ಮುಂಬೈ:ಉದ್ಯಮಿ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ (Reliance Industries Ltd) ಕಂಪನಿಯ ಷೇರುಗಳ ಬೆಲೆ ಸೋಮವಾರ ದಾಖಲೆ ಸೃಷ್ಟಿಸಿದೆ. ಸೋಮವಾರದ ವಹಿವಾಟಿನಲ್ಲಿ ಕಂಪನಿಯ ಷೇರುಗಳ ಬೆಲೆ ಮೊದಲ ಬಾರಿಗೆ 3,000 ರೂಪಾಯಿ ದಾಟಿತು. 2% ರಷ್ಟು ಏರಿಕೆ ಕಂಡು ಸಾರ್ವಕಾಲಿಕ ದಾಖಲೆಯ ಗರಿಷ್ಠ ಬೆಲೆಯಾದ 3024.90 ರೂಪಾಯಿ ತಲುಪಿತು.
ಬ್ರೋಕರೇಜ್ ಸಂಸ್ಥೆಗಳ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಷೇರುಗಳ ಬೆಲೆ ಈ ವರ್ಷದಿಂದ ಆರಂಭದಿಂದ ಇದುವರೆಗೆ 16% ಮತ್ತು ಕಳೆದ ಒಂದು ವರ್ಷದಲ್ಲಿ 36.52% ರಷ್ಟು ಹೆಚ್ಚಾಗಿದೆ.
ಮೋತಿಲಾಲ್ ಓಸ್ವಾಲ್ ಬ್ರೋಕರೇಜ್ ಸಂಸ್ಥೆಯು ಈ ಲಾರ್ಜ್‌ ಕ್ಯಾಪ್ ಸ್ಟಾಕ್‌ಗೆ ರೂ 3210 ಗುರಿ ಬೆಲೆಯನ್ನು ನೀಡಿದೆ. ಇನ್ನೊಂದು ಬ್ರೋಕರೇಜ್​ ಸಂಸ್ಥೆಯಾದ ಜೆಫರೀಸ್ ಇಂಡಿಯಾ, ಈ ಸ್ಟಾಕ್ ಬೆಲೆಯ ಗುರಿಯನ್ನು ಶೇಕಡಾ 7 ರಿಂದ 3,140 ರೂಪಾಯಿ ಏರಿಸಿದೆ. ಮತ್ತೊಂದು ಬ್ರೋಕರೇಜ್​ ಸಂಸ್ಥೆಯಾದ ಎಲಾರಾ ಸೆಕ್ಯುರಿಟೀಸ್, ಈ ಷೇರಿನ ಗುರಿ ಬೆಲೆಯನ್ನು 3,354 ರೂ.ಗೆ ನಿಗದಿಪಡಿಸಿದೆ.
ಪೆಟ್ರೋಲಿಯಂ ಉತ್ಪನ್ನಗಳು, ಪಾಲಿಯೆಸ್ಟರ್ ಉತ್ಪನ್ನಗಳು, ಪ್ಲಾಸ್ಟಿಕ್‌ಗಳು, ಪಾಲಿಮರ್, ರಾಸಾಯನಿಕಗಳು, ಸಿಂಥೆಟಿಕ್ ಜವಳಿ ಮತ್ತು ಬಟ್ಟೆಗಳ ತಯಾರಿಕೆಯಲ್ಲಿ ಈ ಕಂಪನಿ ತೊಡಗಿದೆ. ತೈಲ ಮತ್ತು ಅನಿಲದ ಪರಿಶೋಧನೆ ಮತ್ತು ಉತ್ಪಾದನೆಯಲ್ಲೂ ಈ ಕಂಪನಿ ಕಾರ್ಯನಿರ್ವಹಿಸುತ್ತದೆ.
715ರಿಂದ 8 ರೂಪಾಯಿಗೆ ಕುಸಿದ ಷೇರು: ಈಗ ಬೇಡಿಕೆ ಪಡೆದುಕೊಂಡು ಅಪ್ಪರ್ ಸರ್ಕ್ಯೂಟ್ ಹಿಟ್ ಆಗಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 3 =
Remember me
