ನವದೆಹಲಿ:ತಾಂತ್ರಿಕ ಕಾರಣದಿಂದಾಗಿ ರೈಲು ಸಂಚಾರ ವಿಳಂಬವಾಗಿದೆ ಎಂಬ ಕಾರಣ ಇನ್ನು ಮುಂದೆ ಇತಿಹಾಸವಾದರೆ ಅಚ್ಚರಿಯೇನಿಲ್ಲ…! ಏಕೆಂದರೆ, ರೈಲ್ವೆ ಇಲಾಖೆ ‘ಓಎಚ್​ಇ ಇನ್​ಸ್ಪೆಕ್ಷನ್​’ ಎಂಬ ಹೊಸ ತಾಂತ್ರಿಕತೆ ಅಥವಾ ಆ್ಯಪ್​ಅನ್ನು ತನ್ನದಾಗಿಸಿಕೊಂಡಿದೆ.
ರೈಲ್ವೆ ಇಲಾಖೆ ಪ್ರಕಾರ ಓವರ್​ಹೆಡ್ ಇಕ್ವಿಪ್​ಮೆಂಟ್​ (ಓಎಚ್​ಇ) ಎಂಬ ಆ್ಯಪ್​ ತಾಂತ್ರಿಕ ತೊಂದರೆಯನ್ನು ತ್ವರಿತವಾಗಿ ಪತ್ತೆಹಚ್ಚಿ ಅಷ್ಟೇ ಶೀಘ್ರದಲ್ಲಿ ಸರಿಪಡಿಸಲು ನೆರವಾಗುತ್ತದೆ.
ಇದನ್ನೂ ಓದಿ;ವಾಟ್ಸ್ಯಾಪ್​ನಲ್ಲಿಯೇ ಕಂಡುಹಿಡಿಯಬಹುದು ಫಾರ್ವಡ್​ ಮೇಸೇಜ್​ಗಳ ಅಸಲಿಯತ್ತು….!
ಈ ಆ್ಯಪ್​ ಓವರ್​ಹೆಡ್​ ಇಕ್ವಿಪ್​ಮೆಂಟ್​ನ ತೊಂದರೆಗಳನ್ನು ಗುರುತಿಸಿ ಎಚ್ಚರಿಕೆ ಸಂದೇಶಗಳನ್ನು ರವಾನಿಸುತ್ತದೆ. ಜತೆಗೆ ಅದರ ಫೋಟೋಗಳನ್ನು ಕಳುಹಿಸಿ ಕೊಡುತ್ತದೆ. ಇದನ್ನು ದೇಶದೆಲ್ಲೆಡೆ ಅಳವಡಿಸಲಾಗಿದೆ. ಇದರಲ್ಲಿ ಜಿಪಿಎಸ್​ ಟ್ರ್ಯಾಕಿಂಗ್​ ಕೂಡ ಇದೆ. ಹೀಗಾಗಿ ಯಾವ ಭಾಗದಲ್ಲಿ ಏನು ತೊಂದರೆ ಇದೆ ಎನ್ನುವುದು ಕೂಡಲೇ ಗೊತ್ತಾಗಿ ಸರಿಪಡಿಸಲು ನೆರವಾಗುತ್ತದೆ.
ರೈಲು ಇತಿಹಾಸಲ್ಲಿಯೇ ಮೊದಲ ಬಾರಿಗೆ ಎನ್ನುವಂತೆ ಎಲ್ಲ ರೈಲುಗಳು ನಿಗದಿತ ಸಮಯಕ್ಕೆ ಗಮ್ಯಸ್ಥಾನವನ್ನು ತಲುಪಿವೆ ಎಂದು ರೈಲ್ವೆ ಇಲಾಖೆ ಇತ್ತೀಚೆಗೆ ಘೋಷಿಸಿತ್ತು. 230 ವಿಶೇಷ ರೈಲುಗಳ ಸಂಚಾರದಲ್ಲಿ ಈ ಸಾಧನೆ ಮಾಡಲಾಗಿದೆ. ಆದರೆ, ಎಲ್ಲ 13,000 ರೈಲುಗಳಿಗೆ ಹೋಲಿಸಿದಲ್ಲಿ ಈ ಸಂಖ್ಯೆ ಶೇ.2ಕ್ಕಿಂತ ಕಡಿಮೆ ಎನ್ನುವುದು ಕೂಡ ಗಮನಾರ್ಹವಾಗಿದೆ.
ಇದನ್ನೂ ಓದಿ;ಈ ಗ್ರಾಮದ ಪ್ರತಿ ಮಗುವಿನ ಕನಸು ಐಎಎಸ್​ ಅಧಿಕಾರಿಯಾಗುವುದು…! 50ಕ್ಕೂ ಹೆಚ್ಚು ಜನರು ಯಶಸ್ವಿ
ಸದ್ಯ ಸಂಚಾರದಲ್ಲಿರುವ ವಿಶೆಷ ರೈಲುಗಳ ಸಂಚಾರದಲ್ಲಿ ಸಮಯ ಪಾಲನೆ ಶೇ.100 ಇರಲೇಬೇಕು ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್​ ಎಲ್ಲ ವಿಭಾಗಾಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ರಾಜಧಾನಿ ಹಾಗೂ 100 ಇತರ ಪ್ಯಾಸೆಂಜರ್​ ರೈಲುಗಳ ವಿಚಾರದಲ್ಲಿ ಈ ಸಮಯ ಪಾಲನೆ ಆಗಲೇಬೇಕು ಎಂದು ಕಟ್ಟಪ್ಪಣೆ ಹೊರಡಿಸಿದ್ದರು. ಆದರೆ, ಸಾಮಾನ್ಯ ರೈಲು ಸಂಚಾರ ಆರಂಭವಾದಾಗ ಈ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಬೈರುತ್​ ಭಯಾನಕ ಸ್ಫೋಟಕ್ಕೆ ಕುಸಿದದ್ದು ಬರೀ ಕಟ್ಟಡಗಳಲ್ಲ…, ಇಡೀ ದೇಶದ ಆಹಾರ ಭದ್ರತೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 3 =
Remember me
