ನವದೆಹಲಿ:ಕರೊನಾ ಮಹಾಮಾರಿ ತಂದೊಡ್ಡಿರುವ ಆರ್ಥಿಕ ಸಂಕಷ್ಟದ ನಡುವೆಯೇ ಈ ಸಾಲಿನ ಬಜೆಟ್​ನಲ್ಲಿ ಘೋಷಿಸಿದಂತೆ, ಬಂಡವಾಳ ಕ್ರೋಡೀಕರಣಕ್ಕಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮೂಲಸೌಕರ್ಯ ಸಹಿತ ಹಲವು ಆಸ್ತಿಗಳನ್ನು ಪರಭಾರೆ ಅಥವಾ ಗುತ್ತಿಗೆಗೆ ನೀಡುವ ರಾಷ್ಟ್ರೀಯ ಮಾನಿಟೈಸೇಷನ್ ಪೈಪ್​ಲೈನ್ (ಎನ್​ಎಂಪಿ) ಯೋಜನೆಗೆ ಕೇಂದ್ರ ಸರ್ಕಾರ ಸೋಮವಾರ ಚಾಲನೆ ನೀಡಿದೆ. ಹೆದ್ದಾರಿ, ರೈಲ್ವೆ, ವಿದ್ಯುತ್ ಉತ್ಪಾದನೆ ಮತ್ತು ಸರಬರಾಜು ಜಾಲ, ನೈಸರ್ಗಿಕ ಅನಿಲದ ಕೊಳವೆ ಮಾರ್ಗ, ಬಂದರು ವಲಯಗಳನ್ನು ಪ್ರಮುಖವಾಗಿ ಗುರುತಿಸಲಾಗಿದೆ. ಇದಲ್ಲದೆ 15 ರೈಲ್ವೆ ಸ್ಟೇಡಿಯಂ, 25 ವಿಮಾನ ನಿಲ್ದಾಣ, 160 ಕಲ್ಲಿದ್ದಲು ಗಣಿಗಳನ್ನು ಖಾಸಗಿಗೆ ವಹಿಸಲಾಗುತ್ತದೆ. ಈ ಯೋಜನೆಯ ಮೂಲಕ ಸರ್ಕಾರಿ ಸ್ವತ್ತುಗಳ ಪರಭಾರೆಗೆ ಮಧ್ಯಮ ಪ್ರಮಾಣದ ನೀಲಿನಕ್ಷೆಯನ್ನು ಸರ್ಕಾರ ರೂಪಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯೋಜನೆಗೆ ಚಾಲನೆ ನೀಡಿದರು.
ಮುಂದಿನ ನಾಲ್ಕು ವರ್ಷಗಳಲ್ಲಿ (2022-25) 6 ಲಕ್ಷ ಕೋಟಿ ರೂಪಾಯಿ ಕ್ರೋಡೀಕರಣದ ಗುರಿ ಹೊಂದಲಾಗಿದೆ. ಇದಕ್ಕಾಗಿ ‘ಬ್ರೌನ್ ಫೀಲ್ಡ್’ ಆಸ್ತಿಗಳನ್ನು (ಈಗಾಗಲೇ ಹೂಡಿಕೆ ಮಾಡಿ ಪೂರ್ಣಪ್ರಮಾಣದಲ್ಲಿ ಬಳಕೆಯಾಗದ ಆಸ್ತಿ) ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನಿರ್ದಿಷ್ಟ ಅವಧಿಗೆ ವಹಿಸಿಕೊಡಲು ಮಾತುಕತೆ ನಡೆದಿದೆ. ಕೆಲವು ಈಗಾಗಲೇ ಚಾಲ್ತಿಯಲ್ಲಿ ಇವೆ ಎಂದರು. ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್, ಸಿಇಒ ಅಮಿತಾಭ್ ಕಾಂತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಎನ್​ಎಂಪಿ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಕಳೆದ ಫೆ.1ರಂದು ಮಂಡಿಸಿದ ಬಜೆಟ್​ನಲ್ಲಿ ಘೋಷಿಸಿದ್ದರು. ಆದಾಯ ಆಕರಕ್ಕೆ ಹೊಸ ಹೊಸ ಮೂಲಗಳನ್ನು ಸರ್ಕಾರ ಹುಡುಕುತ್ತಿದೆ; ಇದರಲ್ಲಿ ಸಾರ್ವಜನಿಕ ವಲಯದ ಎರಡು ಬ್ಯಾಂಕ್​ಗಳು, ವಿಮಾ ವಲಯದ ಸಂಸ್ಥೆಗಳು ಸೇರಿವೆ ಎಂದು ಹೇಳಿದ್ದರು.
ಮೂಲಸೌಕರ್ಯ ವಲಯವು ಸರ್ಕಾರಕ್ಕೆ ಆದಾಯ ತಂದುಕೊಡುವ ದೊಡ್ಡ ಮೂಲ. ಬಹು ಆಯಾಮದಲ್ಲಿ ಇದು ಕಾರ್ಯನಿರ್ವಹಿಸಲಿದೆ ಮತ್ತು ಮುಂದಿನ ಹಂತಕ್ಕೆ ಖಾಸಗಿ ಬಂಡವಾಳವನ್ನೂ ಆಕರ್ಷಿಸುತ್ತದೆ
|ರಾಜೀವ್ ಕುಮಾರ್ನೀತಿ ಆಯೋಗದ ಉಪಾಧ್ಯಕ್ಷ
ಎನ್​ಎಂಪಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸರ್ಕಾರ ಪೂರ್ಣವಾಗಿ ಬದ್ಧವಾಗಿದೆ. ಖಾಸಗಿ ವಲಯಕ್ಕೆ ಸ್ವತ್ತುಗಳನ್ನು ವಹಿಸಿಕೊಡುವುದರಿಂದ ಅವುಗಳ ಕಾರ್ಯವಿಧಾನ ಮತ್ತು ನಿರ್ವಹಣೆ ಉತ್ತಮ ಆಗಲಿದೆ. ಇದರಿಂದ ಬರುವ ಆದಾಯದಿಂದ ಹೊಸ ಮೂಲಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ
|ಅಮಿತಾಭ್ ಕಾಂತ್ನೀತಿ ಆಯೋಗದ ಸಿಇಒ
ಯಾವ ಸಚಿವಾಲಯಗಳು ಭಾಗಿ:ರಸ್ತೆ, ಸಾರಿಗೆ ಮತ್ತು ಹೆದ್ದಾರಿ, ವಿದ್ಯುತ್, ನೈಸರ್ಗಿಕ ಅನಿಲ, ನಾಗರಿಕ ವಿಮಾನಯಾನ, ಶಿಪ್ಪಿಂಗ್, ಬಂದರು ಮತ್ತು ಜಲಸಾರಿಗೆ, ದೂರಸಂಪರ್ಕ, ಆಹಾರ ಮತ್ತು ನಾಗರಿಕ ಪೂರೈಕೆ, ಗಣಿ, ಕಲ್ಲಿದ್ದಲು, ವಸತಿ, ನಗರಾಭಿವೃದ್ಧಿ, ಹಣಕಾಸು, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ.
ಸರ್ಕಾರ ಯಾವುದೇ ಸ್ವತ್ತನ್ನು ಮಾರಾಟ ಮಾಡುತ್ತಿಲ್ಲ. ಸಮರ್ಪಕವಾಗಿ ಬಳಕೆಯಾಗದ ಆಸ್ತಿಗಳನ್ನು ಖಾಸಗಿ ವಲಯಕ್ಕೆ ವಹಿಸಿಕೊಡುತ್ತಿದೆ. ನಿರ್ದಿಷ್ಟ ಅವಧಿಯ ಗುತ್ತಿಗೆ ಮುಗಿದ ನಂತರ ಅವುಗಳು ಸರ್ಕಾರಕ್ಕೆ ವಾಪಸಗಾಲಿವೆ. ಮೂಲ ಮಾಲೀಕತ್ವ ಸರ್ಕಾರದ ಬಳಿಯಲ್ಲೇ ಇರಲಿದೆ. ಖಾಸಗಿ ಸಹಭಾಗಿತ್ವದಿಂದ ಹೆಚ್ಚಿನ ಸಂಪನ್ಮೂಲ ಕ್ರೋಡೀಕರಣ ಆಗುತ್ತದೆ. ಇದನ್ನು ದೇಶದ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ.
|ನಿರ್ಮಲಾ ಸೀತಾರಾಮನ್ಕೇಂದ್ರ ಹಣಕಾಸು ಸಚಿವೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − thirteen =
Remember me
