪನಿ ಪಾಲುದಾರರನ್ನು ತಮ್ಮ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಿತಿನ್​ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ. ಬ್ರೆಡ್ ಪ್ಯಾಕೆಟ್ ನಲ್ಲಿ ಇಲಿ.. ಅಯ್ಯೋ ತುಂಬಾ ಕೆಟ್ಟದ್ದು ಎಂದು ಕಮೆಂಟಿಸಿದ್ದಾರೆ. ಇದು ಅಕ್ಷಮ್ಯ ಅಪರಾಧ ಮತ್ತು ಕೊಂಚ ವಿಳಂಬವಾದರೂ ಸಮಸ್ಯೆಯಿಲ್ಲ ಆದರೆ, ದಿನಸಿ ಕಂಪನಿಗಳು ಸುರಕ್ಷಿತ ಆಹಾರವನ್ನು ತಲುಪಿಸಬೇಕೆಂದು ನೆಟ್ಟಿಗರು ಸೂಚಿಸಿದ್ದಾರೆ.(ಏಜೆನ್ಸೀಸ್​)
Most unpleasant experience with@letsblinkit, where alive rat was delivered inside the bread packet ordered on 1.2.23. This is alarming for all of us. If 10 minutes delivery has such baggage,@blinkitcaresI would rather wait for a few hours than take such items.#blinkit#zomatopic.twitter.com/RHNOj6tswA
— Nitin Arora (@NitinA14261863)February 3, 2023

ಟರ್ಕಿಯಲ್ಲಿ ಭೂಕಂಪ ಸಂಭವಿಸಿದ 5 ದಿನದ ಬಳಿಕ ಅವಶೇಷಗಳಡಿ ಸಿಲುಕಿದ್ದ 2 ತಿಂಗಳ ಮಗು ರಕ್ಷಣೆ

ಯೋಚನೆ ಮಾಡಿದ್ದರೆ ಸಿನಿಮಾ ಆಗ್ತಿರಲಿಲ್ಲ; ಮುಖಾಮುಖಿ ಸಂವಾದದಲ್ಲಿ ರಿಷಬ್ ಶೆಟ್ಟಿ

ರವೀಂದ್ರ ಕೌಶಿಕ್ ಬಯೋಪಿಕ್!; ಭಾರತದ ನಂಬರ್ 1 ಗೂಢಚಾರಿ ಕುರಿತ ಸಿನಿಮಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 4 =
Remember me
