ನವದೆಹಲಿ: ಸೆಪ್ಟೆಂಬರ್ ತಿಂಗಳಲ್ಲಿ 1,62,712 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ. 10 ಬೆಳವಣಿಗೆ ದಾಖಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಭಾನುವಾರ ಪ್ರಕಟಿಸಿದೆ. 2023-24ರ ಸಾಲಿನಲ್ಲಿ ನಾಲ್ಕನೇ ಬಾರಿಗೆ ಜಿಎಸ್​ಟಿ ಸಂಗ್ರಹ 1.60 ಲಕ್ಷ ಕೋಟಿ ರೂ. ದಾಟಿದೆ. 2023-24ರ ಮೊದಲಾರ್ಧದಲ್ಲಿ ಒಟ್ಟು 9,92,508 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತ ಶೇ. 11 ಏರಿಕೆ ಕಂಡಿದೆ.
ಸೆಪ್ಟೆಂಬರ್​ನಲ್ಲಿ ಸಂಗ್ರಹಗೊಂಡಿರುವ ಜಿಎಸ್​ಟಿ ಆದಾಯ 1,62,712 ಕೋಟಿ ರೂ.ಗಳಲ್ಲಿ ಸಿಜಿಎಸ್​ಟಿ  29,818 ಕೋಟಿ ರೂ., ಎಸ್​ಜಿಎಸ್​ಟಿ 37,657 ಕೋಟಿ ರೂ., ಐಜಿಎಸ್​ಟಿ 83,623 ಕೋಟಿ ರೂ. ಆಗಿದೆ. ಇದರಲ್ಲಿ ಸರಕುಗಳ ಆಮದು ಮೇಲೆ ಸಂಗ್ರಹಿಸಲಾದ 41,145 ಕೋಟಿ ಕೂಡ ಸೇರಿದೆ. ಸರಕುಗಳ ಆಮದು ಮೇಲೆ ಸಂಗ್ರಹಿಸಲಾದ -ಠಿ; 881 ಕೋಟಿ ಸೇರಿ -ಠಿ;11,613 ಕೋಟಿ ರೂ. ಮೇಲ್ತೆರಿಗೆ ಸಂಗ್ರಹವಾಗಿದೆ. ಕೇಂದ್ರ ಸರ್ಕಾರವು ಐಜಿಎಸ್​ಟಿಯಿಂದ ಸಿಜಿಎಸ್​ಟಿಗೆ -ಠಿ;33,736 ಕೋಟಿ ಮತ್ತು ಎಸ್​ಜಿಎಸ್​ಟಿಗೆ -ಠಿ;27,578 ಕೋಟಿ ರೂ. ವರ್ಗಾವಣೆ ಮಾಡಿ, ರಾಜ್ಯಗಳ ಬಾಕಿ ಇತ್ಯರ್ಥಪಡಿಸಿದೆ.
ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿ) ಬರುವ ಆದಾಯವು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಕೆ ಮಾಡಿದರೆ ಶೇ. 14% ಏರಿಕೆ ಕಂಡಿದೆ. 2023-24ರಲ್ಲಿ ಒಟ್ಟು ಜಿಎಸ್​ಟಿ ಸಂಗ್ರಹ ನಾಲ್ಕನೇ ಬಾರಿಗೆ 1.60 ಲಕ್ಷ ಕೋಟಿ ರೂ. ದಾಟಿದೆ.
2023-24ರ ಮೊದಲಾರ್ಧದ ಒಟ್ಟು ತೆರಿಗೆ ಸಂಗ್ರಹಣೆ 9,92,508 ಕೋಟಿ ರೂ. ಆಗಿದೆ. 2022-23ರ ಮೊದಲಾರ್ಧದಕ್ಕೆ ಹೋಲಿಕೆ ಮಾಡಿದರೆ ಶೇ. 11 ಹೆಚ್ಚಾಗಿದೆ. 2023-24ರಲ್ಲಿ ಸರಾಸರಿ ಮಾಸಿಕ ತೆರಿಗೆ ಸಂಗ್ರಹವು 1.65 ಲಕ್ಷ ಕೋಟಿ ರೂ.ಗಳಷ್ಟಿದೆ. ಇದು 2022-23ರ ಮೊದಲಾರ್ಧದಲ್ಲಿ 1.49 ಲಕ್ಷ ಕೋಟಿ ರೂ. ಇತ್ತು. ಈ ಏರಿಕೆ ದೇಶದ ಆರ್ಥಿಕ ಪ್ರಗತಿಯನ್ನು ತೋರಿಸುತ್ತದೆ.
ಆರ್ಥಿಕ ಪ್ರಗತಿಯ ಸಂಕೇತ:ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಮುಂಬರುವ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಇದು ಆರ್ಥಿಕ ಪ್ರಗತಿಯನ್ನು ಬಿಂಬಿಸುತ್ತದೆ. ಹೆಚ್ಚುತ್ತಿರುವ ಜಿಎಸ್​ಟಿ ಸಂಗ್ರಹವು ಆರ್ಥಿಕತೆಯು ಸ್ಥಿರವಾದ ಬೆಳವಣಿಗೆಯ ಪಥದಲ್ಲಿ ಮುಂದುವರಿಯುತ್ತಿದೆ ಎಂಬುದನ್ನು ಸೂಚಿಸುತ್ತದೆ. ದೇಶೀಯ ವಹಿವಾಟುಗಳಿಂದ ತೆರಿಗೆ ಸಂಗ್ರಹ ಹೆಚ್ಚುತ್ತಿದ್ದು, ‘ಮೇಕ್ ಇನ್ ಇಂಡಿಯಾ’ ನೀತಿ ಪರಿಣಾಮ ಈಗ ಗೋಚರವಾಗುತ್ತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದಲ್ಲಿ ಶೇ. 20 ಏರಿಕೆ:ಕರ್ನಾಟಕದ ಜಿಎಸ್​ಟಿ ಸಂಗ್ರಹದಲ್ಲಿ ಶೇ. 20 ಏರಿಕೆ ಕಂಡುಬಂದಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 9,760 ಕೋಟಿ ರೂ. ಸಂಗ್ರಹವಾಗಿತ್ತು. ಈ ಸೆಪ್ಟೆಂಬರ್​ನಲ್ಲಿ 11,693 ಕೋಟಿ ರೂ. ಸಂಗ್ರಹವಾಗಿದೆ. ತೆಲಂಗಾಣದಲ್ಲಿ ಶೇ. 33, ಮಹಾರಾಷ್ಟ್ರದಲ್ಲಿ ಶೇ. 17, ಉತ್ತರ ಪ್ರದೇಶ ಶೇ. 12, ಮಧ್ಯಪ್ರದೇಶದಲ್ಲಿ ಶೇ. 15 ಏರಿಕೆ ದಾಖಲಾಗಿದೆ.

ಎಮ್ಮೆಗೆ ನೀರು ಕುಡಿಸಲು ಹೋದ ಪತ್ನಿಗೆ ಶಾಕ್; ಹೆಂಡತಿಯನ್ನು ರಕ್ಷಿಸಲು ಧಾವಿಸಿದ ಗಂಡ; ಕೊನೆಗೆ ಇಬ್ಬರ ಸಾವು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − four =
Remember me
