ನವದೆಹಲಿ:ಉತ್ತಮ ಫಲಿತಾಂಶ ಬಂದು, ಜನರಿಗೆ ಒಳಿತಾಗುತ್ತದೆ ಎನ್ನುವುದಾದರೆ ಕೋವಿಡ್​-19 ಲಸಿಕೆ ತಯಾರಿಕೆಯ ವಿಷಯದಲ್ಲಿ ಚೀನಾ ಅಷ್ಟೇ ಏಕೆ, ವಿಶ್ವದ ಯಾವುದೇ ರಾಷ್ಟ್ರದೊಂದಿಗೆ ಬೇಕಾದರೂ ಕೆಲಸ ಮಾಡಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಭಾರತದೊಂದಿಗೆ ಲಡಾಖ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾದೊಂದಿಗೆ ಮುನಿಸಿಕೊಂಡಿದ್ದರೂ, ಕೋವಿಡ್​-19 ಲಸಿಕೆಗಾಗಿ ಚೀನಾದೊಂದಿಗೆ ಕೆಲಸ ಮಾಡಲು ಸಿದ್ಧವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಡೊನಾಲ್ಡ್​ ಟ್ರಂಪ್​ ಈ ಉತ್ತರ ನೀಡಿದ್ದಾರೆ.
ಇದನ್ನೂ ಓದಿ:ಶೇ.71 ಬೆಂದರೂ ಕರೋನಾ ಗೆದ್ದ ಧೀರೆ; ಚಿಕಿತ್ಸೆಗೆ ಬೆಳಗಾವಿಯಿಂದ ಬಂತು ಚರ್ಮ
ಚೀನಾದ ಕ್ಯಾನ್​ಸೈನೋ ಬಯೊಲಾಜಿಕ್ಸ್​ ಇಂಕ್​ ಮತ್ತು ಚೀನಾದ ಮಿಲಿಟರಿ ಸಂಶೋಧನಾ ಘಟಕ ಸಿದ್ಧಪಡಿಸಿರುವ ಕೋವಿಡ್​-19 ಲಸಿಕೆ ಮಧ್ಯಂತರ ಪರೀಕ್ಸೆಯಲ್ಲಿ ಸುರಕ್ಷಿತವಾಗಿದ್ದು, ಸಾಕಷ್ಟು ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿತು ಎಂಬ ವರದಿಯ ಹಿನ್ನೆಲೆಯಲ್ಲಿ ಟ್ರಂಪ್​ ಅವರ ಈ ಹೇಳಿಕೆ ಮಹತ್ವ ಪಡೆದುಕೊಳ್ಳುತ್ತದೆ.
ವಿಶ್ವದಲ್ಲಿ ನಾನಾ ರಾಷ್ಟ್ರಗಳಲ್ಲಿ ಸಿದ್ಧವಾಗುತ್ತಿರುವ ಲಸಿಕೆಗಳು ಆರಂಭಿಕ ಹಂತದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತೋರುತ್ತಿದ್ದು, ಭರವಸೆಯನ್ನು ಮೂಡಿಸುತ್ತಿವೆ. ಇವುಗಳ ಪೈಕಿ ಕ್ಯಾನ್​ಸೈನೋ ಲಸಿಕೆ ಕುಡ ಒಂದಾಗಿದೆ. ಅಮೆರಿಕ ಮೂಲದ ಮಾಡೆರ್ನಾ ಮತ್ತು ಅಮೆರಿಕದ ಔಷಧ ಉತ್ಪಾದನಾ ಸಂಸ್ಥೆ ಪೈಜರ್​ ಇಂಕ್​ ಸಹಯೋಗದಲ್ಲಿ ಜರ್ಮನಿಯ ಬಯೋಎನ್​ಟೆಕ್​ ಎಸ್​ಇ ಸಿದ್ಧಪಡಿಸಿರುವ ಲಸಿಕೆಗಳು ಕೂಡ ಮೂರು ಹಂತಗಳ ಕ್ಲಿನಿಕಲ್​ ಟ್ರಯಲ್​ಗೆ ಸಜ್ಜಾಗಿವೆ.
ತೋಟದ ಮನೆಯಲ್ಲಿ ಸೆಕ್ಸ್ ಮಾಡುತ್ತಿರುವಾಗಲೇ ಮಹಿಳೆ ಮತ್ತು ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಿದ ಅಜ್ಜ-ಮೊಮ್ಮಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
