ಕಳೆದ ಕೆಲವು ತಿಂಗಳುಗಳಲ್ಲಿ ಯುರೋಪ್ ಒಕ್ಕೂಟದ ರಾಷ್ಟಗಳಿಗೆ ಭಾರತದಿಂದ ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಗಮನಾರ್ಹವಾಗಿ ಹೆಚ್ಚಳ ಕಂಡಿದೆ. ಯೂಕ್ರೇನ್ ವಿರುದ್ಧ ಯುದ್ಧ ಸಾರಿದ ಹಿನ್ನೆಲೆಯಲ್ಲಿ ರಷ್ಯಾದಿಂದ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುವುದರ ಮೇಲೆ ಈ ರಾಷ್ಟ್ರಗಳು ನಿರ್ಬಂಧ ಹೇರಿವೆ. ಇದೇ ವೇಳೆ ರಷ್ಯಾದಿಂದ ಭಾರತವು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಪ್ರಮಾಣ ಗರಿಷ್ಠ ಮಟ್ಟಕ್ಕೆ ಏರಿದೆ. ರಷ್ಯಾದಿಂದ ಖರೀದಿಸಿದ ಕಚ್ಚಾ ತೈಲವನ್ನು ಸಂಸ್ಕರಿಸಿದ ನಂತರ ಸಿದ್ಧವಾಗುವ ಪೆಟ್ರೋಲ್ ಉತ್ಪನ್ನಗಳನ್ನು ಯುರೋಪ್ ಒಕ್ಕೂಟದ ರಾಷ್ಟ್ರಗಳಿಗೆ ಭಾರತದ ತೈಲ ಕಂಪನಿಗಳು ರಫ್ತು ಮಾಡುತ್ತಿವೆ.
ಯುರೋಪ್ ಒಕ್ಕೂಟದ ರಾಷ್ಟ್ರಗಳಿಗೆ ಭಾರತದ ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಏಪ್ರಿಲ್-ಜನವರಿ ನಡುವಿನ ಅವಧಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 20.4 ರಷ್ಟು ಶೇಕಡಾ ಏರಿಕೆಯಾಗಿ 1.16 ಕೋಟಿ ಟನ್​ಗಳಿಗೆ ತಲುಪಿದೆ. ಈ ಮೂಲಕ ಭಾರತದಿಂದ ಸಂಸ್ಕರಿಸಿದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ 20 ಪ್ರದೇಶಗಳ ಪಟ್ಟಿಯಲ್ಲಿ ಯುರೋಪ್ ಒಕ್ಕೂಟದ ರಾಷ್ಟ್ರಗಳು ಅಗ್ರಸ್ಥಾನ ತಲುಪಿವೆ. ವಾಣಿಜ್ಯ ಬೇಹುಗಾರಿಕೆ ಮತ್ತು ಸಂಖ್ಯಾಶಾಸ್ತ್ರ ಮಹಾನಿರ್ದೇಶನಾಲಯದ ಅಂಕಿ-ಅಂಶಗಳಲ್ಲಿ ಈ ಸಂಗತಿ ಗೋಚರಿಸಿದೆ.
ಹೆಚ್ಚಿದ ರಫ್ತು:ರಷ್ಯಾದಲ್ಲಿ ಸಂಸ್ಕರಣಗೊಂಡ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಐರೋಪ್ಯ ಒಕ್ಕೂಟದ ನಿಷೇಧವು ಫೆಬ್ರುವರಿ 5ರಿಂದ ಆರಂಭವಾಗಿದೆ. ಆದರೆ, ಈ ನಿಷೇಧದ ಪೂರ್ವದಲ್ಲಿಯೇ ಈ ದೇಶಗಳಿಗೆ ಭಾರತದಲ್ಲಿ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಕಳೆದ ಐದು ತಿಂಗಳುವರೆಗೆ ಸತತವಾಗಿ ಏರಿಕೆ ಕಂಡಿದೆ. ಇದೇ ವರ್ಷದ ಜನವರಿಯಲ್ಲಿ ಇದು 19 ಲಕ್ಷ ಟನ್ ತಲುಪಿದೆ. ಕಳೆದ 10 ತಿಂಗಳುಗಳಲ್ಲಿಯೇ ಇದು ಗರಿಷ್ಠ ಪ್ರಮಾಣದ ರಫ್ತು ಆಗಿದೆ.
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜನವರಿ ಅವಧಿಯಲ್ಲಿ ಭಾರತದ ಪೆಟ್ರೋಲಿಯಂ ಉತ್ಪನ್ನಗಳ ಒಟ್ಟು ರಫ್ತಿನ ಪೈಕಿ ಯುರೋಪ್ ಒಕ್ಕೂಟಕ್ಕೆ ರಫ್ತು ಮಾಡುವ ಪ್ರಮಾಣ ಶೇ. 15ಕ್ಕೆ ಏರಿಕೆಯಾಗಿ 7.9 ಕೋಟಿ ಟನ್​ಗಳಿಗೆ ತಲುಪಿದೆ. ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಇದು ಶೇ.12 ಹೆಚ್ಚಳವಾಗಿದೆ.
ಯೂಕ್ರೇನ್ ಮೇಲೆ ರಷ್ಯಾ ಆಕ್ರಮಣದ ನಂತರದ ದಿನಗಳಲ್ಲಿ ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿ ಪ್ರಮಾಣ ಹೆಚ್ಚಳ ಮಾಡಿದ್ದರ ಬಗ್ಗೆ ಪಾಶ್ಚಾತ್ಯ ರಾಷ್ಟ್ರಗಳು ಮೊದಮೊದಲು ಆಕ್ರೋಶ ವ್ಯಕ್ತಪಡಿಸಿದ್ದವು. ಆದರೆ, ನಂತರದ ದಿನಗಳಲ್ಲಿ ಭಾರತದಿಂದ ಸಂಸ್ಕರಿಸಿದ ತೈಲ ಉತ್ಪನ್ನಗಳ ಪೂರೈಕೆ ಆ ದೇಶಗಳಿಗೆ ಹೆಚ್ಚಳವಾಗತೊಡಗಿದ ಹಿನ್ನೆಲೆಯಲ್ಲಿ ಅವುಗಳ ಆಕ್ರೋಶ ತಣ್ಣಗಾಗತೊಡಗಿತು. ಏಕೆಂದರೆ, ಭಾರತದಂತಹ ದೇಶಗಳ ರಫ್ತಿನಿಂದಾಗಿ ಜಾಗತಿಕ ಮಾರುಕಟ್ಟೆ ಸಮತೋಲಿತವಾಗಿರುವಂತಾಗಿದೆ. ಕೊರತೆಯ ಕಾರಣದಿಂದ ಬೆಲೆ ಗಗನಮುಖಿಯಾಗುವ ಸಾಧ್ಯತೆ ತಗ್ಗಿದೆ. ಹೀಗಾಗಿ, ಅಮೆರಿಕ ಹಾಗೂ ಯುರೋಪ್ ಒಕ್ಕೂಟದ ರಾಷ್ಟ್ರಗಳು ತೈಲದ ವಿಷಯದಲ್ಲಿ ಭಾರತದ ವ್ಯಾಪಾರಿ ಧೋರಣೆ ಬಗೆಗೆ ಮೃದು ನಿಲುವು ತಳೆದು ಪರೋಕ್ಷವಾಗಿ ಬೆಂಬಲಿಸುತ್ತಿವೆ.
ಅಪಾರ ಸಾಮರ್ಥ್ಯ:ಭಾರತವು ವಾರ್ಷಿಕವಾಗಿ ಅಂದಾಜು 25 ಕೋಟಿ ಟನ್​ಗಳಷ್ಟು ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಕಚ್ಚಾ ತೈಲ ಖರೀದಿಸುವ ಪ್ರಮುಖ ಗ್ರಾಹಕನಾಗಿದ್ದರೂ ಸಂಸ್ಕರಣಾ ಸಾಮರ್ಥ್ಯ ದೇಶೀಯ ಬೇಡಿಕೆಗಿಂತ ಹೆಚ್ಚಾಗಿದೆ. ಹೀಗಾಗಿ, ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುವ ದೇಶವಾಗಿ ಭಾರತ ಹೊರಹೊಮ್ಮಿದೆ.
ಭಾರತೀಯ ಕಂಪನಿಗಳಿಗೆ ಲಾಭ:ಭಾರತೀಯ ಸಂಸ್ಕರಣಾಗಾರಗಳು, ವಿಶೇಷವಾಗಿ ರಫ್ತು- ಆಧಾರಿತ ಖಾಸಗಿ ವಲಯದ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರಾ ಎನರ್ಜಿ ಮುಂತಾದವು ರಷ್ಯಾದ ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸುತ್ತಿವೆ. ನಂತರ ಇಲ್ಲಿ ಸಂಸ್ಕರಿಸಿ ತೈಲೋತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಹೀಗಾಗಿ ಭರ್ಜರಿ ಲಾಭ ಮಾಡುತ್ತಿವೆ. ಯುರೋಪ್ ಒಕ್ಕೂಟದ ರಾಷ್ಟ್ರಗಳು ರಷ್ಯಾದಿಂದ ಕಚ್ಚಾ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ನೇರವಾಗಿ ಖರೀದಿಸದಿರುವ ನಿರ್ಣಯ ಕೈಗೊಂಡಿರುವುದರಿಂದ ಅನಿವಾರ್ಯವಾಗಿ ಭಾರತದ ಮೂಲಕ ಸಂಸ್ಕರಿಸಿದ ತೈಲ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಹೀಗಾಗಿ, ಜಾಗತಿಕ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಉತ್ಪನ್ನಗಳ ಪೂರೈಕೆ ನಕ್ಷೆಯಲ್ಲಿ ಭಾರತ ಈಗ ಪ್ರಮುಖ ಪಾತ್ರ ವಹಿಸುತ್ತಿದೆ.
ರಫ್ತು ಹೆಚ್ಚಳದ ಮಹತ್ವ:ಭಾರತದ ತೈಲ ಉತ್ಪನ್ನಗಳ ರಫ್ತು ಏರಿಕೆಯ ಪ್ರವೃತ್ತಿ ವಿವಿಧ ಆಯಾಮಗಳಲ್ಲಿ ಗಮನಾರ್ಹವಾಗಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೇಡಿಕೆ-ಪೂರೈಕೆ ಸಮತೋಲನ ಕಾಯ್ದುಕೊಳ್ಳಲು ಇದರಿಂದ ನೆರವಾಗಿದೆ. ಅಲ್ಲದೆ, ತೀವ್ರ ಪ್ರಮಾಣದಲ್ಲಿ ಬೆಲೆ ಏರಿಕೆಯಾಗುವುದನ್ನು ತಡೆದಿದೆ. ರಷ್ಯಾದಿಂದ ಕಚ್ಚಾ ಹಾಗೂ ಸಂಸ್ಕರಿಸಿದ ಇಂಧನ ಮತ್ತು ತೈಲ ಉತ್ಪನ್ನಗಳನ್ನು ಖರೀದಿಸಲು ಯುರೋಪ್ ಒಕ್ಕೂಟ ಬಯಸುವುದಿಲ್ಲ. ಸಾಕಷ್ಟು ತೈಲ ಸಂಸ್ಕರಣೆ ಸಾಮರ್ಥ್ಯ ಹೊಂದಿರುವ ಭಾರತದಂತಹ ದೇಶಗಳುಸಂಸ್ಕರಿಸಿದ ತೈಲವನ್ನು ರಫ್ತು ಮಾಡುವ ಮೂಲಕ ಇಂಧನ ಕೊರತೆ ತೀವ್ರವಾಗದಂತೆ ನೋಡಿಕೊಳ್ಳುವಲ್ಲಿ ಮಹತ್ವದ ಕಾಣಿಕೆ ನೀಡುತ್ತಿವೆ.
ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

ಹತ್ತನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ; ಫ್ರೆಂಡ್ ಜತೆ ಮಾತನಾಡುತ್ತಲೇ ಕುಸಿದು ಬಿದ್ದು ಸಾವು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + 18 =
Remember me
