ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್ 2 ಸಾವಿರ ರೂ. ನೋಟುಗಳನ್ನು ಹಿಂಪಡೆದಿದ್ದು, ಅದನ್ನು ಮರಳಿಸಲು ಕಾಲಾವಕಾಶವನ್ನು ನೀಡಿದೆ. ಆ ಕುರಿತು ಇನ್ನು ಕೆಲವು ದಿನಗಳು ಉಳಿದಿದ್ದು, ಈಗಾಗಲೇ ವಾಪಸ್ ಬಂದಿರುವ ನೋಟುಗಳೆಷ್ಟು ಎಂಬ ಬಗ್ಗೆಯೂ ಆರ್​ಬಿಐ ಮಾಹಿತಿ ನೀಡಿದೆ.
ಹಿಂಪಡೆಯುವ ಕುರಿತು ಘೋಷಿಸಿದ ಬಳಿಕ ಶೇ. 76ರಷ್ಟು 2 ಸಾವಿರ ರೂ. ನೋಟುಗಳು ಬ್ಯಾಂಕ್​ಗೆ ಮರಳಿಸಲ್ಪಟ್ಟಿವೆ ಎಂದು ಆರ್​​ಬಿಐ ತಿಳಿಸಿದೆ. ಹಿಂಪಡೆಯುವ ಕುರಿತು ಘೋಷಣೆ ಮಾಡಿದ ಮೇ 19ರ ವರೆಗೆ 3.56 ಲಕ್ಷ ಕೋಟಿ ರೂಪಾಯಿಯಷ್ಟು 2 ಸಾವಿರ ರೂ. ನೋಟುಗಳು ಚಾಲನೆಯಲ್ಲಿದ್ದವು. ಆದರೆ ಆ ಬಳಿಕ 2.72 ಲಕ್ಷ ಕೋಟಿ ರೂಪಾಯಿಯಷ್ಟು 2 ಸಾವಿರ ರೂ. ನೋಟುಗಳು ಬ್ಯಾಂಕ್​ಗೆ ಮರಳಿಸಲ್ಪಟ್ಟಿವೆ ಎಂದು ಆರ್​​ಬಿಐ ಹೇಳಿದೆ.
ಇದನ್ನೂ ಓದಿ:ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ
ಬ್ಯಾಂಕ್​ಗಳಿಂದ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಹಿಂದಿರುಗಿಸಲ್ಪಟ್ಟ ನೋಟುಗಳ ಪೈಕಿ ಶೇ. 87 ಠೇವಣಿ ರೂಪದಲ್ಲಿ ಮರಳಿದ್ದು, ಶೇ. 13ರಷ್ಟು ಮಾತ್ರ ಬೇರೆ ಮುಖಬೆಲೆಯ ನೋಟುಗಳಿಗೆ ಬದಲಿಸಿಕೊಳ್ಳಲಾಗಿದೆ. ಎರಡು ಸಾವಿರ ರೂ. ನೋಟುಗಳನ್ನು ಹಿಂದಿರುಗಿಸಲು ಸೆ. 30 ಕಡೇ ದಿನವಾಗಿದ್ದು, ಕೊನೆಯ ಹಂತದಲ್ಲಿನ ನೂಕುನುಗ್ಗಲು ತಪ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಆದಷ್ಟು ಮುಂಚಿತವಾಗಿಯೇ ನೋಟುಗಳನ್ನು ಹಿಂದಿರುಗಿಸಬೇಕು ಎಂದು ಆರ್​ಬಿಐ ಕೋರಿಕೊಂಡಿದೆ.
ಬಾಲ್ಯದಲ್ಲೇ ಖುಷಿಗಾಗಿ ಓದಿದ ಮಕ್ಕಳ ಹದಿಹರೆಯ ಸುಂದರ!; ಸಾವಿರಾರು ಮಕ್ಕಳನ್ನು ಒಳಗೊಂಡ ಅಧ್ಯಯನದಲ್ಲಿ ಬಹಿರಂಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − three =
Remember me
