ನವದೆಹಲಿ:ಗ್ರಾಹಕರ ಹಿತರಕ್ಷಿಸಲು ಬ್ಯಾಂಕಿಂಗ್ ಕಾನೂನಿಗೆ ತಿದ್ದುಪಡಿ ತರುವ ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಈ ತಿದ್ದುಪಡಿಯ ಮೂಲಕ ಸಹಕಾರಿ ವಲಯದ ಬ್ಯಾಂಕ್​ಗಳ ಮೇಲೆ ಆರ್​ಬಿಐ ನಿಗಾವಣೆ ಹೆಚ್ಚಲಿದೆ. ಸಹಕಾರಿ ಬ್ಯಾಂಕ್​ಗಳ ಬಲವರ್ಧನೆ ಆಗಲಿದ್ದು, ಪಿಎಂಸಿ ಬ್ಯಾಂಕ್ ರೀತಿ ಬಿಕ್ಕಟ್ಟು ಭವಿಷ್ಯದಲ್ಲಿ ಎದುರಾಗುವುದು ತಪು್ಪತ್ತದೆ ಎಂದು ಸರ್ಕಾರ ಹೇಳಿದೆ.
ಪ್ರಸ್ತಾವನೆ ಪ್ರಕಾರ, ಆರ್​ಬಿಐ ಮಾರ್ಗದರ್ಶಿ ನಿಯಮದಲ್ಲಿ ಮಾರ್ಪಾಡು ಮಾಡಲಾಗುತ್ತಿದೆ. ಆರ್​ಬಿಐ ಸೂಚಿಸಿದ ನಿಯಮದ ಪ್ರಕಾರವೇ ಸಹಕಾರಿ ಬ್ಯಾಂಕುಗಳ ಲೆಕ್ಕಪತ್ರ ಪರಿಶೋಧನೆ ಕಡ್ಡಾಯವಾಗಲಿದೆ. ಲೆಕ್ಕಪತ್ರದಲ್ಲಿ ವ್ಯತ್ಯಾಸ ಕಂಡು ಬಂದ ಬ್ಯಾಂಕ್​ಗಳನ್ನು ಸೂಪರ್​ಸೀಡ್ ಮಾಡುವ ಅಧಿಕಾರವೂ ಆರ್​ಬಿಐಗೆ ಇರಲಿದೆ ಎಂದು ಸಂಪುಟ ಸಭೆಯ ಬಳಿಕ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.
ಸಹಕಾರ ಬ್ಯಾಂಕ್​ಗಳ ಆಡಳಿತಾತ್ಮಕ ವಿಷಯದಲ್ಲಿ ಸಹಕಾರಿ ಇಲಾಖೆಯ ರಿಜಿಸ್ಟ್ರಾರ್ ಸಲಹೆ- ಸೂಚನೆ ನೀಡಬಹುದಾಗಿದೆ. ಬ್ಯಾಂಕ್​ಗಳ ಸಿಇಒ ಹುದ್ದೆಗೆ ನೇಮಕಾತಿಗೆ ವಿದ್ಯಾರ್ಹತೆ ನಿಗದಿಯಾಗಲಿದೆ. ವಾಣಿಜ್ಯ ವಲಯದ ಬ್ಯಾಂಕ್​ಗಳಿಗೆ ಸಿಇಒ ನೇಮಕ ಮಾಡುವುದಕ್ಕೂ ಮುನ್ನ ಆರ್​ಬಿಐ ಅನುಮತಿ ಕಡ್ಡಾಯವಾಗಲಿದೆ. ಇಂಥ ಉಪಕ್ರಮಗಳಿಂದ ಸಹಕಾರಿ ಬ್ಯಾಂಕ್​ಗಳಲ್ಲಿ ಆರ್ಥಿಕ ಸ್ಥಿರತೆ ಕಾಣಲು ಸಾಧ್ಯವಾಗಲಿದೆ. ದೇಶದಲ್ಲಿ ಆರ್​ಬಿಐನಿಂದ ಮಾನ್ಯತೆ ಪಡೆದಿರುವ 1,540 ಸಹಕಾರಿ ಬ್ಯಾಂಕ್​ಗಳಿದ್ದು, 8.60 ಕೋಟಿ ಗ್ರಾಹಕರನ್ನು ಮತ್ತು -ಠಿ; 5 ಲಕ್ಷ ಕೋಟಿ ಠೇವಣಿಯನ್ನು ಹೊಂದಿದೆ.
ಮಹಾರಾಷ್ಟ್ರದಲ್ಲಿ ಹೊಸ ಬಂದರು:ಮಹಾರಾಷ್ಟ್ರದ ವಡ್ವಾನ್ ಬಳಿ -ಠಿ; 65,544 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬಂದರು ನಿರ್ವಣಕ್ಕೆ ಕೇಂದ್ರ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ. ಜವಾಹರ್​ಲಾಲ್ ನೆಹರೂ ಬಂದರಿನಲ್ಲಿ ಎಸ್​ಪಿವಿ (ವಿಶೇಷ ಉದ್ದೇಶದ ವಾಹನ) ಹೊಂದುವುದಕ್ಕೂ ಸಂಪುಟ ಸಮ್ಮತಿ ನೀಡಿದೆ.
ರಾಯಚೂರು ಐಐಐಟಿಗೆ ರಾಷ್ಟ್ರೀಯ ಮಹತ್ವ
ರಾಯಚೂರಿನಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಸೇರಿ ದೇಶದ ಐದು ಐಐಐಟಿಗಳಿಗೆ ರಾಷ್ಟ್ರೀಯ ಮಟ್ಟದ ಮಹತ್ವದ ಶಿಕ್ಷಣ ಸಂಸ್ಥೆ ಎಂಬ ಅಬಿಧಾನ ನೀಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಈ ಸಂಸ್ಥೆಗಳು ಬಿ.ಟೆಕ್, ಎಂ.ಟೆಕ್ ಮತ್ತು ಪಿಎಚ್.ಡಿ ಪದವಿಗಳನ್ನು ರಾಷ್ಟ್ರೀಯ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳ ಮಾದರಿಯಲ್ಲೇ ನೀಡಬಹುದಾಗಿದೆ.
ಗುಜರಾತ್​ನ ಸೂರತ್, ಮಧ್ಯಪ್ರದೇಶದ ಭೋಪಾಲ್, ಬಿಹಾರದ ಭಾಗಲಪುರ್, ತ್ರಿಪುರಾದ ಅಗರ್ತಾಲ ಐಐಐಟಿಗಳು ಇಂಥ ಶ್ರೇಯ ಪಡೆದ ಉಳಿದ ನಾಲ್ಕು ಸಂಸ್ಥೆಗಳಾಗಿವೆ. ಈ ಐಐಐಟಿಗಳನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 8 =
Remember me
