ನವದೆಹಲಿ:ಮುಂದಿನ ಆರ್ಥಿಕ ಚೇತರಿಕೆಗೆ ನೆರವಾಗಲು ಹೊಂದಾಣಿಕೆಯ ನಿಲುವಿನೊಂದಿಗೆ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಪ್ರಮುಖ ಬಡ್ಡಿದರಗಳನ್ನು ಯಥಾಸ್ಥಿತಿ ಕಾಯ್ದಿರಿಸಿಕೊಂಡಿದೆ.
ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಶೇ 4 ರಲ್ಲಿ ಮುಂದುವರಿಸಿರುವ ಆರ್​ಬಿಐನ ಹಣಕಾಸು ನೀತಿ ಸಮಿತಿ, ರಿವರ್ಸ್​ ರೆಪೋ ದರವನ್ನು ಕೂಡ ಶೇ. 3.35ರೊಂದಿಗೆ ಯಥಾಸ್ಥಿತಿ ಕಾಯ್ದುಕೊಂಡಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್​, ಕೋವಿಡ್​ ಎರಡನೇ ಅಲೆಯ ಪ್ರಭಾವದಿಂದ ಕುಸಿದಿರುವ ಆರ್ಥಿಕತೆ ಮತ್ತೆ ಚೇತರಿಕೆ ಪಡೆದುಕೊಳ್ಳುವವರೆಗೂ ಆರ್​ಬಿಐ ಹಣಕಾಸು ಸಮಿತಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ಎಂದು ತಿಳಿಸಿದರು. ಅನೇಕ ಆರ್ಥಿಕ ಕ್ಷೇತ್ರಗಳು ಪ್ರಗತಿಯಲ್ಲಿದ್ದು, ಸದ್ಯ ಭಾರತದ ಆರ್ಥಿಕ ಪರಿಸ್ಥಿತಿ ಉತ್ತಮ ಹಾದಿಯತ್ತ ಸಾಗುತ್ತಿದೆ ಎಂದು ದಾಸ್​ ಸ್ಪಷ್ಟನೆ ನೀಡಿದ್ದಾರೆ.
ವಿಶೇಷವಾಗಿ ದೇಶದ ಕೆಲವು ಭಾಗಗಳಲ್ಲಿ ಕರೊನಾ ಸೋಂಕುಗಳು ಹೆಚ್ಚುತ್ತಿದ್ದು, ಈ ಸಂದರ್ಭದಲ್ಲಿ ನಮ್ಮ ಕಾವಲುಗಾರರನ್ನು ಕೈಬಿಡದೇ, ಮೂರನೇ ಅಲೆಯ ಯಾವುದೇ ಸಾಧ್ಯತೆಯ ವಿರುದ್ಧ ಜಾಗರೂಕರಾಗಿರುವುದು ತುಂಬಾ ಪ್ರಮುಖವಾಗಿದೆ ಎಂದರು. ಆದಾಗ್ಯೂ, ಆರ್ಥಿಕತೆಯಲ್ಲಿ ಪೂರೈಕೆ-ಬೇಡಿಕೆ ಸಮತೋಲನವನ್ನು ಪುನಃಸ್ಥಾಪಿಸಲು ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಕೇಂದ್ರ ಬ್ಯಾಂಕ್ ಗವರ್ನರ್ ಹೇಳಿದರು.
ಇನ್ನು ಗಮನಿಸಬೇಕಾದ ಅಂಶವೆಂದರೆ ಸತತ ಏಳನೇ ಅವಧಿಗೆ ಆರ್​ಬಿಐ ಪ್ರಮುಖ ಬಡ್ಡಿದರಗಳಲ್ಲಿ ಬದಲಾವಣೆ ಮಾಡದೇ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಮುಂದಿನ ಹಣಕಾಸು ವರ್ಷ 2022ರ ಹೊತ್ತಿಗೆ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇ 9.5ಕ್ಕೆ ಉಳಿಸಿಕೊಳ್ಳಲಾಗಿದೆ.(ಏಜೆನ್ಸೀಸ್​)
ಪಿ.ವಿ. ಸಿಂಧು vs ಸಾನಿಯಾ ಮಿರ್ಜಾ: ತೆಲಂಗಾಣದಲ್ಲಿ ಜೋರಾಯ್ತು ಕ್ರೀಡಾ ರಾಜಕೀಯ..!

ದಿನಗೂಲಿ ನೌಕರರು ಸಹ ಪ್ರತಿ ಲೀಟರ್​ ಪೆಟ್ರೋಲ್​ಗೂ ತೆರಿಗೆ ಕಟ್ತಾರೆ: ನಟ ಧನುಷ್​ಗೆ ಹೈಕೋರ್ಟ್​ ತರಾಟೆ!

ಪಾಲಿಕೆ ತಪ್ಪಿಗೆ ಜನರಿಗೆ ಬರೆ; 5 ವರ್ಷದ ಆಸ್ತಿ ತೆರಿಗೆ ಕಟ್ಟುವಂತೆ ನೋಟಿಸ್ ನೀಡುತ್ತಿರುವ ಬಿಬಿಎಂಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 2 =
Remember me
