ಹನೊಯ್:ಚೀನಾ ಬೆಂಬಲಿತ, ವಿವಾದಾತ್ಮಕ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್​ಸಿಇಪಿ) ಒಪ್ಪಂದಕ್ಕೆ ಆಗ್ನೇಯ ಏಷ್ಯಾದ (ಆಸಿಯಾನ್) 10 ರಾಷ್ಟ್ರಗಳು ಸಹಿ ಹಾಕಿವೆ. ವಿಶ್ವದ ಅತಿ ದೊಡ್ಡ ಮುಕ್ತ ವ್ಯಾಪಾರ ಒಪ್ಪಂದವಾದ ಇದಕ್ಕೆ ಭಾನುವಾರ ಮುಕ್ತಾಯವಾದ 37ನೇ ಆಸಿಯಾನ್ ಶೃಂಗಸಭೆ ಅನುಮೋದನೆ ನೀಡಿತು. ಆರ್​ಸಿಇಪಿ ಒಪ್ಪಂದಕ್ಕೆ ಈಗಾಗಲೇ ಚೀನಾ, ಜಪಾನ್, ದಕ್ಷಿಣ ಕೊರಿಯಾ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳು ಸೇರಿವೆ. ಇದರಿಂದ ಜಾಗತಿಕ ಜಿಡಿಪಿಯಲ್ಲಿ ಶೇ. 30ರಷ್ಟು ಪಾಲುಹೊಂದಿರುವ ರಾಷ್ಟ್ರಗಳು ಮತ್ತು ವಿಶ್ವದ ಜನಸಂಖ್ಯೆಯಲ್ಲಿ ಶೇ. 28ರಷ್ಟು ಜನಸಂಖ್ಯೆ ಹೊಂದಿರುವ ದೇಶಗಳು ಒಂದಾದಂತೆ ಆಗಿದೆ. ಮುಂದಿನ ಎರಡು ವರ್ಷದಲ್ಲಿ ಆರ್​ಸಿಇಪಿ ಪೂರ್ಣಮಟ್ಟದಲ್ಲಿ ಜಾರಿಗೆ ಬರಲಿದೆ. ಇದರಿಂದ ಆರ್​ಸಿಇಪಿ ಸದಸ್ಯ ರಾಷ್ಟ್ರಗಳಲ್ಲಿ ವ್ಯವಹಾರ ನಡೆಸುವುದು ಕಂಪನಿಗಳಿಗೆ ಸುಗಮವಾಗಲಿದೆ. ಪ್ರತಿಯೊಂದು ದೇಶದಿಂದಲೂ ರಫ್ತಿಗೆ ಪ್ರತ್ಯೇಕವಾದ ಸಭೆ ನಡೆಸಬೇಕಾದ ಅಗತ್ಯ ಇರುವುದಿಲ್ಲ.
ಏಷ್ಯಾ-ಪೆಸಿಫಿಕ್ ವಲಯದಲ್ಲಿ ಮುಕ್ತ ವ್ಯಾಪಾರ ವಲಯ ನಿರ್ವಿುಸುವ ಉದ್ದೇಶದಿಂದ 2012ರಲ್ಲಿ ಮೊದಲ ಬಾರಿಗೆ ಆರ್​ಸಿಇಪಿ ಪ್ರಸ್ತಾಪವಾಯಿತು. ಸರಕುಗಳು ಸದಸ್ಯ ರಾಷ್ಟ್ರಗಳ ಮಧ್ಯೆ ಸರಾಗವಾಗಿ ರಫ್ತಾಗಬೇಕು ಎಂಬ ಕಾರಣ ಕನಿಷ್ಠ ಅಬಕಾರಿ ಸುಂಕ (ಶೇ.80ರಿಂದ 90 ತೆರಿಗೆ ಮನ್ನಾ) ಇರಬೇಕು, ಸೇವಾ ವ್ಯವಹಾರಗಳಲ್ಲಿ ವಿದೇಶಿ ಕಂಪನಿಗಳಿಗೆ ನಿರ್ದಿಷ್ಟ ಮಿತಿಯಲ್ಲಿ ಅವಕಾಶ ನೀಡಬೇಕು, ವಿದೇಶಿ ಹೂಡಿಕೆಯ ಕಾನೂನು ಸರಳವಾಗಿರಬೇಕು ಎಂಬ ಕರಾರುಗಳನ್ನು ಈ ಒಪ್ಪಂದ ಹೊಂದಿದೆ. ಅಮೆರಿಕದ ಟ್ರಾನ್ಸ್- ಪೆಸಿಫಿಕ್ ಪಾಲುದಾರಿಕೆ (ಟಿಪಿಪಿ)ಗೆ ಪಯಾರ್ಯವಾದ ಆರ್​ಸಿಇಪಿಗೆ ಚೀನಾ ಒತ್ತಾಸೆಯಾಗಿ ನಿಂತಿತು. ಪ್ರಭಾವಬೀರಿ ನಿಯಮಗಳನ್ನು ತನಗೆ ಅನುಕೂಲವಾಗುವಂತೆ ರೂಪಿಸಲು ಯಶಸ್ವಿಯಾಯಿತು. ಆರ್​ಸಿಇಪಿಯು ಚೀನಾ ಪ್ರಾದೇಶಿಕ ಭೌಗೋಳಿಕತೆಯನ್ನು ತನ್ನ ಮುಷ್ಟಿಗೆ ತೆಗೆದುಕೊಳ್ಳುವ ಕುತಂತ್ರ ಹಾಗೂ ಇದು ಅದರ ಅತ್ಯಂತ ಮಹತ್ವಾಕಾಂಕ್ಷೆಯ ಬೆಲ್ಟ್ ಮತ್ತು ರಸ್ತೆ ಪರಿಕ್ರಮದ ಭಾಗ ಎಂದು ಅಂತಾರಾಷ್ಟ್ರೀಯ ವಾಣಿಜ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆರ್​ಸಿಇಪಿ ಒಪ್ಪಂದಿಂದ ಅಗ್ಗದ ವಿದೇಶಿ ಸರಕುಗಳು ವಿಶೇಷವಾಗಿ ಚೀನಾದ ಸರಕುಗಳು ಭಾರತಕ್ಕೆ ಲಗ್ಗೆ ಇಟ್ಟು ದೇಶೀಯ ಉದ್ಯಮಗಳು ಮತ್ತು ಅದಕ್ಕೆ ಮೂಲವಸ್ತುಗಳನ್ನು ಪೂರೈಕೆ ಮಾಡುವ ವಲಯ ಸಂಕಷ್ಟಕ್ಕೆ ಸಿಲುಕುತ್ತವೆ ಎಂದು ದೇಶಾದ್ಯಂತ ವ್ಯಾಪಕ ಪ್ರತಿಭಟನೆ ವ್ಯಕ್ತವಾಯಿತು. ಕೃಷಿ, ಹೈನುಗಾರಿಕೆ, ಉಕ್ಕು, ಪ್ಲಾಸ್ಟಿಕ್, ತಾಮ್ರ, ಅಲ್ಯುಮಿನಿಯಂ, ಯಂತ್ರದ ಸಲಕರಣೆಗಳು, ಕಾಗದ, ವಾಹನ, ರಾಸಾಯನಿಕದಂತಹ ವಿದೇಶಿ ಸರಕುಗಳು ಭಾರತ ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ. ಇದರಿಂದ ಗ್ರಾಹಕರು ಅಗ್ಗದ ವಸ್ತುಗಳನ್ನೇ ಖರೀದಿಸುತ್ತಾರೆ. ಪರಿಣಾಮ ಈ ವಲಯಗಳ ದೇಶೀಯ ಉದ್ಯಮವು ನೆಲಕಚ್ಚಿ ಇದನ್ನು ನಂಬಿಕೊಂಡಿರುವ ಲಕ್ಷಾಂತರ ಜನರ ಬದುಕು ಮೂರಾಬಟ್ಟೆಯಾಗುತ್ತದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭವಾಗುತ್ತದೆ ಎಂಬ ಟೀಕೆಗಳು ಕೇಳಿಬಂದವು.
ಭಾರತೀಯರಿಗೆ ಮಾರಕವಾದ, ವಿಶೇಷವಾಗಿ ದುರ್ಬಲ ವರ್ಗದವರ ಬದುಕನ್ನು ಕಸಿದುಕೊಳ್ಳುವ ಈ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ನವೆಂಬರ್​ನಲ್ಲಿ ಘೋಷಣೆ ಮಾಡಿದರು. ಆದರೂ ಭಾರತಕ್ಕೆ ನಿರ್ಧಾರ ಪರಿಷ್ಕರಿಸಲು ಆರ್​ಸಿಇಪಿ ಅವಕಾಶ ನೀಡಿತು. ಯಾವಾಗಬೇಕಾದರೂ ಒಪ್ಪಂದಕ್ಕೆ ಸೇರಬಹುದು ಎಂದು ಹೇಳಿತು. ಬೌದ್ಧಿಕ ಆಸ್ತಿಯನ್ನು ಒಪ್ಪಂದದಡಿ ತಂದಿರುವುದು, ಪರಿಸರ ಸಂರಕ್ಷಣೆ, ಕಾರ್ವಿುಕ ಕಾನೂನುಗಳಿಗೆ ಬದ್ಧತೆ ಇಲ್ಲದಿರುವುದು ಕೂಡ ಭಾರತ ಈ ಒಪ್ಪಂದ ಸೇರದಿರುವುದಕ್ಕೆ ಕಾರಣ. ಭಾರತದಿಂದ ಆಮದು ಮಾಡಿಕೊಳ್ಳುವುದಕ್ಕಿಂತ 60 ಬಿಲಿಯನ್ ಡಾಲರ್ (-ಠಿ; 4.47 ಲಕ್ಷ ) ಮೊತ್ತದ ಹೆಚ್ಚುವರಿ ಸರಕನ್ನು ಚೀನಾ ರಫ್ತು ಮಾಡುತ್ತದೆ. ಇನ್ನು ಆರ್​ಸಿಪಿಸಿಯಲ್ಲಿ ಅಬಕಾರಿ ಸುಂಕ ತಗ್ಗಿದರೆ ಭಾರತದ ಮಾರುಕಟ್ಟೆಯನ್ನು ಚೀನಾ ಮತ್ತಷ್ಟು ಆಕ್ರಮಿಸಿಕೊಳ್ಳುತ್ತದೆ ಎಂಬ ಆತಂಕ ಇತ್ತು.
ಕರೊನಾ ನಿಯಂತ್ರಣ ಮೊದಲ ಆದ್ಯತೆ:ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ರೂಪಿತ ವಾದ ಟಿಪಿಪಿಯನ್ನು ಮುಂದುವರಿಸುವುದಕ್ಕಿಂತ ಕರೊನಾ ಸಂಕಷ್ಟದಿಂದ ದೇಶವನ್ನು ರಕ್ಷಿಸುವುದು. ಆರ್ಥಿಕತೆಗೆ ಪುನಶ್ಚೇತನ ನೀಡುವುದು, ಅಮೆರಿಕದ ತಯಾರಿಕಾ ವಲಯ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಆಕರ್ಷಿಸುವುದು ನೂತನ ಅಧ್ಯಕ್ಷ ಜೋ ಬೈಡೆನ್ ಆದ್ಯತೆ ಆಗಿರಲಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಒಪ್ಪಂದಕ್ಕೆ ಯಾವ ರಾಷ್ಟ್ರಗಳ ಸಹಿ?:ಥಾಯ್ಲೆಂಡ್, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಾಪುರ, ಬ್ರೂನಿ, ವಿಯೆಟ್ನಾಂ, ಲಾವೋಸ್, ಮ್ಯಾನ್ಮಾರ್ ಮತ್ತು ಕಾಂಬೋಡಿಯಾಗಳು ಆಸಿಯಾನ್ ಸದಸ್ಯ ರಾಷ್ಟ್ರಗಳು.
ಕರೊನಾ ಸಾಂಕ್ರಾಮಿಕದಿಂದ ಜಗತ್ತು ಸಂಕಷ್ಟದಲ್ಲಿ ಸಿಲುಕಿರುವ ಈ ಸನ್ನಿವೇಶದಲ್ಲಿ ಆರ್​ಸಿಇಪಿಗೆ ಅನುಮೋದನೆ ಸಿಕ್ಕಿರುವುದು ಮೋಡಗಳ ಮಧ್ಯೆ ಬೆಳಕಿನ ಭರವಸೆಯ ಕಿರಣ ಮೂಡಿದಂತಾಗಿದೆ. ಸತತ ಎಂಟು ವರ್ಷಗಳ ಪ್ರಯತ್ನ ಈಗ ಯಶಸ್ವಿಯಾಗಿದ್ದು, ಬಹುರಾಷ್ಟ್ರೀಯ ಸಹಕಾರ ಸಾಧ್ಯವಾಗಿದೆ ಮತ್ತು ಇದು ಜಾಗತಿಕ ಆರ್ಥಿಕತೆ ಮತ್ತು ಮಾನವ ಪ್ರಗತಿಗೆ ಸರಿಯಾದ ಮಾರ್ಗವೂ ಆಗಿದೆ.
|ಲಿ ಕೆಕಿಯಾಂಗ್ಚೀನಾ ಪ್ರಧಾನಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
