ನವದೆಹಲಿ:ಕೋವಿಡ್​-19 ವೈರಸ್​ ರೂಪಾಂತರ (ಮ್ಯುಟೇಷನ್​) ಆಗುತ್ತಿದೆ, ಅದೇ ಕಾರಣಕ್ಕೆ ಮತ್ತೊಂದು ಅಲೆ ಕಾಣಿಸುತ್ತಿದೆ, ಅದಕ್ಕೇ ಸೋಂಕು ವ್ಯಾಪಿಸುತ್ತಿದೆ ಎಂಬೆಲ್ಲ ಅಭಿಪ್ರಾಯಗಳು ಹರಿದಾಡುತ್ತಿದ್ದು, ಇದೀಗ ಆ ಆತಂಕಗಳನ್ನು ನಿವಾರಿಸುವಂಥ ಹೇಳಿಕೆಯೊಂದು ಆರೋಗ್ಯ ಇಲಾಖೆ ನೀಡಿದೆ.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​ ‘ಸಂಡೇ ಸಂವಾದ್’ ಕಾರ್ಯಕ್ರಮದಲ್ಲಿ ಮಾತನಾಡಿ, ಕೋವಿಡ್​ ವೈರಸ್​ ರೂಪಾಂತರಗೊಂಡು ಹೆಚ್ಚಿನ ಸೋಂಕುಕಾರಕವಾಗಿ, ಹೆಚ್ಚು ವೇಗವಾಗಿ ಹರಡುವಂತಾಗಿದೆ ಎಂಬುದಕ್ಕೆಲ್ಲ ಸದ್ಯ ಆಧಾರವಿಲ್ಲ. ಅದರಲ್ಲೂ ಪತ್ರಿಕೆಗಳ ಮೂಲಕ ಕರೊನಾ ಹರಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಸದ್ಯ ಕರೊನಾ ಪಿಡುಗಿನ ಈ ಕಾಲದಲ್ಲೂ ಪತ್ರಿಕೆಗಳನ್ನು ಓದುವುದು ಸಂಪೂರ್ಣ ಸುರಕ್ಷಿತ ಎಂದು ಹೇಳಿದ್ದಾರೆ.
ಭಾರತದಲ್ಲಿ ಇನ್ನೂ ಕರೊನಾ ವೈರಸ್​ ರೂಪಾಂತರ ಪತ್ತೆಯಾಗಿಲ್ಲ. ಆರನೇ ‘ಸಂಡೇ ಸಂವಾದ್’ ಕಾರ್ಯಕ್ರಮದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತುಂಬ ಪ್ರಶ್ನೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
