ಮುಂಬೈ:‘ಮಸ್ತ್​ ಮಸ್ತ್​ ಹುಡ್ಗಿ ಬಂದ್ಲು..’ ಎನ್ನುತ್ತಲೇ ಸ್ಯಾಂಡಲ್​ವುಡ್​ನಲ್ಲಿ ಕಾಣಿಸಿಕೊಂಡಿದ್ದ ನಟಿ ರವೀನಾ ಟಂಡನ್​ ಇದೀಗ, ಸ್ಯಾಂಡಲ್​ವುಡ್​ ಜತೆಗೆ ಬಾಲಿವುಡ್​ನಲ್ಲೂ ಸದ್ದು ಮಾಡುತ್ತಿರುವ ಡ್ರಗ್ಸ್​ ಮಾಫಿಯಾ ಸಂಬಂಧ ದನಿ ಎತ್ತಿದ್ದಾರೆ.
ಡ್ರಗ್ಸ್​ ಮಾಫಿಯಾ ಹಿನ್ನೆಲೆಯಲ್ಲಿ ಮಾದಕ ವಸ್ತು ನಿಯಂತ್ರಣ ವಿಭಾಗದ (ಎನ್​ಸಿಬಿ) ಅಧಿಕಾರಿಗಳು ಚುರುಕುಗೊಂಡಿದ್ದು, ಡ್ರಗ್ಸ್​ ಪ್ರಕರಣ ಸಂಬಂಧ ನಟಿ ದೀಪಿಕಾ ಪಡುಕೋಣೆ ಹೆಸರೂ ತಳುಕು ಹಾಕಿಕೊಂಡ ಬಳಿಕ ಬಾಲಿವುಡ್​ನಲ್ಲಿ ಆ ಸಂಬಂಧದ ಚರ್ಚೆಗಳು ಗರಿಗೆದರಿವೆ. ಸೋಮವಾರ ಕಂಗನಾ ರಣವಾತ್​ ಸೇರಿ ಹಲವರು ಇದೇ ನೆಪದಲ್ಲಿ ದೀಪಿಕಾರ ಕಾಲೆಳೆಯುತ್ತಿದ್ದರೆ ರವೀನಾ ಟಂಡನ್​ ಸಾಮಾಜಿಕ ಕಳಕಳಿಯ ಮಾತಿನ ಮೂಲಕ ನಿಜವಾಗಿಯೂ ಮಸ್ತ್​ ಮಸ್ತ್​ ಹುಡ್ಗಿ ಎನಿಸಿಕೊಂಡಿದ್ದಾರೆ.
“ಸ್ವಚ್ಛಗೊಳಿಸಲೇಬೇಕಾದ ಸಮಯವಿದು. ಇದರಿಂದ ನಮ್ಮ ಯುವ ಹಾಗೂ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಇಲ್ಲಿಂದಲೇ ಶುರುವಾಗಲಿ, ಖಂಡಿತವಾಗಿಯೂ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಲಿ. ಅದನ್ನು ಬುಡಸಮೇತ ಕಿತ್ತು ಹಾಕುವಂತಾಗಲಿ. ತಪ್ಪಿತಸ್ಥರು, ಬಳಕೆದಾರರು, ಮಾರಾಟಗಾರರು, ಪೂರೈಕೆದಾರರು ಎಲ್ಲರಿಗೂ ಶಿಕ್ಷೆಯಾಗಲಿ..” ಎನ್ನುವ ಮೂಲಕ ಎಲ್ಲೂ ಡ್ರಗ್ಸ್​ ಎಂಬ ಸೊಲ್ಲೆತ್ತದಿದ್ದರೂ ಡ್ರಗ್ಸ್​ ಪ್ರಕರಣದ ಹಿನ್ನೆಲೆಯಲ್ಲಿ ಅದರ ವಿರುದ್ಧ ರವೀನಾ ದನಿ ಎತ್ತಿದ್ದಾರೆ. ಮಾತ್ರವಲ್ಲ, ಡ್ರಗ್ಸ್​ ಮಾಫಿಯಾ ತಡೆ ಸಲುವಾಗಿ ಸದ್ಯ ನಡೆಯುತ್ತಿರುವ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ.
Twas high time for clean up to happen.Very welcome!Will help our young/future generations.Start from here,surely,proceed to all sectors.Uproot it from its core.Punish th Guilty,users,the dealers/suppliers.The profiting Big Guys on the take,who give it a blind eye and ruin people.
— Raveena Tandon (@TandonRaveena)September 22, 2020

ಮತ್ತೊಂದೆಡೆ ರವೀನಾ ಟಂಡನ್​ ಇದೀಗ “ಕೆಜಿಎಫ್​-2” ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹೇಳಿಕೆ ಸ್ಯಾಂಡಲ್​ವುಡ್​ನಲ್ಲಿ ಸಂಚಲನ ಉಂಟು ಮಾಡಿದರೂ ಆಶ್ಚರ್ಯವೇನಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 5 =
Remember me
