ಸಿಕರ್ (ರಾಜಸ್ಥಾನ):ಪ್ರಗತಿಪಕ್ಷಗಳ ಘಟಬಂಧನ್ ಇಂಡಿಯಾ ಮತ್ತು ರಾಜ್ಯಸ್ಥಾನ ರಾಜ್ಯ ಸರ್ಕಾರದ ಬಗ್ಗೆ ಗುರುವಾರ ಕಿಡಿ ಕಾರಿರುವ ಪ್ರಧಾನಿ ನರೇಂದ್ರ ಮೋದಿ, ಕೆಂಪು ಡೈರಿಯಲ್ಲಿರುವ ಕರಾಳ ಕೃತ್ಯಗಳು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.
ಸಿಕಾರ್​ನಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಾಲದಲ್ಲಿ ಇಂದಿರಾ ಈಸ್ ಇಂಡಿಯಾ ಮತ್ತು ಇಂಡಿಯಾ ಈಸ್ ಇಂದಿರಾ ಎಂಬ ಘೊಷಣೆ ಚಾಲ್ತಿಯಲ್ಲಿತ್ತು. ಈಗ ‘ಯುಪಿಎ ಈಸ್ ಇಂಡಿಯಾ’ ಎಂದು ಬದಲಾಗಿದೆ ಎಂದು ಪ್ರತಿಪಕ್ಷಗಳ ಮೈತ್ರಿಕೂಟ ವಿರುದ್ಧ ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಪಕ್ಷ ಲೂಟಿಯ ಅಂಗಡಿ ಎಂಬುದಕ್ಕೆ ರಾಜಸ್ಥಾನದ ಕೆಂಪು ಡೈರಿ ತಾಜಾ ಉದಾಹರಣೆಯಾಗಿದೆ. ಕಾಂಗ್ರೆಸ್​ನ ಹಲವು ಕರಾಳ ಕೃತ್ಯಗಳು ಈ ಡೈರಿಯಲ್ಲಿ ದಾಖಲಾಗಿದ್ದು, ಇದೇ ಡೈರಿ ಬರಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಲಿದೆ ಎಂದರು.
ಗೆಹ್ಲೋಟ್ ಸರ್ಕಾರದಲ್ಲಿ ವಿವಿಧ ನೇಮಕಾತಿ ಪತ್ರ ಸೋರಿಕೆ ನಡೆಯುತ್ತಿದೆ. ರಾಜಸ್ಥಾನದ ಕಾಗದ ಸೋರಿಕೆ ಉದ್ಯಮ ಇದಾಗಿದೆ. ಯುವಕರ ಕನಸು ನನಸಾಗಿಸಲು ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು. ಸಹೋದರಿಯರು ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ರಾಜಸ್ಥಾನ ಸಹಿಸುವುದಿಲ್ಲ ಎಂದ ಅವರು, ರಾಜಸ್ಥಾನ ಸಹಿಸುವುದಿಲ್ಲ ಎಂಬ ಘೋಷ ವಾಕ್ಯದಲ್ಲೇ ಆಂದೋಲನ ಆರಂಭ ಮಾಡಲಾಗುವುದು ಎಂದರು.
ರಾಜಸ್ಥಾನದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಪ್ರಸ್ತಾಪಿಸಿದ್ದ ಸಚಿವ ರಾಜೇಂದ್ರ ಗುಧಾ, ಮಣಿಪುರ ದೌರ್ಜನ್ಯ ಪ್ರಕರಣದ ಚರ್ಚೆಗೆ ಮುನ್ನ ಈ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ಅಸೆಂಬ್ಲಿಯಲ್ಲಿ ಹೇಳಿಕೆ ನೀಡಿ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದರಿಂದ ಅವರನ್ನು ಸಂಪುಟದಿಂದ ವಜಾ ಮಾಡಲಾಗಿತ್ತು. ಇದರಿಂದ ಆಕ್ರೋಶಗೊಂಡ ಅವರು ಕೆಂಪು ಡೈರಿ ಒಂದನ್ನು ಪ್ರದರ್ಶನ ಮಾಡಿದ್ದರು. ಇದರಲ್ಲಿ ಕೆಲವು ರಹಸ್ಯಗಳಿವೆ. ಅದನ್ನು ಸದನದಲ್ಲೇ ಬಯಲು ಮಾಡುತ್ತೇನೆ ಎಂದು ತಿಳಿಸಿದ್ದರು. ಆದರೆ ಸ್ಪೀಕರ್ ಅದಕ್ಕೆ ಅವಕಾಶ ನೀಡಲಿಲ್ಲ. ಕಾಂಗ್ರೆಸ್ ನಾಯಕರೊಬ್ಬರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದ ಸಂದರ್ಭದಲ್ಲಿ ಈ ಡೈರಿಯನ್ನು ಭದ್ರವಾಗಿ ಇಟ್ಟುಕೊಳ್ಳುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮಗೆ ಕೊಟ್ಟಿದ್ದರು. ಈ ಡೈರಿಯಲ್ಲಿ ಶಾಸಕರಿಗೆ ನೀಡಿದ ಹಣದ ವಿವರಗಳಿವೆ. ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಅವರ ಪುತ್ರ ವೈಭವ್ ಹೆಸರು ಡೈರಿಯಲ್ಲಿ ಪ್ರಸ್ತಾಪ ಆಗಿದೆ ಎಂದು ಗುಧಾ ಹೇಳಿದ್ದಾರೆ ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ತಮಗೆ ಭಾಷಣ ಮಾಡಲು ಅವಕಾಶ ನೀಡಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ಪ್ರಧಾನಿ ಕಾರ್ಯಾಲಯ ತಳ್ಳಿಹಾಕಿದೆ. ‘ಗೌರವಾನ್ವಿತ ಪ್ರಧಾನಿಯವರೇ ನೀವು ರಾಜಸ್ಥಾನಕ್ಕೆ ಭೇಟಿ ನೀಡುತ್ತಿದ್ದೀರಿ. ನಿಮ್ಮ ಕಾರ್ಯಕ್ರಮದಲ್ಲಿ ನನ್ನ ಪೂರ್ವ ನಿಗದಿತ ಮೂರು ನಿಮಿಷಗಳ ಭಾಷಣವನ್ನು ತೆಗೆದುಹಾಕಲಾಗಿದೆ. ಆದ್ದರಿಂದ ನಾನು ನಿಮ್ಮನ್ನು ಭಾಷಣದ ಮೂಲಕ ಸ್ವಾಗತಿಸಲು ಸಾಧ್ಯವಾಗುವುದಿಲ್ಲ. ನಾನು ಟ್ವೀಟ್ ಮೂಲಕವೇ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ’ ಎಂದು ಗೆಹ್ಲೋಟ್ ವ್ಯಂಗ್ಯ ಮಾಡಿದ್ದಾರೆ. ರಾಜಸ್ಥಾನ ಸರ್ಕಾರ 21 ಲಕ್ಷ ರೈತರ 15,000 ಕೋಟಿ ರೂಪಾಯಿ ಮೌಲ್ಯದ ಸಹಕಾರಿ ಬ್ಯಾಂಕ್ ಸಾಲವನ್ನು ಮನ್ನಾ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್ ಸಾಲಮನ್ನಾ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಇದನ್ನು ಸರ್ಕಾರ ಇನ್ನೂ ಒಪ್ಪಿಕೊಂಡಿಲ್ಲ ಎಂದು ಅವರು ಟೀಕಿಸಿದ್ದಾರೆ.
ರಾಜಕೀಯ ಕಾರಣಕ್ಕೆ ದೇಶದ ಹೆಸರನ್ನು ಬಳಸುವ ಮೂಲಕ ಜನರ ದಾರಿ ತಪ್ಪಿಸಲು ಪ್ರತಿಪಕ್ಷಗಳಿಂದ ಸಾಧ್ಯವಿಲ್ಲ. ಈಸ್ಟ್ ಇಂಡಿಯಾ ಕಂಪನಿ ಹೆಸರಿನಲ್ಲಿ ಭಾರತವನ್ನು ಲೂಟಿ ಮಾಡಲಾಗಿತ್ತು. ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಮಿ ಹೆಸರಿನಲ್ಲಿಯೂ ಇಂಡಿಯಾ ಇದೆ. ನಿಷೇಧದ ನಂತರ ಸಿಮಿ ತನ್ನ ಹೆಸರನ್ನು ಬದಲಾಯಿಸಿತು. ಭಾರತಕ್ಕೆ ಕೆಡುಕು ಮಾಡುವುದು ಈ ಸಂಘಟನೆಯ ಉದ್ದೇಶವಾಗಿತ್ತು. ಅನೇಕ ಭಯೋತ್ಪಾದಕ ದಾಳಿಗಳನ್ನೂ ನಡೆಸಿತ್ತು ಎನ್ನುವ ಮೂಲಕ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಕುರಿತು ಟೀಕೆ ಮಾಡಿದರು.
1.25 ಲಕ್ಷ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ, ರೈತರ ಏಳಿಗೆಗೆ ದಾರಿ ಮಾಡಿಕೊಡುವ ಕೇಂದ್ರ ಇದು ಎಂದು ಬಣ್ಣಿಸಿದರು. ಕೇಂದ್ರ ಸರ್ಕಾರ ಒಂಬತ್ತು ವರ್ಷಗಳಿಂದ ರೈತರ ಹಿತದೃಷ್ಟಿಯಿಂದ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಬಿತ್ತನೆ ಬೀಜದಿಂದ ಹಿಡಿದು ಮಾರುಕಟ್ಟೆಗೆ ವರೆಗೆ ಹಲವು ವ್ಯವಸ್ಥೆಗಳನ್ನು ಮಾಡಿದೆ. ಭಾರತದ ಹಳ್ಳಿಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ನಗರಗಳಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹಳ್ಳಿಗಳಿಗೆ ಒದಗಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಯೂರಿಯಾ ಬೆಲೆಯಿಂದ ರೈತರು ಸಂಕಷ್ಟಕ್ಕೆ ಒಳಗಾಗಲು ಸರ್ಕಾರ ಬಿಡುವುದಿಲ್ಲ. ಭಾರತದ ರೈತರು 266 ರೂ.ಗೆ ಒಂದು ಚೀಲ ಯೂರಿಯಾ ಪಡೆಯುತ್ತಾರೆ. ಇದು ಪಾಕಿಸ್ತಾನದಲ್ಲಿ ಸುಮಾರು -ಠಿ;800, ಬಾಂಗ್ಲಾದೇಶದಲ್ಲಿ -ಠಿ;720 ಮತ್ತು ಚೀನಾದಲ್ಲಿ 2,100 ರೂ. ಆಗಿದೆ ಎಂದರು.
ಗುಜರಾತ್​ನ ರಾಜ್​ಕೋಟ್ ಬಳಿ ನಿರ್ವಿುಸಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉದ್ಘಾಟಿಸಿದರು. ಇದು ರಾಜ್ಯದ ಮೊದಲ ಗ್ರೀನ್​ಫೀಲ್ಡ್ ವಿಮಾನ ನಿಲ್ದಾಣವಾಗಿದೆ. 1,405 ಕೋಟಿ ರೂಪಾಯಿ ವೆಚ್ಚದಲ್ಲಿ ಚ. ಇದು 3,040 ಮೀಟರ್ (3.04 ಕಿಮೀ) ಉದ್ದ ಮತ್ತು 45 ಮೀಟರ್ ಅಗಲದ ರನ್​ವೇಯನ್ನು ಹೊಂದಿದೆ. ಈ ವಿಮಾನ ನಿಲ್ದಾಣದಲ್ಲಿ ಏಕಕಾಲಕ್ಕೆ 14 ವಿಮಾನಗಳನ್ನು ನಿಲುಗಡೆ ಮಾಡಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 2 =
Remember me
