ಮುಂಬೈ:ಹಣದುಬ್ಬರವನ್ನು ಇನ್ನಷ್ಟು ತಗ್ಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ರೆಪೊ ದರವನ್ನು 35 ಮೂಲಾಂಶ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಹೀಗಾದಲ್ಲಿ ಸಾಲದ ಮಾಸಿಕ ಕಂತಿನ ಮೊತ್ತ ಮತ್ತೆ ಹೆಚ್ಚಳವಾಗಲಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ಮುಂಬೈನಲ್ಲಿ ಸೋಮವಾರ ಆರಂಭವಾಗಿದ್ದು, ಸಭೆಯ ಕೊನೆಯ ದಿನವಾದ ಬುಧವಾರ ಪರಿಷ್ಕೃತ ರೆಪೊ ದರ ಪ್ರಕಟವಾಗಲಿದೆ. ಇದು ವರ್ಷದ ಕಡೆಯ ಎಂಪಿಸಿ ಸಭೆ ಆಗಿದೆ.
ಕಳೆದ ಏಪ್ರಿಲ್​ನಲ್ಲಿ ಹಣ ದುಬ್ಬರ ಪ್ರಮಾಣ ಶೇ.7.79ಕ್ಕೆ ಏರಿದ್ದರಿಂದ ಪದಾರ್ಥಗಳ ಬೆಲೆ ಅಧಿಕವಾಯಿತು. ಈ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ನಡೆದ ಎಂಪಿಸಿ ಸಭೆ ರೆಪೊ ದರವನ್ನು 40 ಮೂಲಾಂಶ ಹಿಗ್ಗಿಸಿತು. ಆದರೂ ಹಣದುಬ್ಬರದಲ್ಲಿ ಸುಧಾರಣೆ ಕಾಣದ ಕಾರಣ ಜೂನ್, ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ ಮತ್ತೆ ತಲಾ 50 ಮೂಲಾಂಶವನ್ನು ಆರ್​ಬಿಐ ಏರಿಕೆ ಮಾಡಿತು. ತತ್ಪರಿಣಾಮ ಅಕ್ಟೋಬರ್​ನಲ್ಲಿ ಹಣದುಬ್ಬರದ ಪ್ರಮಾಣ ಶೇ. 6.77ಕ್ಕೆ ಇಳಿದಿದೆ. ಆರ್​ಬಿಐ ಅಂದಾಜಿನಂತೆ ಇದು ಶೇ.6ರೊಳಗೆ ಇರಬೇಕು.
ರೆಪೊ ದರ ಹೆಚ್ಚಳ ಪರಿಣಾಮ ಮೇ ತಿಂಗಳವರೆಗೆ ಶೇ.4.4 ಇದ್ದ ರೆಪೊ ದರ, ಸೆಪ್ಟೆಂಬರ್ ಮಾಹೆಯಲ್ಲಿ ಶೇ.5.9ಕ್ಕೆ ಜಿಗಿಯಿತು. ಇದರಿಂದ ಬ್ಯಾಂಕ್​ಗಳು ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಇನ್ನಿತರ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿವೆ. ಇದು ಗ್ರಾಹಕರ ಇಎಂಐ ಮೇಲೆ ಪರಿಣಾಮಬೀರಿದೆ. ರೆಪೊ ದರ ಏರಿದಷ್ಟು ಆರ್ಥಿಕತೆಯ ವೇಗ ಕಡಿಮೆ ಆಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಸಿಎನ್​ಜಿ ಮೇಲೆ ಅಬಕಾರಿ ತೆರಿಗೆ ತಗ್ಗಿಸಲು ಶಿಫಾರಸು
ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್​ಜಿ) ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡುವಂತೆ ಮತ್ತು ಸಿಎನ್​ಜಿಯನ್ನು ಜಿಎಸ್​ಟಿ ವ್ಯಾಪ್ತಿಗೆ ತರುವಂತೆ ಕೀರ್ತಿ ಪಾರಿಖ್ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ. ಸಿಎನ್​ಜಿ ಪರಿಸರಸ್ನೇಹಿ ಇಂಧನವಾಗಿದೆ. ಜತೆಗೆ ನೈಸರ್ಗಿಕ ತೈಲದ ಮೇಲೆ ಯಾವುದೇ ಅಬಕಾರಿ ಸುಂಕ ಇಲ್ಲದಿರುವಾಗ ಸಿಎನ್​ಜಿ ಮೇಲೆ ಶೇ.14 ಅಬಕಾರಿ ಸುಂಕ ಹೇರಿರುವುದು ತರವಲ್ಲ ಎಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಕೇಂದ್ರದ ಈ ತೆರಿಗೆಯ ಜತೆಗೆ ರಾಜ್ಯಗಳ ವ್ಯಾಟ್ ಸುಂಕ ಶೇ.24.5 ಇದೆ ಎಂದು ಹೇಳಿದೆ. ಮಾರುಕಟ್ಟೆ ಆಧಾರಿತ, ಪಾರದರ್ಶಕ ಮತ್ತು ವಿಶ್ವಾಸಾರ್ಹ ದರ ಪರಿಷ್ಕರಣೆ ಕುರಿತು ವರದಿ ನೀಡುವಂತೆ ಸಮಿತಿಯನ್ನು ಪೆಟ್ರೋಲಿಯಂ ಸಚಿವಾಲಯ ನೇಮಿಸಿತ್ತು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × one =
Remember me
