ನವದೆಹಲಿ:ಹಣಕಾಸು ಸಂಸ್ಥೆಗಳು ಹಾಗೂ ಆರ್ಥಿಕ ವಹಿವಾಟಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುವ ಅವಕಾಶ ಇರುವ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ತಕ್ಷಣದಿಂದಲೇ ಜಾರಿಗೆ ಬರುವಂಥ ಮಹತ್ವದ ನಿರ್ದೇಶನವೊಂದನ್ನು ನೀಡಿದೆ.
ಪ್ರಮುಖವಾಗಿ ಸಾಲ ಮಂಜೂರು ಮತ್ತು ಸಾಲ ವಿತರಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಆರ್​ಬಿಐ ಈ ನಿರ್ದೇಶನವನ್ನು ನೀಡಿದೆ. ಆರ್ಥಿಕ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಬಜಾಜ್​ ಫೈನಾನ್ಸ್​ ಲಿ. ಕಂಪನಿಗೆ ಆರ್​​ಬಿಐ ಈ ನಿರ್ದೇಶನ ನೀಡಿದೆ.
ಕಂಪನಿಯು ತನ್ನ ಎರಡು ಸಾಲ ಯೋಜನೆಗಳಾದ ಇಕಾಮ್​ ಮತ್ತು ಇನ್​ಸ್ಟಾ ಇಎಂಐ ಕಾರ್ಡ್​ ಅನ್ವಯ ಯಾವುದೇ ಸಾಲ ಮಂಜೂರು ಮತ್ತು ಸಾಲ ವಿತರಣೆ ಮಾಡಬಾರದು. ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಸೂಚನೆಯನ್ನು ಪಾಲಿಸಬೇಕು ಎಂದು ಬಜಾಜ್​ ಫೈನಾನ್ಸ್​​ ಲಿಮಿಟೆಡ್​​ಗೆ ಆರ್​​ಬಿಐ ತಿಳಿಸಿದೆ.
ಡಿಜಿಟಲ್ ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳ ನಿಬಂಧನೆಗಳನ್ನು ಕಂಪನಿಯು ಅನುಸರಿಸದಿರುವ ಹಿನ್ನೆಲೆಯಲ್ಲಿ ಆರ್​​ಬಿಐ ಈ ಕ್ರಮಕೈಗೊಂಡಿದೆ. ಅದರಲ್ಲೂ ವಿಶೇಷವಾಗಿ ಈ ಎರಡು ಸಾಲ ನೀಡುವ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಕೆಲವು ಲೋಪಗಳು ಇರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಆರ್​​ಬಿಐ ತಿಳಿಸಿದೆ.
Action against Bajaj Finance Ltd. under Section 45L(1)(b) of the Reserve Bank of India Act, 1934https://t.co/o5qMfckCZi
‘ದೇವ್ರು’ ಮೆಚ್ಚೋ ಆಟ ಆಡಿದ ವಿರಾಟ್​: ‘ಆ ದಿನ ನನಗೆ ನಗು ತಡೆಯಲು ಆಗಲಿಲ್ಲ’ ಎಂದ ಸಚಿನ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 18 =
Remember me
