ಜಾರ್ಖಂಡ್:ಈಶಾನ್ಯ ಭಾರತದಲ್ಲಿ ಆರಂಭಿಸಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನಾಯಿಗೆ ಹಾಕಿದ್ದ ಬಿಸ್ಕತ್ತನ್ನೇ ತೆಗೆದು ಕಾರ್ಯಕರ್ತನಿಗೆ ನೀಡಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಮತ್ತೆ ಗರ್ಭಿಣಿಯಾದ 19 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ‘ಈಕೆಯ ಬಾಳಲ್ಲಿ ಬಂದವರು ಒಬ್ಬರಲ್ಲ, ಇಬ್ಬರಲ್ಲ…’
ರಾಹುಲ್ ಗಾಂಧಿ ಅವರ ರೋಡ್​ ಶೋ ವೇಳೆ ಅವರ ಜತೆ ಒಂದು ನಾಯಿಯೂ ಇತ್ತು, ಅದಕ್ಕೆ ರಾಹುಲ್ ಗಾಂಧಿ ಬಿಸ್ಕತ್ತು ಹಾಕುತ್ತಿದ್ದರು, ಆದರೆ ಆ ನಾಯಿ ತಿನ್ನುತ್ತಿರಲಿಲ್ಲ, ಈ ವೇಳೆ ರಾಹುಲ್ ಅಲ್ಲೇ ಇದ್ದ ಪ್ಲೇಟ್ ಮೇಲೆ ಇಟ್ಟಿದ್ದಾರೆ ಇದೆ ವೇಳೆ ರಾಹುಲ್ ಬಳಿ ಮಾತನಾಡಲು ಕಾರ್ಯಕರ್ತನೊಬ್ಬ ಬಂದಿದ್ದಾನೆ ಆಗ ರಾಹುಲ್ ಗಾಂಧಿ ನಾಯಿಗೆ ಹಾಕಿದ ಬಿಸ್ಕಿಟ್ ಅನ್ನು ತೆಗೆದು ಕಾರ್ಯಕರ್ತನಿಗೆ ನೀಡಿದ್ದಾರೆ.
How shameless
First, Rahul Gandhi made@himantabiswaji eat biscuits 🍪 from same plate as his pet dog 🐕 Pidi
Then Congress President Khargeji compares party workers to dogs 🐕
& now, Shehzada gives a biscuit 🍪 rejected by a dog 🐕 to a party worker
This is the RESPECT…pic.twitter.com/hXZGwGa2Ks
— PallaviCT (@pallavict)February 5, 2024

ನಾಯಿಗೆ ನೀಡುವ ಬಿಸ್ಕಿಟ್ ಅನ್ನು ಕಾರ್ಯಕರ್ತನಿಗೆ ನೀಡಿರುವ ರಾಹುಲ್‌ ಕಾರ್ಯದ ವಿರುದ್ಧ ಬಿಜೆಪಿ ಕಿಡಿಕಾರಿದ್ದಾರೆ, ಕಾಂಗ್ರೆಸ್ ಪಕ್ಷದಲ್ಲಿ ನಾಯಕರು ತಮ್ಮ ಕಾರ್ಯಕರ್ತರನ್ನು ಯಾವ ರೀತಿ ನೋಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಎಂದು ಹೇಳಿದ್ದಾರೆ ಅಲ್ಲದೆ ಈ ಹಿಂದೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಕಾರ್ಯಕರ್ತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಇದು ಪಕ್ಷ ತಮ ಕಾರ್ಯಕರ್ತರಿಗೆ ಮಾಡಿರುವ ಅಪಮಾನ ಎಂದು ಆರೋಪಿಸಿದೆ.
ಎಕ್ಸ್​ನಲ್ಲಿ ಬಿಜೆಪಿ ಐಟಿ ಸೆಲ್​ನ ಅಮಿತ್ ಮಾಳವೀಯ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೂತ್ ಏಜೆಂಟರನ್ನು ನಾಯಿಗಳಿಗೆ ಹೋಲಿಸಿದ್ದರು. ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರು ತನ್ನ ಕಾರ್ಯಕರ್ತನನ್ನು ನಾಯಿಯಂತೆ ನಡೆಸಿಕೊಂಡರೆ ಅಂತಹ ಪಕ್ಷವು ಕಣ್ಮರೆಯಾಗುವುದು ಪಕ್ಕಾ ಎಂದು ಮಾಳವೀಯ ಬರೆದಿದ್ದಾರೆ.
ಈ ಘಟನೆ ವ್ಯಾಪಕ ಟೀಕೆಗೆ ಕಾರಣವಾಗಿದ್ದು, ಪಕ್ಷದ ಕಾರ್ಯಕರ್ತರನ್ನು ನಡೆಸಿಕೊಂಡ ವಿಚಾರವನ್ನು ಮುನ್ನೆಲೆಗೆ ತಂದಿದೆ. ಇದು ತನ್ನದೇ ಸದಸ್ಯರ ಬಗ್ಗೆ ನಾಯಕತ್ವದ ವರ್ತನೆ ಮತ್ತು ಅವರ ಕಡೆಗೆ ತೋರುವ ಗೌರವದ ಕೊರತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ.
ಪಲ್ಲವಿ ಅವರ ಟ್ವೀಟ್‌ಗೆ ಹಿಮಂತ ಬಿಸ್ವಾ ಶರ್ಮಾ ಕೂಡ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿ ಮಾತ್ರವಲ್ಲ, ಅವರ ಇಡೀ ಕುಟುಂಬವೂ ನನಗೆ ಆ ಬಿಸ್ಕತ್ತನ್ನು ತಿನ್ನಿಸಲು ಸಾಧ್ಯವಾಗಲಿಲ್ಲ. ನಾನು ಹೆಮ್ಮೆಯ ಅಸ್ಸಾಮಿ ಮತ್ತು ಭಾರತೀಯ. ನಾನು ಅದನ್ನು ತಿನ್ನಲು ನಿರಾಕರಿಸಿದೆ ಮತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.
ಡಿವೋರ್ಸ್ ವದಂತಿಗೆ ತೆರೆ ಎಳೆದ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 14 =
Remember me
