ದೆಹಲಿ:ರಿಯಲ್​ ಮಿ ಜಿಟಿ 5 ಪ್ರೋ (Realme Gt Neo 5 Pro) ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಇದರ ಫೀಚರ್ಸ್​ಗಳು ಆನ್​ಲೈನ್​ನಲ್ಲಿ ಸೋರಿಕೆಯಾಗಿವೆ. ಮಧ್ಯಮ ವರ್ಗದರನ್ನು ಗಮನದಲ್ಲಿಟ್ಟುಕೊಂಡು ಮಾರುಕಟ್ಟೆಯಲ್ಲಿ ಹಲವಾರು ಫೋನ್​ಗಳನ್ನು ಬಿಡುಗಡೆ ಮಾಡಿರುವ ರಿಯಲ್​ ಮಿ ಕಂಪನಿಯು, ರಿಯಲ್​ ಮಿ ಜಿಟಿ ನಿಯೋ 5 (realme GT neo 5) ಮತ್ತು ರಿಯಲ್​ ಮಿ ಜಿಟಿ ನಿಯೋ 5 ಎಸ್​ಇ (Realme GT Neo 5 SE) ಎಂಬ ಉತ್ತಮ ಶ್ರೇಣಿಯ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿತ್ತು.
ಇದನ್ನೂ ಓದಿ:ಕರೆಂಟ್ ಬಿಲ್ ಕಟ್ಟುವುದು ಕಡ್ಡಾಯ; ಹೆಸ್ಕಾಂ ಎಂ.ಡಿ ರೋಷನ್ ಹೇಳಿಕೆಸದ್ಯ, ರಿಯಲ್​ ಮಿ ಕಂಪನಿಯು Realme GT Neo 5 Pro ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಹ್ಯಾಂಡ್‌ಸೆಟ್‌ನ ಕುರಿತಾದ ಫೀಚರ್ಸ್​ ಇಂತಿವೆ. ಮುಂಬರುವ Realme GT Neo 5 Pro ಫ್ಲಾಟ್ OLED ಡಿಸ್​ಪ್ಲೇಯನ್ನು ಹೊಂದಿದ್ದು, 1.5K ರೆಸಲ್ಯೂಶನ್ ಜತೆಗೆ 6.74 ಇಂಚಿನ OLED ಪ್ಯಾನೆಲ್​ನ್ನು ಹೊಂದಿರಲಿದೆ ಎನ್ನಲಾಗಿದೆ. ಈ ಫೋನ್​ ಸ್ನಾಪ್​ಡ್ರ್ಯಾಗನ್​ 8 Gen 2 ಚಿಪ್‌ಸೆಟ್‌ನೊಂದಿಗೆ ಬರುವ ನಿರೀಕ್ಷೆಯಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ.
ಇದರ ಸಂಗ್ರಹಣಾ ಸಾಮರ್ಥ್ಯ 16GB+256GB ಹಾಗೂ 16+512GB ಇರಲಿದೆ. ಸದ್ಯಕ್ಕೆ, ಬ್ಯಾಟರಿ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆನ್‌ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್​ ಜತೆಗೆ USB ಟೈಪ್-ಸಿ ಹೊಂದಿದ್ದು, 100W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.
ಹಿಂಬದಿಯಲ್ಲಿ 50MP ಕ್ಯಾಮರಾವು ಸೋನಿ IMX890 ಸೆನ್ಸಾರ್ ಹಾಗೂ ಅಲ್ಟ್ರಾ-ವೈಡ್ ಕ್ಯಾಮರಾವನ್ನು ಒಲಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ, ಈ ಫೋನ್​ನ ಬಿಡುಗಡೆಯ ದಿನಾಂಕವನ್ನು ರಿಯಲ್​ ಮಿ ಘೋಷಿಸಿಲ್ಲವಾದರೂ 2023ರ 3ನೇ ತ್ರೈಮಾಸಿಕದಲ್ಲಿ ಬಿಡುಗಡೆಯಾದಬಹುದು ಎಂದು ನಿರೀಕ್ಷಿಸಲಾಗಿದೆ.(ಏಜೆನ್ಸಿಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − five =
Remember me
