ನವದೆಹಲಿ:ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್​ಎಸ್​ಎ) ಅಜಿತ್ ದೋವಲ್​ರ ಕಚೇರಿ ಸೇರಿ ಉನ್ನತ ಕಚೇರಿಗಳ ಮೇಲೆ ಭಯೋತ್ಪಾದಕರು ಕಣ್ಣಿಟ್ಟಿದ್ದಾರೆ ಎಂಬುದು ಪಾಕ್ ಮೂಲದ ಜೈಷ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಉಗ್ರನ ವಿಚಾರಣೆಯಿಂದ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳಿಗೆ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ.
ಪಾಕ್​ನ ನಿಯಂತ್ರಕರ (ಹ್ಯಾಂಡಲರ್) ಆದೇಶದ ಮೇರೆಗೆ ನವದೆಹಲಿಯಲ್ಲಿನ ಎನ್​ಎಸ್​ಎ ಸೇರಿ ವಿವಿಧ ಉನ್ನತ ಕಚೇರಿಗಳ ಮೇಲೆ ನಿಗಾ ಇರಿಸಲಾಗಿತ್ತು. ಈ ಕಚೇರಿಗಳ ವಿಡಿಯೋವನ್ನು ಚಿತ್ರೀಕರಿಸಲಾಗಿತ್ತು ಎಂದು ಉಗ್ರ ಹಿದಾಯತ್-ಉಲ್ಲಾ-ಮಲಿಕ್ ಬಾಯಿಬಿಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ. ಈತನನ್ನು ಜಮ್ಮು-ಕಾಶ್ಮೀರದ ಶೋಪಿಯಾನ್​ನಲ್ಲಿ ಫೆ. 6ರಂದು ಬಂಧಿಸಲಾಗಿತ್ತು.
‘2019ರ ಮೇ 4ರಂದು ಶ್ರೀನಗರದಿಂದ ನವದೆಹಲಿಗೆ ವಿಮಾನದಲ್ಲೇ ಬಂದೆ. ಎನ್​ಎಸ್​ಎ ಕಚೇರಿಯ ವಿಡಿಯೋ ಮಾಡಿದೆ. ಈ ಕಚೇರಿಗೆ ಒದಗಿಸಲಾಗಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್) ವಿವರವನ್ನು ಪಡೆದುಕೊಂಡು ವಿಡಿಯೋವನ್ನು ವಾಟ್ಸ್​ಆಪ್ ಮೂಲಕ ಪಾಕ್​ನಲ್ಲಿರುವ ಹ್ಯಾಂಡಲರ್​ಗೆ ರವಾನಿಸಿದೆ. ಹ್ಯಾಂಡಲರ್ ತನ್ನನ್ನು ‘ಡಾಕ್ಟರ್’ ಎಂದಷ್ಟೆ ಹೇಳಿಕೊಂಡಿದ್ದ ಎಂದು ಮಲಿಕ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಪಾಕ್ ಹ್ಯಾಂಡಲರ್​ಗಳ ಕೆಲವರ ಹೆಸರು, ಕೋಡ್ ಹೆಸರು, ತಾನು ಸಂರ್ಪಸುತ್ತಿದ್ದ 10 ಮಂದಿಯ ಫೋನ್ ನಂಬರ್ ನೀಡಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 4 =
Remember me
