ದೆಹಲಿ:ದೇಶದ ಹಿರಿಯ ಉದ್ಯಮಿ ರತನ್ ಟಾಟಾ ಅವರನ್ನು ಪಿಎಂ ಕೇರ್ಸ್​ ಫಂಡ್​​ನ ನೂತನ ಟ್ರಸ್ಟಿಯಾಗಿ ನೇಮಕ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪಿಎಂ ಕೇರ್ಸ್​ ಫಂಡ್​ನ ಟ್ರಸ್ಟಿಗಳ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಟ್ರಸ್ಟಿಗಳಾದ ಗೃಹ ಮಂತ್ರಿ ಅಮಿತ್ ಷಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದರು.
ರತನ್ ಟಾಟಾ ಜತೆಗೆ, ಸುಪ್ರಿಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಕೆ.ಟಿ ಥಾಮಸ್ ಹಾಗೂ ಲೋಕಸಭೆಯ ಮಾಜಿ ಉಪ ಸ್ಪೀಕರ್ ಕರಿಯಾ ಮುಂಡಾ ಅವರ ಹೆಸರನ್ನು ಕೂಡ ಪಿಎಂ ಕೇರ್ಸ್​ ಫಂಡ್​​ನ ಟ್ರಸ್ಟಿಯಾಗಿ ನಾಮ ನಿರ್ದೇಶನಗೊಳಿಸಿದ್ದಾರೆ.
ಪಿಎಂ ಕೇರ್ಸ್​ ಫಂಡ್​ನ ಹಣ ದುರುಪಯೋಗವಾಗುತ್ತಿದೆ ಎಂದು ಈ ಹಿಂದೆ ವಿರೋಧ ಪಕ್ಷಗಳು ಆರೋಪಿಸಿದ್ದವು. ಇದೀಗ ನೂತನವಾಗಿ ಆಯ್ಕೆಯಾಗಿರುವ ಟ್ರಸ್ಟಿಗಳ ಭಾಗವಹಿಸುವಿಕೆಯಿಂದ ಪಿಎಂ ಕೇರ್ಸ್​ ಫಂಡ್​ನ ಕಾರ್ಯನಿರ್ವಹಣೆಯ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಪಿಎಂ ಕೇರ್ಸ್​​ ನಿಧಿಯನ್ನು ಸಾರ್ವಜನಿಕ ಅಗತ್ಯತೆಗಳಿಗೆ ಹೆಚ್ಚು ಸ್ಪಂದಿಸುವಂತೆ ಮಾಡಬೇಕಾಗಿದೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕರೊನಾ ಸಂದರ್ಭದಲ್ಲಿ ಪಿಎಂ ಕೇರ್ಸ್​ ನಿಧಿಯನ್ನು ಸ್ಥಾಪನೆ ಮಾಡಲಾಯಿತು. ಇಲ್ಲಿ ಸಂಗ್ರಹವಾಗಿರುವ ಮೊತ್ತ ಸಮಾಜದಿಂದ ಸಂಗ್ರಹವಾದ್ದು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಮಾಜದ ಅಗತ್ಯತೆಗೆ ಅನುಗುಣವಾಗಿ ಈ ನಿಧಿಯನ್ನು ಬಳಕೆ ಮಾಡಲಾಗುತ್ತದೆ.(ಏಜೆನ್ಸೀಸ್)
Prime Minister Narendra Modi chaired a meeting of the Board of Trustees of the PM CARES Fund yesterday. A presentation was made on the various initiatives undertaken with the help of PM CARES Fund, including the PM CARES for Children scheme which is supporting 4345 children: PMOpic.twitter.com/pjoJH9IEmS— ANI (@ANI)September 21, 2022
Prime Minister Narendra Modi chaired a meeting of the Board of Trustees of the PM CARES Fund yesterday. A presentation was made on the various initiatives undertaken with the help of PM CARES Fund, including the PM CARES for Children scheme which is supporting 4345 children: PMOpic.twitter.com/pjoJH9IEmS
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + seventeen =
Remember me
