ನವದೆಹಲಿ :ಯುಎಇಯಲ್ಲಿ ನಡೆಯಲಿರುವ ಟಿ20 ವರ್ಲ್ಡ್​ ಕಪ್​ ಕ್ರಿಕೆಟ್​ ಪಂದ್ಯಾವಳಿಯ ನಂತರ ಭಾರತ ಕ್ರಿಕೆಟ್​ ತಂಡದ ಹೆಡ್​ ಕೋಚ್​ ಕೆಲಸಕ್ಕೆ ಆಲ್​ರೌಂಡರ್​ ರವಿ ಶಾಸ್ತ್ರಿ ಅವರು ಗುಡ್​ಬೈ ಹೇಳಲಿದ್ದಾರೆ ಎನ್ನಲಾಗಿದೆ. ಅವರೊಂದಿಗೆ ಹಾಲಿ ಬೌಲಿಂಗ್​ ಕೋಚ್​​ ಭರತ್​ ಅರುಣ್, ಫೀಲ್ಡಿಂಗ್ ಕೋಚ್​ ಆರ್​.ಶ್ರೀಧರ್​ ಮತ್ತು ಬ್ಯಾಟಿಂಗ್​ ಕೋಚ್​ ವಿಕ್ರಂ ರಾಥೌರ್​ ಅವರ ಸ್ಥಾನಕ್ಕೂ ಬೇರೆ ಕೋಚ್​ಗಳ ನೇಮಕವಾಗಲಿದೆ ಎಂದು ವರದಿಗಳು ತಿಳಿಸಿವೆ.
2017 ರಿಂದ ಟೀಂ ಇಂಡಿಯಾದ ಕೋಚಿಂಗ್​ ಜವಾಬ್ದಾರಿ ವಹಿಸಿಕೊಂಡಿರುವ ರವಿ ಶಾಸ್ತ್ರಿ ಅವರ ಕಾರ್ಯಾವಧಿಯು ಕಾಂಟ್ರ್ಯಾಕ್ಟ್​ ಪ್ರಕಾರ ನವೆಂಬರ್​ನಲ್ಲಿ ಮುಗಿಯಲಿದೆ. ತದನಂತರ ತಾವು ತಂಡದೊಂದಿಗೆ ಮುಂದುವರಿಯುವುದಿಲ್ಲ ಎಂದು ಶಾಸ್ತ್ರಿ ಕ್ರಿಕೆಟ್​ ಬೋರ್ಡ್​ನ ಕೆಲವು ಸದಸ್ಯರಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತ ಕ್ರಿಕೆಟ್​ ಬೋರ್ಡ್​ ಕೂಡ ಹೊಸ ಕೋಚ್​ಗಳ ಗುಂಪನ್ನು ನಿಯುಕ್ತಿ ಮಾಡುವ ಆಲೋಚನೆ ಹೊಂದಿದೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.(ಏಜೆನ್ಸೀಸ್)
ಕೋವಿಶೀಲ್ಡ್​-ಕೋವಾಕ್ಸಿನ್ ಡೋಸ್ ಮಿಕ್ಸ್​ ಮಾಡಬಹುದೇ? ನಡೆಯಲಿದೆ ಅಧ್ಯಯನ

CODE RED! ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ವರದಿ ನೀಡಿದೆ, ಮಾನವರಿಗೆ ಎಚ್ಚರಿಕೆಯ ಕರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − four =
Remember me
