ನವದೆಹಲಿ:ಒಂದು ತಿಂಗಳ ಹಿಂದೆ ಕರೊನಾ ವೈರಾಣು ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ಸೇರಿದ್ದ ಖಾದರ್​ ಶೇಖ್​ (63) ಸಂಪೂರ್ಣ ಗುಣಮುಖರಾಗಿ ಬಂದಿದ್ದಾರೆ. ರಿಯಲ್​ ಎಸ್ಟೇಟ್​ ಉದ್ಯಮಿಯಾಗಿರುವ ಇವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ದುಬಾರಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇದಾದ ನಂತರದಲ್ಲಿ ಬಡವರಿಗಾಗಿ ಏನಾದರೂ ಮಾಡಬೇಕು ಎಂಬ ಕಾರಣಕ್ಕಾಗಿ ತಮ್ಮದೇ ಆದ ಕೋವಿಡ್-19​ ಆಸ್ಪತ್ರೆಯನ್ನು ಸೂರತ್​ನಲ್ಲಿ ಆರಂಭಿಸಿ ಮಾದರಿಯಾಗಿದ್ದಾರೆ.
ಸೂರತ್​ನ ಶ್ರೇಯಂ ಕಾಂಪ್ಲೆಕ್ಸ್​ನಲ್ಲಿ ಇವರು 30 ಸಾವಿರ ಚದರಡಿಯ ಕಚೇರಿ ಆವರಣವನ್ನು ಹೊಂದಿದ್ದಾರೆ. ಇದನ್ನೇ ಈಗ ಅವರು 85 ಹಾಸಿಗೆ ವ್ಯವಸ್ಥೆಯುಳ್ಳ ಕೋವಿಡ್​-19 ಆಸ್ಪತ್ರೆಯಾಗಿ ಪರಿವರ್ತಿಸಿದ್ದಾರೆ. ತಮ್ಮ ಮೊಮ್ಮಗಳು ಹಿಬಾ ಹೆಸರಿನಲ್ಲಿ ಆರಂಭಿಸಿರುವ ಈ ಆಸ್ಪತ್ರೆಯನ್ನು ಕೋವಿಡ್​-19ರಿಂದ ಬಳಲುತ್ತಿರುವ ಬಡರೋಗಿಗಳಿಗೆ ಚಿಕಿತ್ಸೆಗಾಗಿ ಬಳಸಿಕೊಳ್ಳಲು ಸೂರತ್​ ಮಹಾನಗರಪಾಲಿಕೆ (ಎಸ್​ಎಂಸಿ) ಜತೆ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ಪ್ರಕಾರ ಎಸ್​ಎಂಸಿಯು ಈ ಆಸ್ಪತ್ರೆಗೆ ಅಗತ್ಯವಾದ ವೈದ್ಯರು, ಶುಶ್ರೂಷಕರು ಮತ್ತು ವೈದ್ಯಕೀಯ ಉಪಕರಣಗಳನ್ನು ಒದಗಿಸಲಿದೆ. ಜತೆಗೆ 15 ಐಸಿಯು ಹಾಸಿಎಗಳನ್ನೂ ಇಲ್ಲಿ ವ್ಯವಸ್ಥೆ ಮಾಡಲಿದೆ.
ಸಂಪೂರ್ಣ ಸಿದ್ಧವಾಗಿರುವ ಈ ಆಸ್ಪತ್ರೆಗೆ ಎಸ್​ಎಂಸಿಯ ಆಯುಕ್ತ ಬಿ.ಎನ್​. ಪಾಣಿ ಮತ್ತು ಉಪ ಆರೋಗ್ಯ ಆಯುಕ್ತ ಡಾ. ಆಶೀಶ್​ ನಾಯಕ್​ ಕೂಡ ಭೇಟಿ ನೀಡಿ ಅಲ್ಲಿನ ಸೌಲಭ್ಯವನ್ನು ಪರಿಶೀಲಿಸಿದ್ದಾರೆ.
ಇದನ್ನೂ ಓದಿ:ರೋಡ್​ ರೇಜ್​ ನಾಟಕವಾಡಿ ವಾಹನಗಳನ್ನು ಕದಿಯುತ್ತಿದ್ದ ಬೌನ್ಸರ್​ಗಳ ಗತಿ ಏನಾಯಿತು ನೋಡಿ…
ಹಿಬಾ ಆಸ್ಪತ್ರೆಗೆ ನಾವು ಭೇಟಿ ನೀಡಿ ಪರಿಶೀಲಿಸಿದೆವು. ಅಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆಸ್ಪತ್ರೆಯು ಕಾರ್ಯಾರಂಭಿಸಲಿದ್ದು, ನ್ಯೂ ಸಿವಿಲ್​ ಆಸ್ಪತ್ರೆ ಮತ್ತು ಎಂಎಂಐಎಂಇಆರ್​ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಡಾ. ಆಶೀಶ್​ ನಾಯಕ್​ ಹೇಳಿದ್ದಾರೆ.
ಯಾವುದೇ ಜಾತಿ, ಮತ, ಪಂಥದ ಬಡರೋಗಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ನಾನು ಕೂಡ ಹುಟ್ಟುತ್ತಲೇ ಚಿನ್ನದ ಸ್ಪೂನ್​ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವನಲ್ಲ. ಸಾಕಷ್ಟು ಶ್ರಮಿಸಿದ ಬಳಿಕ ಈ ಎತ್ತರವನ್ನು ತಲುಪಿದ್ದೇನೆ. ಆರ್ಥಿಕವಾಗಿ ಸದೃಡನಾಗಿದ್ದೇನೆ. ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನಿಸಿತು. ಅದಕ್ಕಾಗಿ ಆಸ್ಪತ್ರೆಯನ್ನು ಆರಂಭಿಸಿದ್ದೇನೆ ಎಂದು ಖಾದರ್​ ಶೇಖ್​ ಹೇಳಿದ್ದಾರೆ.
ಊಟೋಪಚಾರಕ್ಕೂ ವ್ಯವಸ್ಥೆ: ಈ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು, ಶುಶ್ರೂಷಕರು ಮತ್ತು ಚಿಕಿತ್ಸೆ ಪಡೆಯುವ ಕರೊನಾ ವೈರಾಣು ಸೋಂಕಿತರಿಗೆ ಊಟ, ತಿಂಡಿ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಇದಕ್ಕಾಗಿ ಒಂದು ಅಡುಗೆಮನೆ, ಊಟದ ಆವರಣ ಎಲ್ಲವನ್ನೂ ಸಿದ್ಧಪಡಿಸಲಾಗಿದ್ದು, ಬಾಣಸಿಗರನ್ನೂ ನೇಮಿಸಿಕೊಳ್ಳಲಾಗುತ್ತಿದೆ ಎಂದು ಶೇಖ್​ ತಿಳಿಸಿದ್ದಾರೆ.
‘ಜಗತ್ತಿಗೆ ಗುಡ್​ ಬೈ’; ಆತುರದ ನಿರ್ಧಾರಕ್ಕೆ ಮುಂದಾದ್ರಾ ನಟಿ ಜಯಶ್ರೀ?; ಖಿನ್ನತೆಯಿಂದ ಯಾರ ಕರೆಯನ್ನೂ ಸ್ವೀಕರಿಸುತ್ತಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − thirteen =
Remember me
