ಶ್ರೀನಗರ:ಈಗ ಯಾವುದೇ ಸಮಯದಲ್ಲಾದರೂ ಜಮ್ಮು ಮತ್ತು ಕಾಶ್ಮೀರ ಚುನಾವಣೆ ನಡೆಸಬಹುದು ಎಂದು ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರ ಇಂದು (ಆ. 31) ತಿಳಿಸಿದೆ. ಆದರೆ, ಚುನಾವಣೆ ನಡೆಸುವ ನಿರ್ಧಾರವು ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಸಮಿತಿಯದ್ದಾಗಿದೆ.
ಆರ್ಟಿಕಲ್​ 370 ತೆಗೆದುಹಾಕಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯ ವೇಳೆ ಈ ಹೇಳಿಕೆ ಬಂದಿದೆ. ಮಂಗಳವಾರ ಕೊನೆಯ ಹಂತದ ವಿಚಾರಣೆ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪಿಸುವ ಪ್ರಾಮುಖ್ಯತೆಯನ್ನು ಸುಪ್ರೀಂಕೋರ್ಟ್ ಒತ್ತಿ ಹೇಳಿತು. 2018ರಿಂದ ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಇಲ್ಲದಿರುವುದರಿಂದ ಕೋರ್ಟ್​ ಈ ಹೇಳಿಕೆಯನ್ನು ಉಲ್ಲೇಖಿಸಿತು.
ಇದನ್ನೂ ಓದಿ:ಮಳೆಗಾಗಿ ಇಬ್ಬರು ಗಂಡು ಮಕ್ಕಳಿಗೆ ಅದ್ಧೂರಿಯಾಗಿ ಮದುವೆ ಮಾಡಿದ ಪಚ್ಚಾರಲಹಳ್ಳಿ ಗ್ರಾಮಸ್ಥರು
ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಮರುಸ್ಥಾಪಿಸಲು ಕಾಲಮಿತಿಯನ್ನು ನೀಡಲು ಕೇಂದ್ರವು ನಿರಾಕರಿಸಿತು ಮತ್ತು ಚುನಾಯಿತ ಸರ್ಕಾರಕ್ಕಾಗಿ ಯಾವುದೇ ಸಮಯದಲ್ಲಾದರೂ ಚುನಾವಣೆ ನಡೆಬಹುದು ಎಂದು ತಿಳಿಸಿದೆ.
ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯುತ್ತದೆ ಎಂಬ ಸಾಲಿಸಿಟರ್ ಜನರಲ್ ಹೇಳಿಕೆಗೆ ಲಡಾಖ್‌ನ ನಾಯಕರು ಮತ್ತು ಅರ್ಜಿದಾರರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಲಡಾಖ್‌ನಲ್ಲಿ ರಾಜ್ಯ ಸ್ಥಾನಮಾನಕ್ಕೆ ಆಗ್ರಹಿಸಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ.
ಆಗಸ್ಟ್ 2019ರಲ್ಲಿ ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ನಂತರ, ಕೇಂದ್ರವು ಸೂಕ್ತ ಸಮಯದಲ್ಲಿ ರಾಜ್ಯತ್ವವನ್ನು ಮರುಸ್ಥಾಪಿಸುವುದಾಗಿ ಹೇಳಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ ಆದರೆ, ಅಂತಹ ಕ್ರಮಕ್ಕೆ ಯಾವುದೇ ಗಡುವನ್ನು ಕೇಂದ್ರ ಸರ್ಕಾರ ಈವರೆಗೂ ನಿಗದಿಪಡಿಸಿಲ್ಲ.(ಏಜೆನ್ಸೀಸ್​)
ವಯಸ್ಸು 48 ಆದ್ರೂ ನೀವಿನ್ನೂ ಮದ್ವೆ ಆಗಿಲ್ಲ ಏಕೆ? ನಟಿ ನಗ್ಮಾ ಕೊಟ್ಟ ಉತ್ತರ ವೈರಲ್​!

ಅಮೆಜಾನ್‌ನ ಹಿರಿಯ ಮ್ಯಾನೇಜರ್‌ನ ಹತ್ಯೆಯ ಆರೋಪಿ ಬಂಧನ; ಈತನದು ಅಪರಾಧ ಜಗತ್ತಿನಲ್ಲಿ ಹಳೆಯ ಹೆಸರು

ಯಶಸ್ಸಿನ ಕಥೆ: ವಿದೇಶದಲ್ಲಿ ಉತ್ತಮ ಉದ್ಯೋಗ ತೊರೆದು..ಬಾಳೆ ಕೃಷಿಯೊಂದಿಗೆ ರೂ. 100 ಕೋಟಿ ಗಳಿಸಿದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − five =
Remember me
