ಮುಂಬೈ:“ನಮಸ್ತೆ” ಎಂದು ನೇರವಾಗಿ ಹೇಳುವ ಬದಲು “ಪಾರ್ಥನೆ ರೀತಿಯ ಸಂಕೇತ” ಎಂದಿರುವ ಅಮೆರಿಕನ್​ ನ್ಯೂಸ್​ ಚಾನೆಲ್​ ‘ಎಬಿಸಿ’ಗೆ ಬಾಲಿವುಡ್​ ನಟಿ ರವೀನಾ ಟಂಡನ್​ ಸಖತ್ತಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.
ಎಬಿಸಿ ಚಾನೆಲ್​ ತನ್ನ ಟ್ವಿಟರ್​ ಖಾತೆಯಲ್ಲಿ ಯುನೈಟೆಂಡ್​ ಕಿಂಗ್​ಡಮ್ ಪ್ರಿನ್ಸ್​ ಚಾರ್ಲ್ಸ್​ ಅವರ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ.
ವಿಡಿಯೋದಲ್ಲಿ ಏನಿದೆ?: ಕಾರ್ಯಕ್ರಮಕ್ಕೆ ಆಗಮಿಸುವ ಪ್ರಿನ್ಸ್​ ಚಾರ್ಲ್ಸ್​ ಕಾರಿನಿಂದ ಇಳಿದ ಬಳಿಕ ತಮ್ಮನ್ನು ಸ್ವಾಗತಿಸುವ ವ್ಯಕ್ತಿಗೆ ಶೇಕ್​ ಹ್ಯಾಂಡ್​ ಮಾಡಲು ಮುಂದಾಗುತ್ತಾರೆ. ಈ ವೇಳೆ ಕರೊನಾ ಭೀತಿ ಅರಿವಾಗಿ ತಕ್ಷಣ ತಮ್ಮ ಕೈಗಳನ್ನು ಹಿಂತೆಗೆದುಕೊಂಡು ಭಾರತೀಯ ಸಂಸ್ಕೃತಿಯಂತೆ ಎರಡು ಕೈಗಳನ್ನು ಜೋಡಿಸಿ ನಮಸ್ತೆ ಮಾಡುತ್ತಾರೆ. ಬಳಿಕ ಎಲ್ಲ ಅತಿಥಿಗಳ ಮುಂದೆ ಅದನ್ನೇ ಪಾಲಿಸುತ್ತಾರೆ.
ಕರೊನಾ ಕಾಳಜಿಯಿಂದ ಅತಿಥಿಗಳೊಂದಿಗೆ ಹ್ಯಾಂಡ್​ ಶೇಕ್​ ಮಾಡದೆ ಪ್ರಿನ್ಸ್​ ಚಾರ್ಲ್ಸ್​ ಪಾರ್ಥನೆ ರೀತಿಯ ಸಂಕೇತವನ್ನು ಬಳಸಿದ್ದಾರೆ ಎಂದು ಎಬಿಸಿ ಟ್ವಿಟರ್​ನಲ್ಲಿ ಬರೆದುಕೊಂಡಿದೆ.
ಇದಕ್ಕೆ ರೀಟ್ವೀಟ್​ ಮಾಡಿರುವ ರವೀನಾ ಟಂಡನ್​, ಅದು ಪಾರ್ಥನೆ ರೀತಿಯ ಸಂಕೇತವಲ್ಲ. ಅದನ್ನು ನಮಸ್ತೆ ಎಂದು ಕರೆಯುತ್ತಾರೆ. ಸಾರ್ವಜನಿಕವಾಗಿ ಹೇಳುವ ಮುನ್ನ ಅದೇನೆಂದು ತಿಳಿಯಲು ಮನೆಯಲ್ಲಿ ಸ್ವಲ್ಪ ಹೋಮ್​ವರ್ಕ್​ ಮಾಡಿಕೊಳ್ಳಿ ಎಂದು ಎಬಿಸಿಗೆ ರವೀನಾ ನಮಸ್ತೆ ಪಾಠ ಮಾಡಿದ್ದಾರೆ.(ಏಜೆನ್ಸೀಸ್​)
It’s a “Namaste”. Do some homework@ABChttps://t.co/OUI9nTtDob
— Raveena Tandon (@TandonRaveena)March 12, 2020

ಸಂಯೋಜಿತ ಎಚ್​ಐವಿ ಔಷಧ ಬಳಸಿ ಕರೊನಾ​ ರೋಗಿಗೆ ಯಶಸ್ವಿ ಚಿಕಿತ್ಸೆ ನೀಡಿದ ಭಾರತೀಯ ವೈದ್ಯರು!

ಹೀಗೆ ಮಾಡಿದರೆ ಕರೊನಾ ವೈರಸ್​ನಿಂದ ತಪ್ಪಿಸಿಕೊಳ್ಳಬಹುದು: ವೃದ್ಧನ ಪ್ಲಾನ್​ಗೆ ಭೇಷ್​ ಎಂದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + twenty =
Remember me
