ಕೊಯಮತ್ತೂರು:ಮಾರಕ ಆಯುಧಗಳನ್ನಿಡಿದು ವಿಡಿಯೋ ಮಾಡಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಖತರ್ನಾಕ್​ ಲೇಡಿಗಾಗಿ ಕೊಯಮತ್ತೂರಿನ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ವಿನೋದಿನಿ ಅಲಿಯಾಸ್​ ತಮನ್ನಾ (23)ಗಳನ್ನು ಬಂಧಿಸಿ, ವಿಚಾರಣೆ ನಡೆಸುವುದಕ್ಕಾಗಿ ಕೊಯಮತ್ತೂರು ಪೊಲೀಸರು ವಿಶೇಷ ತಂಡವನ್ನು ರಚನೆ ಮಾಡಿದೆ. ತಮನ್ನಾ, ವಿರುಧಾನಗರದ ನಿವಾಸಿಯಾಗಿದ್ದು, ಶೀಘ್ರದಲ್ಲೇ ಆಕೆಯನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಫ್ಯಾನ್ಸ್​ ಕಾಲ್​ ಮಿ ತಮನ್ನಾ ಹೆಸರಿನ ತಮ್ಮ ಇನ್​ಸ್ಟಾಗ್ರಾಂ ಖಾತೆಯಿಂದ ಅನೇಕ ವಿಡಿಯೋಗಳನ್ನು ತಮನ್ನಾ ಪೊಲೀಸ್​ ಮಾಡಿದ್ದರು. ಬಹುತೇಕ ವಿಡಿಯೋಗಳಲ್ಲಿ ಮಾರಕ ಆಯುಧಗಳನ್ನು ಹಿಡಿದು ಕಾಣಿಸಿಕೊಂಡಿದ್ದಾರೆ. ಪ್ರಗಾ ಬ್ರದರ್ಸ್​ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲೂ ತಮನ್ನಾ ಸಕ್ರಿಯರಾಗಿದ್ದಾರೆ. ಕ್ರಿಮಿನಲ್​ ಗುಂಪಿಗೆ ಸಂಬಂಧಿಸಿದವರಿಂದಲೇ ಈ ವಿಡಿಯೋ ಅಪ್​ಲೋಡ್​ ಆಗುತ್ತಿದೆ ಮತ್ತು ಎದುರಾಳಿ ಗುಂಪಿಗೆ ಬೆದರಿಕೆ ಹಾಕುವ ಉದ್ದೇಶದಿಂದ ಇಂತಹ ರೀಲ್ಸ್​ಗಳನ್ನು ಅಪ್​ಲೋಡ್​ ಮಾಡುತ್ತಿದ್ದಾರೆ ಎಂದು ಕೊಯಮತ್ತೂರು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪೊಲೀಸರನ್ನು ಕಂಡು ಪರಾರಿ ಆಗುವಾಗ ಫ್ಲೈಓವರ್​ನಿಂದ ಕೆಳಗೆ ಬಿದ್ದ ಬೈಕ್​: ಓರ್ವ ಸಾವು, ಸ್ನೇಹಿತನ ಸ್ಥಿತಿ ಗಂಭೀರ
ಈ ಮೊದಲು ಇದೇ ತಮನ್ನಾಳನ್ನು ಗಾಂಜಾ ಕೇಸ್​ನಲ್ಲಿ ಬಂಧಿಸಿದ್ದೆವು ಎಂದು ಕೊಯಮತ್ತೂರು ನಗರ ಪೊಲೀಸ್​ ಆಯುಕ್ತರಾದ ವಿ. ಬಾಲಕೃಷ್ಣನ್​​ ಹೇಳಿದ್ದಾರೆ. ಗಾಂಜಾವನ್ನು ತನ್ನ ಬಳಿ ಇಟ್ಟುಕೊಂಡಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿತ್ತು. ಇಷ್ಟೇ ಅಲ್ಲದೆ, ಶ್ರೀಮಂತ ಕುಟುಂಬದ ಯುವಕರನ್ನು ಪರಿಚಯಿಸಿಕೊಂಡು ಬೆದರಿಕೆ ಹಾಕಿ ಹಣ ಸುಲಿಗೆ ಮಾಡುವುದನ್ನು ಆಕೆ ಹವ್ಯಾಸ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ತಮನ್ನಾ ಗ್ಯಾಂಗ್​ ಪೋಸ್ಟ್​ ಮಾಡುತ್ತಿರುವ ರೀಲ್ಸ್​ಗಳು ಎರಡು ಗ್ಯಾಂಗ್​ಗಳ ನಡುವೆ ದ್ವೇಷವನ್ನು ಹೆಚ್ಚಿಸುವಂತಿದೆ. ಹೀಗಾಗಿ ಆಕೆಯನ್ನು ಈ ಕ್ಷಣವೇ ಬಂಧಿಸಬೇಕಿದೆ. ಅಂತಹ ವಿಡಿಯೋಗಳನ್ನು ಯಾರೇ ಪೋಸ್ಟ್​ ಮಾಡಿದರು ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸ್​ ಆಯುಕ್ತರಾದ ವಿ. ಬಾಲಕೃಷ್ಣನ್​​ ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸೀಸ್​)
(ವಿಡಿಯೋ ಕೃಪೆ: ಜಯಾ ಪ್ಲಸ್​)

ನಿಮ್ಮ ಕಣ್ಣಿಗೊಂದು ಸವಾಲ್​: ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ ನೀರು ಕುದುರೆ ಪತ್ತೆಹಚ್ಚಬಲ್ಲರು!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನರೇಶ್-ಪವಿತ್ರಾ! ರಮ್ಯಾ ಸಂಬಂಧಕ್ಕೆ ಫುಲ್​ಸ್ಟಾಪ್ ಇಟ್ಟು ಹೊಸ ಜೀವನ ಆರಂಭ

ದಕ್ಷಿಣ ಭಾರತ ಸಿನಿಮಾರಂಗದಿಂದ ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ಬ್ಯಾನ್​! ಕಾರಣ ಹೀಗಿದೆ….

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + 14 =
Remember me
