ನವದೆಹಲಿ:ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಳಿಕ ಬ್ಯಾಂಕ್​ ಸಾಲಗಾರರಿಗೆ ಬಡ್ಡಿ ಬರೆ ಎದುರಾಗಿದೆ. ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಪ್ರಮುಖ ಪಾಲಿಸಿ ದರ ಏರಿಕೆ ಘೋಷಿಸಿದೆ. ಇದರಿಂದಾಗಿ ಎಲ್ಲ ರೀತಿಯ ಬ್ಯಾಂಕ್​ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದ್ದರೆ, ನಿಶ್ಚಿತ ಠೇವಣಿ ಇರಿಸುವವರಿಗೆ ಕೊಂಚ ಪ್ರಯೋಜನವಾಗಲಿದೆ.ಆರ್​ಬಿಐ ಗವರ್ನರ್​ ಶಕ್ತಿಕಾಂತ ದಾಸ್​ ಬುಧವಾರ ಅಪರಾಹ್ನ 2 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಈ ನಿರ್ಧಾರ ಪ್ರಕಟಿಸಿದರು. ಯೂಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿದ ಮೇಲೆ ಬದಲಾದ ಜಾಗತಿಕ ಸನ್ನಿವೇಶ ಅರ್ಥ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಪೂರೈಕೆ ಜಾಲದ ಮೇಲೆ ಅಡಚಣೆ ಉಂಟಾಗಿ ಹಣದುಬ್ಬರ ಪ್ರಮಾಣ ಹೆಚ್ಚಾಗಿದೆ.
ನಿಫ್ಟಿ, ಸೆನ್ಸೆಕ್ಸ್​ 2% ಕುಸಿತ:ದಲಾಲ್​ ಸ್ಟ್ರೀಟ್​ನಲ್ಲಿ ಬುಧವಾರ ಕರಡಿ ಕುಣಿತ ಜೋರಾಗಿ, ಹೂಡಿಕೆದಾರರು ಕಳೆದುಕೊಂಡದ್ದು ಬರೋಬ್ಬರಿ 6.27 ಲಕ್ಷ ಕೋಟಿ ರೂಪಾಯಿ. ಆರ್​ಬಿಐ ರೆಪೋ ದರ, ಸಿಆರ್​ಆರ್​ ಏರಿಕೆ ಪ್ರಕಟಿಸಿದ ಬೆನ್ನಿಗೆ ಬಿಎಸ್​ಇ ಸೆನ್ಸೆಕ್ಸ್​ 1,306.96 ಅಂಶ (2.29%) ಕುಸಿದು 55,669.03 ಅಂಶದಲ್ಲಿ, ಎನ್​ಎಸ್​ಇ ನಿಫ್ಟಿ 50 ಸೂಚ್ಯಂಕ 391.50 ಅಂಶ (2.29%) ಕುಸಿದು 16,677.60 ಅಂಶದಲ್ಲಿ ದಿನದ ವಹಿವಾಟು ಮುಗಿಸಿವೆ. ಆಟೋ, ಬ್ಯಾಂಕ್​, ಎ್​ಎಂಸಿಜಿ, ಪವರ್​, ಮೆಟಲ್​, ರಿಯಾಲ್ಟಿ, ಹೆಲ್ತ್​ಕೇರ್​, ಕ್ಯಾಪಿಟಲ್​ ಗೂಡ್ಸ್​ ಸೂಚ್ಯಂಕಗಳು ಕೂಡ ಶೇ.1&3ರ ತನಕ ಕುಸಿತ ಕಂಡಿವೆ. ಬಿಎಸ್​ಇ ಲಿಸ್ಟೆಡ್​ ಕಂಪನಿಗಳ ಮಾರುಕಟ್ಟೆ ಬಂಡವಾಳ 6,27,359.72 ಕೋಟಿ ರೂ.ನಷ್ಟವಾಗಿದ್ದು 2,59,60,852.44 ಕೋಟಿ ರೂ.ಗೆ ತಲುಪಿದೆ.
ಅಲ್ಪಾವಧಿ ನಿಶ್ಚಿತ ಠೇವಣಿ ದರ ಏರಿಕೆಬಡ್ಡಿ ದರ ಕೆಳಗಿನ ಹಂತದಿಂದ ಯೂರ್ಟನ್​ ತೆಗೆದುಕೊಂಡಾಗ ಸಾಮಾನ್ಯ ವಾಗಿ ಅಲ್ಪಾವಧಿ ಮತ್ತು ಮಧ್ಯಮಾವಧಿಯ ನಿಶ್ಚಿತ ಠೇವಣಿಗಳ ಬಡ್ಡಿದರ ಮೊದಲು ಏರಿಕೆಯಾಗುತ್ತದೆ. ದೀರ್ಘಾವಧಿ ನಿಶ್ಚಿತ ಠೇವಣಿ ಬಡ್ಡಿದರವು ಏರಿಕೆಯಾಗಲು ಸ್ವಲ್ಪ ಸಮಯ ಕಾಯಬೇಕಾಗಬಹುದು. ಹೀಗಾಗಿ ದೀರ್ಘಾವಧಿಯ ಠೇವಣಿಯಲ್ಲಿ ಹಣವನ್ನು ಕೂಡಿಡುವುದು ಸರಿಯಾದ ಕ್ರಮವಲ್ಲ. ಅದನ್ನು ನವೀಕರಿಸುವ ಸಮಯವಾಗಿದ್ದರೆ ಅಲ್ಪಾವಧಿಗೆ ಬದಲಾಯಿಸಲು ಇದು ಸರಿಯಾದ ಸಮಯ ಎನ್ನುತ್ತಾರೆ ಹೂಡಿಕೆ ಪರಿಣತರು.
ತಟ್ಟಲಿದೆ ಬಡ್ಡಿ ದರದ ಬಿಸಿಸಾಲ ಪಡೆಯಲು ಸಿದ್ಧತೆ ನಡೆಸಿದ್ದರೆ ಬೇಗ ಸಾಲ ಪಡೆಯುವುದು ಒಳಿತು. ಸಾಲದ ಬಡ್ಡಿದರ ಶ್ರೀ ಏರಿಕೆ ಆಗಲಿದೆ. ಈಗಾಗಲೇ ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲ ಪಡೆದವರಿಗೂ ಬಡ್ಡಿ ದರ ಏರಿಕೆಯ ಬಿಸಿ ತಟ್ಟಲಿದೆ.
ಸಾಲ ಹೊರೆ ಹೆಚ್ಚಳಇಎಂಐಗಳು ಏರಿಕೆಯಾಗಲಿವೆ. ಸ್ಟೇಟ್​ ಬ್ಯಾಂಕ್​ ಆ್​ ಇಂಡಿಯಾದಲ್ಲಿ ಗ್ರಾಹಕರೊಬ್ಬರು ಪಡೆದ 30 ಲಕ್ಷ ರೂ. ಸಾಲದ ಲೆಕ್ಕಾಚಾರ ಇಲ್ಲಿದೆ. ಇದರಲ್ಲಿ ಬಡ್ಡಿದರ ರೆಪೋದರಕ್ಕೆ ಹೊಂದಿಕೊಂಡಿದೆ.
ಸಭೆಯ ಪ್ರಮುಖ ಅಂಶಗಳು* ರೆಪೋ ದರವನ್ನು 40 ಮೂಲಾಂಶ ಏರಿಸಿದ್ದು ಶೇಕಡ 4.4 ಆಗಿದ್ದು, ತತ್​ಕ್ಷಣದಿಂದಲೇ ಜಾರಿ ಆಗಿದೆ* 2018ರ ಆಗಸ್ಟ್​ ಬಳಿಕ ಇದೆ ಮೊದಲ ಸಲ ರೆಪೋ ದರ ಏರಿಕೆಯಾಗಿದ್ದು, ಕಾರ್ಪೊರೇಟ್​ ಮತ್ತು ವೈಯಕ್ತಿಕ ಸಾಲದ ವೆಚ್ಚ ಹೆಚ್ಚಾಗಲಿದೆ* ಕ್ಯಾಷ್​ ರಿಸರ್ವ್​ ರೇಷ್ಯೋ 50 ಮೂಲಾಂಶ ಏರಿಸಿದ್ದು ಮೇ 21ರಿಂದ ಅನ್ವಯವಾಗುವಂತೆ ಶೇಕಡ 4.5 ಆಗಲಿದೆ* ಹಣದುಬ್ಬರದ ಬೆಳವಣಿಗೆ ಗಮನಿಸಿ ಅದನ್ನು ನಿಯಂತ್ರಿಸುವ ಸಲುವಾಗಿ ದಿಢೀರ್​ ಆಗಿ ವಿತ್ತೀಯ ನೀತಿ ಸಮಿತಿ ಸಭೆಯನ್ನು ಮೇ 2&4ರ ತನಕ ಆರ್​ಬಿಐ ನಡೆಸಿತ್ತು* ಮುಂದಿನ ದಿನಗಳಲ್ಲಿ ಹಣದುಬ್ಬರ ಪ್ರಮಾಣ ನಿಶ್ಚಿತ ಮಿತಿಯೊಳಗೆ ಉಳಿಸಿಕೊಳ್ಳುವುದಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ಆರ್​ಬಿಐ ನಿರ್ಧರಿಸಿದೆ* ಕೋವಿಡ್​ 19 ಸೋಂಕಿನ ನಿಯಂತ್ರಣಕ್ಕೆ ಹೊಸದಾಗಿ ಹೇರುವ ಲಾಕ್​ಡೌನ್​ ಮತ್ತು ಇತರೆ ರ್ನಿಬಂಧಗಳು ಪೂರೈಕೆ ಜಾಲಕ್ಕೆ ತೊಂದರೆ ಉಂಟುಮಾಡಿ, ಲಾಜಿಸ್ಟಿಕ್ಸ್​ ವೆಚ್ಚವನ್ನು ಹೆಚ್ಚಿಸುತ್ತದೆ. ಇದಲ್ಲದೆ, ರಸಗೊಬ್ಬರ ಬೆಲೆ ಏರಿಕೆ ಸಹಜವಾಗಿಯೇ ನೇರವಾಗಿ ಆಹಾರದ ಹಣದುಬ್ಬರಕ್ಕೆ ಕಾರಣವಾಗುತ್ತದೆ* ಜಾಗತಿಕ ಸರಕು ದರದಲ್ಲಿ ಆಗುವ ವ್ಯತ್ಯಾಸವು ಭಾರತದಲ್ಲಿನ ಆಹಾರದ ಹಣದುಬ್ಬರವನ್ನು ನಿಯಂತ್ರಿಸುತ್ತಿದೆ. ಈ ಹಣದುಬ್ಬರ ನಿಯಂತ್ರಿಸುವುದಕ್ಕೆ ವಿವಿಧ ಸ್ತರದ ಕ್ರಮಗಳು ಅಗತ್ಯವಾಗಿದ್ದು, ಹಂತ ಹಂತವಾಗಿ ಅನುಸರಿಸುವುದಾಗಿ ಆರ್​ಬಿಐ ಹೇಳಿದೆ* ಮುಂದಿನ ಮಾನಿಟರಿ ಪಾಲಿಸಿ ಕಮಿಟಿ ಸಭೆ ಜೂ.6&8ರಂದು ನಡೆಯಲಿದೆ.
ಮದ್ವೆಯಾದ 11ನೇ ದಿನಕ್ಕೆ ವರ ಸಾವು, ವಧುವಿನ ಸ್ಥಿತಿ ಚಿಂತಾಜನಕ! ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ

ಪತ್ನಿಯ ಕೊಲೆ ಕೇಸ್​ನಲ್ಲಿ ಗಂಡನಿಗೆ ಜೈಲುಶಿಕ್ಷೆ, ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ! ದುಡುಕಿಬಿಟ್ಟ ಮಾವ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − three =
Remember me
