ಜೈಪುರ: ರಾಜಸ್ಥಾನದ ಕಾಂಗ್ರೆಸ್​ ಆಡಳಿತದಲ್ಲಿ ಭುಗಿಲೆದ್ದಿರುವ ಬಂಡಾಯಕ್ಕೆ ಡಿಎಸಂ ಸಚಿನ್​ ಪೈಲಟ್​ನನ್ನು ಕಡೆಗಣಿಸಿದ್ದೇ ಕಾರಣ ಎಂಬುದು ಅವರ ಬೆಂಬಲಿಗರ ವಾದ.
ಸಚಿನ್​ ಪೈಲಟ್​ಗೆ ತನ್ನ ಇಲಾಖೆಯ ಅಧಿಕಾರಿಗಳೊಂದಿಗೆ ಭಾರಿ ಭಿನ್ನಾಭಿಪ್ರಾಯವಿತ್ತು. ಅದರಲ್ಲೂ ಮುಖ್ಯವಾಗಿ ಲೋಕೋಪಯೋಗಿ ಇಲಾಖೆಯಲ್ಲಂತೂ ಇದು ಹೆಚ್ಚಾಗಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ;ಲಾಕ್​ಡೌನ್​ನಿಂದ ಕೈಗಾರಿಕೆಗಳಿಗೆ ವಿನಾಯ್ತಿ ನೀಡಿ; ಇಲ್ಲದಿದ್ದರೆ ಮತ್ತೆ ಸಂಕಷ್ಟ; ಸಿಎಂಗೆ ಮನವಿ
ಜತೆಗೆ, ರಾಜಕೀಯವಾಗಿಯೂ ಹಲವು ಆಕಾಂಕ್ಷೆಗಳು ಈಡೇರಿರಲಿಲ್ಲ. ಪ್ರದೇಶ ಕಾಂಗ್ರೆಸ್​ ಅಧ್ಯಕ್ಷರಾಗಿದ್ದ ಸಚಿನ್​ ಪೈಲಟ್​ ‘ಒಬ್ಬ ವ್ಯಕ್ತಿ ಒಂದು ಹುದ್ದೆ’ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಬೇಕಾಗಿತ್ತು. ಆಧರೆ, ಅಧ್ಯಕ್ಷ ಹುದ್ದೆಗೆ ತನ್ನವರನ್ನೇ ತರಬೇಕು ಎಂಬುದು ಸಚಿನ್​ ಪೈಲಟ್​ ಒತ್ತಾಸೆಯಾಗಿತ್ತು ಹಾಗೂ ಪ್ರಮುಖ ಖಾತೆ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ, ಇದ್ಯಾವುದು ಕೈಗೂಡಿರಲಿಲ್ಲ.
ಸಚಿನ್​ ಪೈಲಟ್​ ಜತೆಗಿನ ಸಿಎಂ ಅಶೋಕ್​ ಗೆಹ್ಲೋಟ್​ ವಿರಸ ಹೆಚ್ಚಾಗುತ್ತಲೇ ಸಾಗಿತ್ತು. ಇದನ್ನು ಪರಿಹರಿಸುವಲ್ಲಿ ಹೈಕಮಾಂಡ್​ ವಿಫಲವಾಗಿತ್ತು ಎಂದು ಬೆಂಬಲಿಗರು ಹೇಳಿದ್ದಾರೆ.
ಇದನ್ನೂ ಓದಿ;ನೇಪಾಳ ರಾಜಕೀಯದಲ್ಲಿ ಭಾರತೀಯ ಸಂಜಾತರ ಪ್ರಾತಿನಿಧ್ಯಕ್ಕೆ ಮತ್ತಷ್ಟು ಬಲ; ಹೊಸ ಪಕ್ಷಕ್ಕೆ ಮಾನ್ಯತೆ
ಇತ್ತೀಚೆಗೆ ನಡೆಸಿದ್ದ ಐಎಎಸ್​, ಐಪಿಎಸ್​ ಅಧೀಕಾರಿಗಳ ವರ್ಗಾವರ್ಗಿಯಲ್ಲಿ ಸಚಿನ್​ ಪೈಲಟ್​ ಬಯಸಿದ್ದ ಒಬ್ಬ ಅಧಿಕಾರಿಯನ್ನು ನೀಡಲಾಗಿರಲಿಲ್ಲ ಎಂದೇ ಹೇಳಲಾಗಿದೆ. ಐಎಎಸ್​, ಐಪಿಎಸ್​ ಅಧಿಕಾರಿಗಳು ದೂರದ ಮಾತು…, ಒಬ್ಬ ತಾಲೂಕು ಮಟ್ಟದ ಅಧಿಕಾರಿಯ ವರ್ಗಾವಣೆ ಅಥವಾ ನಿಯೋಜನೆಗೂ ಪೈಲಟ್​ಗೆ ಅವಕಾಶ ನೀಡಿರಲಿಲ್ಲ ಎಂದೇ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಪೊಲೀಸರೇ ನನ್ನ ಎನ್​ಕೌಂಟರ್​ ಮಾಡ್ತಾರೆ…! ರಕ್ಷಣೆಗೆ ಸುಪ್ರೀಂಕೋರ್ಟ್​ ಮೊರೆ ಹೋದ ಸಬ್​ ಇನ್​ಸ್ಪೆಕ್ಟರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 9 =
Remember me
