ಪಟನಾ:ಬಿಹಾರದ ಪತ್ರಕರ್ತ ರಾಜದೇವ್​ ರಂಜನ್​ ಹತ್ಯೆ ಪ್ರಕರಣದಲ್ಲಿ ಹೊಸ ಟ್ವಿಸ್​​ ಸಿಕ್ಕಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ದಿಂದಲೇ ಮೃತ ಘೋಷಿಸಲ್ಪಟ್ಟಿದ್ದ ವೃದ್ಧೆ ಬದುಕಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಪ್ರಕರಣದಲ್ಲಿ ಈಕೆ ಸಾವನ್ನಪ್ಪಿದ್ದಾಗಿ ವರದಿ ನೀಡಲಾಗಿತ್ತು. ಅಲ್ಲದೇ ನ್ಯಾಯಾಲಯಕ್ಕೂ ಸಿಬಿಐ ಈ ವೃದ್ಧೆ ಮಹಿಳೆ ಮೃತಪಟ್ಟಿರುವ ಮರಣ ಪತ್ರವನ್ನು ಸಹ ಸಲ್ಲಿಸಿದ್ದರು. ಆದರೆ ಈಗ ಆಗಿದ್ದೇ ಬೇರೆ.
ಇಷ್ಟೆಲ್ಲಾ ಆದಮೇಲೂ ಶನಿವಾರ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯದ ಮುಂದೆ ಮಹಿಳೆ ಹಾಜರಾಗಿದ್ದಾರೆ. ಸ್ವಾಮಿ.. ನಾನು ಬದುಕಿದ್ದೇನೆ. ಎಂದು ಹೇಳಿದ್ದು, ಸಿಬಿಐ ಅಧಿಕಾರಿಗಳೇ ಶಾಕ್​ ಆಗಿದ್ದಾರೆ.
ಪತ್ರಕರ್ತ ರಂಜನ್​ ಕೊಲೆ ಪ್ರಕರಣದಲ್ಲಿ ಬಾದಾಮಿ ದೇವಿ ಎಂಬ ವೃದ್ಧ ಮಹಿಳೆ ಸಾಕ್ಷಿಯಾಗಿದ್ದಾರೆ. ಮೇ 24 ರಂದು ಸಿಬಿಐ ಈಕೆ ಮೃತಪಟ್ಟಿದ್ದಾಳೆ ಎಂದು ವರದಿ ಸಲ್ಲಿಸಿದ್ದಾರೆ. ಆದರೆ ಇಂದು ಏಕಾಏಕಿ ನ್ಯಾಯಾಲಯದ ಮುಂದೆ ಹಾಜರಾಗುವ ಮೂಲಕ ಸಿಬಿಐ ಅಧಿಕಾರಿಗಳನ್ನೇ ದಿಗ್ಭ್ರಮೆ ಮೂಡಿಸಿದ್ದಾರೆ. ಸದ್ಯ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.
ಇನ್ನು ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಈಕೆ ಮೇಲೂ ಹಲ್ಲೆ ನಡೆಯುವ ಸಾಧ್ಯತೆ ಇದ್ದುದರಿಂದ ತನ್ನ ಮನೆ ತೊರೆದು ಬೇರೆಡೆ ವಾಸಿಸುತ್ತಿದ್ದಳು. ಈಗ ಪ್ರಕರಣ ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.(ಏಜೆನ್ಸೀಸ್​)
ನಕಲಿ ಚಾಲಕರಿದ್ದಾರೆ: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ವೇಳೆ ಆಟೋ ಹತ್ತುವ ಮುನ್ನ ಎಚ್ಚರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − twelve =
Remember me
