ನವದೆಹಲಿ:ಬ್ಯಾಂಕಿಂಗ್ ನಿಯಮ ಉಲ್ಲಂಘಿಸಿದ ಕಾರಣ ಕರ್ನಾಟಕ ಮತ್ತು ತಮಿಳುನಾಡಿನ ಎರಡು ಸಹಕಾರಿ ಬ್ಯಾಂಕ್​ಗಳ ವಿರುದ್ಧ ಕ್ರಮ ತೆಗೆದುಕೊಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ), ಬುಧವಾರ ಅವುಗಳಿಗೆ 15 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.
ದಾವಣಗೆರೆಯ ಮಿಲಾತ್ ಕೋ ಆಪರೇಟಿವ್ ಬ್ಯಾಂಕ್​ ಮತ್ತು ತೂತುಕುಡಿಯ ತಿರುವೈಕುಂಠಂ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್​ ಲಿಮಿಟೆಡ್​ ನಿಯಮ ಉಲ್ಲಂಘಿಸಿದ ಸಹಕಾರಿ ಬ್ಯಾಂಕುಗಳು. ಈ ಪೈಕಿ ಕರ್ನಾಟಕದ ಮಿಲಾತ್ ಬ್ಯಾಂಕ್​ಗೆ 10 ಲಕ್ಷ ರೂಪಾಯಿ ಮಾನೆಟರಿ ಪೆನಾಲ್ಟಿ ವಿಧಿಸಲಾಗಿದೆ. ಈ ಬ್ಯಾಂಕು ಆರ್​ಬಿಐ ವಿಧಿಸಿದ್ದ ನಿಯಮ, ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮ ಜರುಗಿಸಲಾಗಿದೆ ಎಂದು ಆರ್​ಬಿಐ ತಿಳಿಸಿದೆ.
ಇದನ್ನೂ ಓದಿ:ಚುನಾವಣಾ ಸಿಬ್ಬಂದಿ ಜತೆಗೆ ಪೆನ್​ ವಿಚಾರಕ್ಕೆ ವಾಗ್ವಾದಕ್ಕಿಳಿದ್ರು ಮಾಜಿ ಶಾಸಕ ಕಾಶಪ್ಪನವರ
ಇದೇ ರೀತಿ, ತಮಿಳುನಾಡಿನ ತಿರುವೈಕುಂಠಂ ಬ್ಯಾಂಕು ಆರ್​ಬಿಐ ನಿರ್ದೇಶನ ಉಲ್ಲಂಘಿಸಿ ಬ್ಯಾಂಕಿನ ನಿರ್ದೇಶಕರಿಗೆ ಸಾಲ ಮತ್ತು ಮುಂಗಡ ಪಾವತಿ ಮಾಡಿದ್ದಕ್ಕಾಗಿ 5 ಲಕ್ಷ ರೂಪಾಯಿ ಮಾನೆಟರಿ ಪೆನಾಲ್ಟಿಯನ್ನು ಆರ್​​ಬಿಐ ವಿಧಿಸಿದೆ. ಕಳೆದ ವರ್ಷ ಮಾರ್ಚ್​ 31ರ ಲೆಕ್ಕಪತ್ರಗಳ ಆಧಾರದ ಮೇಲೆ ಆರ್​ಬಿಐ ಈ ಕ್ರಮ ಜರುಗಿಸಿದೆ. (ಏಜೆನ್ಸೀಸ್)
ಬಿಡೆನ್ ದಾಖಲೆ ಮತಗಳಿಕೆ – ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರ ದಾಖಲೆ ಗೆಲುವು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight + 13 =
Remember me
