ಚಂಡೀಗಢ:ಮಹಿಳೆಯೊಬ್ಬರ ವಿರಳಾತಿವಿರಳ ವೈದ್ಯಕೀಯ ಸ್ಥಿತಿಯು ಚಂಡೀಗಢದ ವೈದ್ಯರನ್ನೇ ಕಕ್ಕಾಬಿಕ್ಕಿಯಾಗಿಸಿದೆ. ಮಹಿಳೆಯ ಕಣ್ಣುಗಳಲ್ಲಿ ಕಣ್ಣೀರಿನಂತೆ ರಕ್ತ ಸುರಿಯುತ್ತಿರುವುದು ನಂಬಲು ಅಸಾಧ್ಯವೆನಿಸಿದರು ಇಲ್ಲಿ ನಿಜವಾಗಿದೆ.
ಹೌದು. 25 ವರ್ಷದ ವಿವಾಹಿತೆ ಮಹಿಳೆ ಇತ್ತೀಚೆಗಷ್ಟೇ ಚಂಡೀಗಢದ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಓಡೋಡಿ ಬಂದಿದ್ದರು. ಈ ವೇಳೆ ನೋವಿನಿಂದ ತನ್ನ ಸಮಸ್ಯೆಯನ್ನ ಹೇಳಿಕೊಂಡ ಮಹಿಳೆ, ಅಳುವಾಗ ಕಣ್ಣೀರಿನ ಬದಲು ರಕ್ತ ಸುರಿಯುತ್ತಿದೆ ಎಂದು ಹೇಳಿಕೊಂಡಳು. ಅಚ್ಚರಿಯೆಂದರೆ ಆಕೆ ಯಾವುದೇ ನೋವಿನ ಅನುಭವವನ್ನು ಹೊಂದಿಲ್ಲ. ಒಂದು ತಿಂಗಳಿಂದ ಇದೇ ಅನುಭವ ಆಕೆಗೆ ಎದುರಾಗುತ್ತಿದೆ.
ಇದನ್ನೂ ಓದಿರಿ:ಎರಡು ಮಕ್ಕಳ ತಂದೆಯನ್ನು ಮದುವೆಯಾದಳು, ತನ್ನದೇ ಮಗು ಹುಟ್ಟಿದಾಗ ಮೆಟರ್ನಿಟಿ ಲೀವ್ ಕೇಳಿದಳು… ಹೈಕೋರ್ಟ್ ಏನು ಹೇಳಿತು ನೋಡಿ…
ಮಹಿಳೆಯ ಕಣ್ಣುಗಳ ರಕ್ತಸ್ರಾವದ ಮೂಲ ಕಾರಣವನ್ನು ಕಂಡುಹಿಡಿಯಲು ವಿವಿಧ ಪರೀಕ್ಷೆಗಳಿಗೆ ಒಳಪಡಿಸಿದಾಗ ಎಲ್ಲಾ ವರದಿಗಳು ಸಹ ಸಾಮಾನ್ಯವಾಗಿದ್ದು, ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಇನ್ನು ಕಣ್ಣುಗಳಲ್ಲಿಯು ಯಾವುದೇ ಗಾಯವಿಲ್ಲ ಅಥವಾ ಅನುವಂಶೀಯವಾಗಿ ಬಂದರಿಬಹುದಾ ಎಂಬುದಕ್ಕೆ ಕೌಟುಂಬಿಕ ಇತಿಹಾಸವೂ ಇಲ್ಲ. ಹಾಗಾದರೆ ಈ ಸಮಸ್ಯೆಗೆ ಏನು ಕಾರಣ ಎಂಬುದೇ ಇದೀಗ ವೈದ್ಯರಿಗೆ ತಲೆನೋವಾಗಿದೆ.
ಮಹಿಳೆ ರಕ್ತದ ಕಣ್ಣೀರು ಹಾಕಿದ ಎರಡೂ ಬಾರಿಯು ಅವಳು ಮುಟ್ಟಾಗಿದ್ದಳು ಎಂಬುದನ್ನು ವೈದ್ಯರು ಅಂತಿಮವಾಗಿ ಅರಿತುಕೊಂಡರು. ಇತರ ಸಂಭವನೀಯ ಕಾರಣಗಳನ್ನು ತಳ್ಳಿಹಾಕಿದ ಬಳಿಕ ಮಹಿಳೆ ಆಕ್ಯುಲರ್ ವಿಕಾರಿಯಸ್ ಮುಟ್ಟಿನಿಂದ ಬಳಲುತ್ತಿದ್ದಾರೆ ಎಂಬುದು ವೈದ್ಯರ ಅರಿವಿಗೆ ಬಂದಿದೆ.
ಇದು ಅಪರೂಪದಲ್ಲಿ ತುಂಬಾ ಅಪರೂಪದ ವೈದ್ಯಕೀಯ ಸ್ಥಿತಿಯಾಗಿದೆ. ಆಕ್ಯುಲರ್ ವಿಕಾರಿಯಸ್ ಮುಟ್ಟೆಂದರೆ, ಮುಟ್ಟಿನ ಸಮಯದಲ್ಲಿ ಹೊರಗಿನ ಅಂಗಗಳಲ್ಲಿ ಮುಟ್ಟಿನ ರಕ್ತಸ್ರಾವ ಆಗುತ್ತದೆ. ತುಟಿ, ಕಣ್ಣುಗಳು, ಶ್ವಾಸಕೋಸಗಳು ಮತ್ತು ಹೊಟ್ಟೆ ಹಾಗೂ ಮೂಗಿನಲ್ಲಿ ಸಾಮಾನ್ಯವಾಗಿ ರಕ್ತಸ್ರಾವ ಆಗುತ್ತದೆ.
ಇದನ್ನೂ ಓದಿರಿ:ಪತ್ನಿ ಡಿವೋರ್ಸ್​ಗೆ ಅರ್ಜಿ ಹಾಕಿದರೆ, ಮದುವೆಯ ಸಮಯದಲ್ಲಿ ಹಾಕಿದ್ದ ಒಡವೆ ಪತಿಗೆ ವಾಪಸ್​ ಸಿಗತ್ತಾ?
ಮಹಿಳೆಯನ್ನು ಪರೀಕ್ಷಿಸಿದ ಬಳಿಕ ಆಕೆಯ ಕೇಸ್​ ಸ್ಟಡಿ ಬ್ರಿಟಿಷ್​ ಮೆಡಿಕಲ್​ ಜರ್ನಲ್​ನಲ್ಲಿ ಹೈಲೈಟ್​ ಮಾಡಲಾಗಿದೆ. ಮುಟ್ಟಿನ ವೇಳೆಯಲ್ಲಿ ಬದಲಾವಣೆ ಆಗುವ ಹಾರ್ಮೋನ್​ಗಳು ಹೇಗೆ ನಾಳೀಯ ಪ್ರವೇಶಸಾಧ್ಯತೆ (ವ್ಯಾಸ್ಕುಲರ್ ಪರ್ಮಿಯಾಬಿಲಿಟಿ) ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಂಗಾಗಳಲ್ಲಿ ರಕ್ತಸ್ರಾವ ಆಗುತ್ತದೆ ಎಂಬುದನ್ನು ವಿವರಿಸಲಾಗಿದೆ.(ಏಜೆನ್ಸೀಸ್​)
ಎರಡು ಮಕ್ಕಳ ತಂದೆಯನ್ನು ಮದುವೆಯಾದಳು, ತನ್ನದೇ ಮಗು ಹುಟ್ಟಿದಾಗ ಮೆಟರ್ನಿಟಿ ಲೀವ್ ಕೇಳಿದಳು… ಹೈಕೋರ್ಟ್ ಏನು ಹೇಳಿತು ನೋಡಿ…

ಹುಡುಗಿಗೆ ಕೈಕೊಟ್ಟು ಅರೆಸ್ಟ್​ ಆಗಿದ್ದ ಆರೋಪಿಗೆ ಜೈಲಿನಲ್ಲೇ ಮದುವೆ!

ಲಕ್ಷುರಿ ಕ್ಯಾರವಾನ್​ ಖರೀದಿಸಿದ ಮಹೇಶ್​ ಬಾಬು: ಟಾಲಿವುಡ್​ನಲ್ಲೇ ದುಬಾರಿ ವ್ಯಾನಿಟಿ ವ್ಯಾನ್​ ಇದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − two =
Remember me
