ನವದೆಹಲಿ:ದೇಶದ ಅರ್ಥವ್ಯವಸ್ಥೆ ಬಲಪಡಿಸುವುದಕ್ಕೆ ಪೂರಕವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಎರಡು ಉಪಕ್ರಮಗಳನ್ನು ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅವುಗಳನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದರು. ಸರ್ಕಾರಿ ಸೆಕ್ಯುರಿಟಿ ಮಾರುಕಟ್ಟೆಯಲ್ಲಿ ಚಿಲ್ಲರೆ ಹೂಡಿಕೆದಾರರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ರಿಟೇಲ್ ಡೈರೆಕ್ಟ್ ಇನ್​ವೆಸ್ಟ್​ಮೆಂಟ್ ಸ್ಕೀಮ್ ಮತ್ತು ಅಹವಾಲು ಪರಿಹರಿಸುವ ವ್ಯವಸ್ಥೆ ಸುಧಾರಣೆಗಾಗಿ ಇಂಟೆಗ್ರೇಟೆಡ್ ಒಂಬುಡ್ಸ್​ಮನ್ ಯೋಜನೆಯನ್ನು ಆರ್​ಬಿಐ ಪರಿಚಯಿಸಿದೆ ಎಂದು ಪ್ರಧಾನಿ ಹೇಳಿದರು.
ಅಭಿವೃದ್ಧಿ ಕೆಲಸಗಳಿಗೆ ಆರ್ಥಿಕ ಸಂಪನ್ಮೂಲವನ್ನು ಒಗ್ಗೂಡಿಸಲು ರಿಟೇಲ್ ಡೈರೆಕ್ಟ್ ಸ್ಕೀಮ್ ನೆರವಾಗಲಿದೆ. ದೇಶದ ಸಣ್ಣ ಹೂಡಿಕೆದಾರರು ಸರ್ಕಾರದ ಸೆಕ್ಯುರಿಟಿಗಳ ಮೇಲೆ ಸುರಕ್ಷಿತವಾಗಿ ಮತ್ತು ಸರಳವಾಗಿ ಹೂಡಿಕೆ ಮಾಡಲು ಇದು ಅನುಕೂಲ ಮಾಡಿಕೊಟ್ಟಿದೆ. ಇದೇ ರೀತಿ, ಬ್ಯಾಂಕಿಂಗ್ ಕ್ಷೇತ್ರದ ಒಂಬುಡ್ಸ್​ಮನ್ ವ್ಯವಸ್ಥೆಯು ಇತರೆ ಒಂಬುಡ್ಸ್​ಮನ್ ವ್ಯವಸ್ಥೆಗಳಿರುವ ಸಂಯೋಜಿತ ವ್ಯವಸ್ಥೆಯೊಂದಿಗೆ ಸೇರಿಕೊಂಡು ‘ಒಂದು ದೇಶ ಒಂದು ಒಂಬುಡ್ಸ್​ಮನ್’ ನಿಜಾರ್ಥದಲ್ಲಿ ಸಾಕಾರಗೊಳಿಸುವಲ್ಲಿ ಮುಂದಡಿ ಇರಿಸಿದೆ ಎಂದು ಪ್ರಧಾನಿ ವಿವರಿಸಿದರು.
ಆರೇಳು ವರ್ಷಗಳ ಹಿಂದೆ ಬ್ಯಾಂಕಿಂಗ್, ಪೆನ್ಶನ್ ಮತ್ತು ಇನ್ಶೂರೆನ್ಸ್ ಕ್ಷೇತ್ರಗಳು ಒಂದು ವಿಶೇಷ ಕ್ಲಬ್ ಆಗಿ, ದೇಶದ ಸಾಮಾನ್ಯರಿಗೆ, ಬಡ ಕುಟುಂಬಗಳಿಗೆ, ಕೃಷಿಕರಿಗೆ, ಸಣ್ಣ ವ್ಯಾಪಾರೋದ್ಯಮಿಗಳಿಗೆ, ಮಹಿಳೆಯರಿಗೆ, ದಲಿತರು ಮತ್ತು ಹಿಂದುಳಿದ ವರ್ಗದವರ ಪಾಲಿಗೆ ಗಗನಕುಸುಮವಾಗಿತ್ತು. ಹೊಣೆಗಾರಿಕೆ ಹೊತ್ತವರು ಬಡವರನ್ನು ಮತ್ತು ಸಾಮಾನ್ಯರನ್ನು ಸಂಪೂರ್ಣ ಕಡೆಗಣಿಸಿದ್ದರು. ಇತ್ತೀಚಿನ ಏಳು ವರ್ಷಗಳ ಅವಧಿಯಲ್ಲಿ ಡಿಜಿಟಲ್ ಪಾವತಿ 19 ಪಟ್ಟು ಏರಿಕೆಯಾಗಿದೆ. ಇಂದು ಬ್ಯಾಂಕ್ ವ್ಯವಸ್ಥೆ ವರ್ಷದ ಎಲ್ಲದಿನವೂ 24ಗಿ7 ಸೇವೆ ಒದಗಿಸುತ್ತಿದೆ ಎಂದು ಪ್ರಧಾನಿ ವಿವರಿಸಿದರು.
ದೂರು ಇತ್ಯರ್ಥಕ್ಕೆ ಸುಲಭ ವ್ಯವಸ್ಥೆ:ಇಂಟೆಗ್ರೇಟೆಡ್ ಒಂಬುಡ್ಸ್​ಮನ್ ಸ್ಕೀಮ್ 2021 ಬಳಕೆದಾರರಿಗೆ/ಗ್ರಾಹಕರಿಗೆ ವೆಚ್ಚ ರಹಿತವಾಗಿ ಅಹವಾಲು ಇತ್ಯರ್ಥಗೊಳಿಸುವ ಸೇವೆಯನ್ನು ಒದಗಿಸಲಿದೆ. ಆರ್​ಬಿಐ ಅಧೀನದ ಸೇವಾ ಸಂಸ್ಥೆಗಳ ಸೇವೆಯ ಕುರಿತು ದೂರುಗಳಿದ್ದರೆ ಈ ಸೇವೆಯನ್ನು ಬಳಸಬಹುದು. ಮೂವತ್ತು ದಿನದೊಳಗೆ ಅದನ್ನು ಬಗೆಹರಿಸುವುದಾಗಿ ಆರ್​ಬಿಐ ಘೋಷಿಸಿದೆ.
ಸಮಗ್ರ ಒಂಬುಡ್ಸ್​ಮನ್:ಬ್ಯಾಂಕಿಂಗ್ ಒಂಬುಡ್ಸ್​ಮನ್ ಸ್ಕೀಮ್ 2006, ಒಂಬುಡ್ಸ್​ಮನ್ ಸ್ಕೀಮ್ ಫಾರ್ ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಕಂಪನೀಸ್ 2018, ಒಂಬುಡ್ಸ್​ಮನ್ ಸ್ಕೀಮ್ ಫಾರ್ ಡಿಜಿಟಲ್ ಟ್ರಾನ್ಸಾಕ್ಷನ್ಸ್ 2019 ಒಳಗೊಂಡಿವೆ. ಇದಕ್ಕೆ ಹೊರತಾಗಿ, 50 ಕೋಟಿ ರೂಪಾಯಿ ಅಥವಾ ಅದಕ್ಕೂ ಮೇಲ್ಪಟ್ಟ ವ್ಯವಹಾರ ಹೊಂದಿರುವ ಪ್ರಾಥಮಿಕ ಸಹಕಾರ ಬ್ಯಾಂಕುಗಳು ಕೂಡ ಇದೇ ವ್ಯವಸ್ಥೆಯೊಳಗೆ ಬರಲಿವೆ.
ಹೂಡಿಕೆಗೆ ಸಾಮಾನ್ಯರಿಗೂ ಅವಕಾಶ:ಆರ್​ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್ ಮೂಲಕ ಚಿಲ್ಲರೆ ಹೂಡಿಕೆದಾರರು ನೇರ ವಾಗಿ ಟ್ರೆಷರಿ ಬಿಲ್, ಡೇಟೆಡ್ ಸೆಕ್ಯುರಿಟೀಸ್, ಸವರಿನ್ ಗೋಲ್ಡ್ ಬಾಂಡ್, ಸ್ಟೇಟ್ ಡೆವಲಪ್​ವೆುಂಟ್ ಲೋನ್ಸ್ ಮುಂತಾದವುಗಳ ಮೇಲೆ ಹೂಡಿಕೆಮಾಡಬಹುದು. ಇದಕ್ಕಾಗಿ ಅವರು ಆನ್​ಲೈನ್ ಮೂಲಕ ಆರ್​ಬಿಐನಲ್ಲಿ ರಿಟೇಲ್ ಡೈರೆಕ್ಟ್ ಗ್ಲಿಟ್ ಅಕೌಂಟ್ (ಆರ್​ಡಿಜಿ ಅಕೌಂಟ್) ತೆರೆಯಬೇಕು. ಮಾಹಿತಿಗಾಗಿ ಶುಲ್ಕ ರಹಿತ ಸಂಖ್ಯೆ 1800 267 7955ಕ್ಕೆ (ಬೆಳಗ್ಗೆ 10ರಿಂದ ರಾತ್ರಿ 7) ಕರೆ ಮಾಡಬಹುದು.
VIDEO: ನಾನು ವಿರೋಧ ಪಕ್ಷದವನಾದ್ರೂ ಈ ವಿಷಯದಲ್ಲಿ ಮೋದಿಯನ್ನು ಹೊಗಳಲೇಬೇಕೆಂದ ಉಡುಪಿಯ ಮಾಜಿ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
