ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ 26 ವರ್ಷಗಳಲ್ಲೇ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದ್ದು, ಗುರುವಾರ ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪ್ರತಿವರ್ಷ ಈ ಸಮಯದಲ್ಲಿ ದೆಹಲಿಯಲ್ಲಿ ಸಹಜವಾಗಿ ಇರುವ ಕನಿಷ್ಠ ತಾಪಮಾನ 15-16 ಡಿಗ್ರಿ ಸೆಲ್ಸಿಯಸ್​. ಆದರೆ ಈ ಸಲ ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಇದು 26 ವರ್ಷಗಳಲ್ಲೇ ಅತಿ ಕಡಿಮೆ ಎಂದು ಇಲಾಖೆ ಹೇಳಿದೆ.
1994ರ ಅಕ್ಟೋಬರ್ 31ರಂದು ದೆಹಲಿಯಲ್ಲಿ ಕನಿಷ್ಠ ತಾಪಮಾನ 12.3 ಡಿಗ್ರಿ ಸೆಲ್ಸಿಯಸ್​ ದಾಖಲಾಗಿತ್ತು. ದೆಹಲಿಯಲ್ಲಿ ಇದುವರೆಗಿನ ಅತಿ ಕಡಿಮೆ ತಾಪಮಾನ 1937ರಲ್ಲಿ ದಾಖಲಾಗಿತ್ತು. 1937ರ ಅಕ್ಟೋಬರ್​ 31ರಂದು ದೆಹಲಿಯಲ್ಲಿನ ಕನಿಷ್ಠ ಉಷ್ಣಾಂಶ 9.4 ಡಿ.ಸೆ. ಆಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಮುಖ್ಯಸ್ಥ ಕುಲದೀಪ್​ ಶ್ರೀವಾಸ್ತವ ಹೇಳಿದ್ದಾರೆ. ಮಾತ್ರವಲ್ಲ, ನವೆಂಬರ್ 1ರಂದು ದೆಹಲಿಯಲ್ಲಿನ ಕನಿಷ್ಠ ಉಷ್ಣಾಂಶ 11 ಡಿ.ಸೆ. ಇರಬಹುದು ಎಂದು ಎಂದೂ ಇಲಾಖೆ ಅಂದಾಜಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − one =
Remember me
