ಹೊಸದಿಲ್ಲಿ:ಡಿಸೆಂಬರ್ 11, 2023 ರಂದು ಭಾರತೀಯ ರಿಸರ್ವ್ ಬ್ಯಾಂಕ್ (RBI), ಸಾಲ ಮನ್ನಾ ಮಾಡುವ ಭರವಸೆ ನೀಡುವ, ತಪ್ಪುದಾರಿಗೆಳೆಯುವ ಜಾಹೀರಾತುಗಳು ಇತ್ತೀಚೆಗೆ ವ್ಯಾಪಕವಾಗಿ ಹೆಚ್ಚುತ್ತಿವೆ ಮತ್ತು ಅಂತಹ ಪ್ರಚಾರಗಳಿಗೆ ಸಿಲುಕದಂತೆ ಸಾರ್ವಜನಿಕರನ್ನು ಎಚ್ಚರಿಸಿದೆ.
ಇದನ್ನೂ ಓದಿ:Gold, Silver Price; ಚಿನ್ನದ ಬೆಲೆಯಲ್ಲಿ ಕುಸಿತ… ಬೆಂಗಳೂರಿನಲ್ಲಿ10 ಗ್ರಾಂ ಚಿನ್ನ ದರ ಭಾರಿ ಇಳಿಕೆ
ಅನಧಿಕೃತ ಸಂಸ್ಥೆಗಳಿಂದ ಈ ಜಾಹೀರಾತುಗಳು, ಮುದ್ರಣ ಮಾಧ್ಯಮದಲ್ಲಿ ಮತ್ತು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಳಲ್ಲಿ ಪ್ರಸಾರವಾಗುತ್ತಿವೆ, ಸಾಲ ಮನ್ನಾ ಪ್ರಸ್ತಾಪದೊಂದಿಗೆ ಸಾಲಗಾರರನ್ನು ಪ್ರಲೋಭನೆಗೊಳಿಸುವ ಪ್ರಯತ್ನದಲ್ಲಿದೆ ಎಚ್ಚರಿಕೆ ವಹಿಸಿ ಎಂದು ಆರ್​ಬಿಐ ಸಾಲ ಪಡೆದವರಿಗೆ ಈ ಮುಖ್ಯ ಸಂದೇಶವನ್ನು ರವಾನಿಸಿದೆ.
ಈ ಘಟಕಗಳು ಅಂತಹ ಅಭಿಯಾನಗಳನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿವೆ ಮತ್ತು ಯಾವುದೇ ಅಧಿಕೃತ ಅಧಿಕಾರವಿಲ್ಲದೆ ‘ಸಾಲ ಮನ್ನಾ ಪ್ರಮಾಣಪತ್ರಗಳನ್ನು’ ನೀಡಲು ಸೇವೆ/ಕಾನೂನು ಶುಲ್ಕವನ್ನು ವಿಧಿಸುತ್ತಿವೆ. ಅಂತಹ ಘಟಕಗಳ ವರದಿಗಳು ಮುನ್ನೆಲಗೆ ಬಂದಿವೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ವಿಶ್ವದ ಅತ್ಯಂತ ಶ್ರೀಮಂತ ಕುಟುಂಬಗಳು; ಈ ಪಟ್ಟಿಯಲ್ಲಿದೆ ಅಂಬಾನಿ ಫ್ಯಾಮಿಲಿ
ಕೆಲವು ಸ್ಥಳಗಳಲ್ಲಿ, ನಿರ್ದಿಷ್ಟ ವ್ಯಕ್ತಿಗಳು ಸಾಲದೊಂದಿಗೆ ವಾಗ್ದಾನ ಮಾಡಿದ ಭದ್ರತೆಗಳನ್ನು ಜಾರಿಗೊಳಿಸಲು ಬ್ಯಾಂಕ್‌ಗಳ ಹಕ್ಕುಗಳನ್ನು ದುರ್ಬಲಗೊಳಿಸುವ ಅಭಿಯಾನಗಳನ್ನು ನಡೆಸುತ್ತಿರುವುದು ಕಂಡುಬಂದಿದೆ ಎಂದ ಆರ್​ಬಿಐ, ಅಂತಹ ಘಟಕಗಳು ಬ್ಯಾಂಕ್‌ಗಳು ಸೇರಿದಂತೆ ಹಣಕಾಸು ಸಂಸ್ಥೆಗಳಿಗೆ ಪಾವತಿಸಬೇಕಾದ ಬಾಕಿಯನ್ನು ಮರುಪಾವತಿಸಬೇಕಾಗಿಲ್ಲ ಎಂದು ತಪ್ಪಾಗಿ ನಿರೂಪಿಸುತ್ತಿವೆ. ಈ ರೀತಿಯ ಚಟುವಟಿಕೆಗಳು ಹಣಕಾಸು ಸಂಸ್ಥೆಗಳ ಸ್ಥಿರತೆಯನ್ನು ಹಾಳುಮಾಡುತ್ತವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಠೇವಣಿದಾರರ ಹಿತಾಸಕ್ತಿಗಳನ್ನು ಹಾಳುಮಾಡುತ್ತವೆ ಎಂದಿದೆ.
ಇಂತಹ ಸಂಸ್ಥೆಗಳೊಂದಿಗೆ ಸಹಭಾಗಿತ್ವವು ನೇರ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು ಎಂದು ಎಚ್ಚರಿಸಿದ ಆರ್‌ಬಿಐ, ಸಾರ್ವಜನಿಕರು ಈ ರೀತಿಯ ಸುಳ್ಳು ಮತ್ತು ದಾರಿತಪ್ಪಿಸುವ ಪ್ರಚಾರಗಳಿಗೆ ಮಾರು ಹೋಗದಂತೆ ಎಚ್ಚರಿಕೆ ವಹಿಸಿ ಜತೆಗೆ ಅಂತಹ ಘಟನೆಗಳನ್ನು ಕೂಡಲೇ ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡಿ ಎಂದು ತಿಳಿಸಿದೆ,(ಏಜೆನ್ಸೀಸ್).
ಕರ್ನಾಟಕ: ರಾಜಭವನಕ್ಕೆ ಬಾಂಬ್ ಬೆದರಿಕೆ ಕರೆ! ತನಿಖೆ ಚುರುಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
