ಕೊಲ್ಕತ :6,800 ರೂ.ಗಳ ಸಾಲದ ಕಂತು ಪಾವತಿಸದಿದ್ದಕ್ಕೆ ಏಜೆಂಟರು ಬಂದು ಮನೆಯ ಮುಂದೆ ಕುಳಿತ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದಿಂದ ವರದಿಯಾಗಿದೆ. ಪ್ಲಂಬರ್​ ಕೆಲಸ ಮಾಡುತ್ತಿದ್ದ 40 ವರ್ಷ ವಯಸ್ಸಿನ ಸಾಧನ್ ಸಿನ್ಹ, ಮೃತ ದುರ್ದೈವಿ.
ಬಂಗಾಳದ ಮುರ್ಶಿದಾಬಾದ್​ ಜಿಲ್ಲೆಯ ಬಿಂದುಪರ ಗ್ರಾಮದ ನಿವಾಸಿ ಸಿನ್ಹ, ಪ್ಲಂಬಿಂಗ್ ಕೆಲಸದಿಂದ ತಿಂಗಳಿಗೆ 15,000 ದಿಂದ 20,000 ರೂಪಾಯಿ ಸಂಪಾದಿಸುತ್ತಿದ್ದರು. ಕೆಲಸಕ್ಕೆ ಅನುಕೂಲವಾಗಲಿ ಎಂದು ಜನವರಿಯಲ್ಲಿ ಖಾಸಗಿ ಹಣಕಾಸು ಕಂಪೆನಿಯಿಂದ 1 ಲಕ್ಷ ರೂಪಾಯಿ ಸಾಲ ಮಾಡಿ ದ್ವಿಚಕ್ರವಾಹನ ಖರೀದಿಸಿದ್ದರು. ಕರೊನಾ ಲಾಕ್ಡೌನಿನಿಂದಾಗಿ ಮೇ ಮತ್ತು ಜೂನ್​ ತಿಂಗಳ 3,400 ರೂ. ಮಾಸಿಕ ಕಂತನ್ನು ಕಟ್ಟಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಮದ್ವೆಯಾದ ಮೂರೇ ವಾರಕ್ಕೆ ಪತ್ನಿ ನಾಪತ್ತೆ: ಮನೆಯಲ್ಲಿದ್ದ ಮೊಬೈಲ್​ನಲ್ಲಿ ಅಡಗಿತ್ತು ಹೆಂಡತಿಯ ರಹಸ್ಯ!
ಜೂನ್ 22 ರಂದು ಬೆಳಿಗ್ಗೆ 9 ಗಂಟೆಗೆ ರಿಕವರಿ ಏಜೆಂಟರು ಮನೆಗೆ ಬಂದು ಬಾಕಿ ಹಣ ಕೇಳಿದರು. ಕೆಲವು ದಿನಗಳ ಸಮಯ ಕೊಟ್ಟರೆ ತೀರಿಸುವುದಾಗಿ ಹೇಳಿದರೂ ಕೇಳದೆ ಹಣ ಕೊಡುವವರೆಗೆ ಹೋಗುವುದಿಲ್ಲ ಎಂದು ಆಚೆಯೇ ಕೂತರು. ಈ ರೀತಿ ಸಾಲಗಾರರು ಮನೆಗೆ ಬಂದ ಬಗ್ಗೆ ಅವಮಾನಗೊಂಡ ಸಾಧನ್ ಸಿನ್ಹ ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾರೆ ಎಂದು ಮೃತರ ಪತ್ನಿ ಮಮೋನಿ ಪೊಲೀಸರಿಗೆ ತಿಳಿಸಿದ್ದಾರೆ.(ಏಜೆನ್ಸೀಸ್)
ಮುಂದಿನ ಚೀಫ್ ಮಿನಿಸ್ಟರ್​ ಅಂತ ಹೇಳ್ಬೇಡಿ ಎಂದು ಶಾಸಕರಿಗೆ ಮನವಿ ಮಾಡ್ತೀನಿ : ಸಿದ್ದರಾಮಯ್ಯ

ಲಸಿಕೆ ಹಾಕಿಸಿಕೊಳ್ಳಲ್ಲ ಅಂದ್ರೆ ಭಾರತಕ್ಕೆ ಇಲ್ಲ ಅಮೆರಿಕಕ್ಕೆ ಹೋಗಿ : ಫಿಲಿಪೈನ್ಸ್​ ಅಧ್ಯಕ್ಷ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 13 =
Remember me
